ಕರ್ನಾಟಕ

karnataka

ETV Bharat / entertainment

ಪತ್ನಿ ಬೇಬಿಬಂಪ್​ಗೆ ಮುತ್ತಿಟ್ಟ ವಸಿಷ್ಠ ಸಿಂಹ: ಸ್ಪೆಷಲ್​ ಫೋಟೋಶೂಟ್​ ಹಂಚಿಕೊಂಡ ನಟಿ ಹರಿಪ್ರಿಯಾ - HARIPRIYA BABY BUMP

ತಂದೆ ತಾಯಿಯಾಗುತ್ತಿರುವ ಜನಪ್ರಿಯ ತಾರಾ ದಂಪತಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ವಿಶೇಷ ಬೇಬಿಬಂಪ್​ ಫೋಟೋಶೂಟ್​ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

Haripriya - Vasishta Simha
ಹರಿಪ್ರಿಯಾ - ವಸಿಷ್ಠ ಸಿಂಹ (Photo: ETV Bharat)

By ETV Bharat Entertainment Team

Published : Nov 19, 2024, 2:03 PM IST

ಒಂದೇ ಕ್ಷೇತ್ರದಲ್ಲಿ ಗುರುತಿಸಿಕೊಂಡು, ಅದೇ ಕ್ಷೇತ್ರದಲ್ಲಿ ಬಾಳ ಸಂಗಾತಿಯನ್ನು ಆರಿಸಿ ಯಶಸ್ವಿ ವೈವಾಹಿಕ ಜೀವನ ನಡೆಸುತ್ತಿರುವ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಸಿನಿಮಾ ಕ್ಷೇತ್ರ ಕೂಡಾ ಇದರಿಂದ ಹೊರತಲ್ಲ. ಕನ್ನಡ ಚಿತ್ರರಂಗದಲ್ಲಿಯೂ ಪ್ರೀತಿಸಿ ಮದುವೆಯಾದ ಅನೇಕ ಜೋಡಿಗಳಿವೆ. ಆ ಪೈಕಿ, ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಕೂಡಾ ಓರ್ವರು. ಚಂದನವನದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ತಾರಾ ದಂಪತಿ ಶೀಘ್ರದಲ್ಲೇ ಪೋಷಕರಾಗಿ ಬಡ್ತಿ ಪಡೆಯಲಿದ್ದಾರೆ. ತಂದೆ ತಾಯಿಯಾಗುತ್ತಿರುವ ಜನಪ್ರಿಯ ನಟ ನಟಿ ವಿಶೇಷ ಫೋಟೋಶೂಟ್​ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಸ್ಯಾಂಡಲ್​ವುಡ್​​ ತಾರೆ ಹರಿಪ್ರಿಯಾ ತಮ್ಮ ಗರ್ಭಾವಸ್ಥೆಯ ದಿನಗಳನ್ನು ಆನಂದಿಸುತ್ತಿದ್ದಾರೆ. ಮುದ್ದಿನ ಮಡದಿಯ ಕಾಳಜಿಯಲ್ಲಿ ವಸಿಷ್ಠ ಸಿಂಹ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಪೋಷಕರಾಗಲಿರುವ ಲವ್​​​ಬರ್ಡ್ಸ್​​​ ವಿಶೇಷ ಬೇಬಿ ಬಂಪ್​ ಫೋಟೋಶೂಟ್​ ಮಾಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಬೇಬಿಬಂಪ್​ ಫೋಟೋಶೂಟ್​ಗೆ ಕನ್ನಡ ಹಬ್ಬದ ಸಲುವಾಗಿ.. ನಾವು ಎಂದು ತಾರಾ ದಂಪತಿ ಕ್ಯಾಪ್ಷನ್​ ನೀಡಿದ್ದಾರೆ. ಕೆಂಪು ಹಳದಿ ಉಡುಗೆಯಲ್ಲಿ ನಟ ನಟಿ ಮಿಂಚಿದ್ದಾರೆ. ವಸಿಷ್ಠ ಸಿಂಹ ಹಳದಿ ಬಣ್ಣದ ಶೇರ್ವಾನಿ ಧರಿಸಿದ್ದರೆ, ಹರಿಪ್ರಿಯಾ ರೆಡ್​​ ಟ್ರೆಡಿಶನಲ್​ ಔಟ್​ಫಿಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ಫೋಟೋಗಳುಳ್ಳ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಪತ್ನಿಯ ಬೇಬಿಬಂಪ್​ ಹಿಡಿದು ಪ್ರೀತಿ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕ್ಷಣದಲ್ಲಿ ಬೇಬಿಬಂಪ್​ಗೆ ಮುತ್ತಿಟ್ಟು ಮಗುವಿನ ಮೇಲೆ ಪ್ರೀತಿಯ ಧಾರೆಯೆದಿದ್ದಾರೆ. ಎಲ್ಲಾ ಫೋಟೋಗಳು ಪ್ರೀತಿಯ ಸಂಕೇತದಂತಿದ್ದು, ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿವೆ.

ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದ ಜೋಡಿ​:ನವೆಂಬರ್​ 1ರಂದು ತಾವು ಪೋಷಕರಾಗುತ್ತಿರುವ ವಿಚಾರವನ್ನು ಅಧಿಕೃತವಾಗಿ ಘೋಷಿಸಿದರು. ''ಪ್ರೀತಿಯ ಕನ್ನಡ ಮನಸ್ಸುಗಳಿಗೆ ಕರ್ನಾಟಕ ರಾಜ್ಯೋತ್ಸವದ ಹಾಗೂ ದೀಪಾವಳಿಯ ಶುಭಾಶಯಗಳು. ಈ ಶುಭ ದಿನದಂದು, ನಿಮ್ಮೆಲ್ಲರೊಡನೆ ಶುಭಸುದ್ದಿಯೊಂದನ್ನು ಹಂಚಿಕೊಳ್ಳುವಾಸೆ ನಮ್ಮದು. ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ. ಹೌದು, ನಾವು ನಮ್ಮ 'ಕುಡಿ'ಗಾಗಿ ಎದುರುನೋಡುತ್ತಿದ್ದೇವೆ. ನಿಮ್ಮೆಲ್ಲರ ಹಾರೈಕೆ- ಆಶೀರ್ವಾದಗಳ ನಿರೀಕ್ಷೆಯಲ್ಲಿ..'' ಎಂದು ಬರೆದುಕೊಂಡಿದ್ದರು. ಮಾಲ್ಡೀವ್ಸ್‌ ನಲ್ಲಿ ಕಳೆದ ಸುಂದರ ಕ್ಷಣಗಳನ್ನು ಹಂಚಿಕೊಂಡು ಸಿಹಿಸುದ್ದಿ ನೀಡಿದ್ದರು.

ಇದನ್ನೂ ಓದಿ:ಉಗ್ರಂ ಮಂಜುರನ್ನೇ ಮೌನಗೊಳಿಸಿದ ಶೋಭಿತಾ ಶೆಟ್ಟಿ: ಗಂಭೀರ ಸನ್ನಿವೇಶದಲ್ಲೂ ನಸುನಕ್ಕ ಹನುಮಂತ-ಧನರಾಜ್​

ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕಳೆದ ವರ್ಷ ದಾಂಪತ್ಯ ಜೀವನ ಶುರು ಮಾಡಿದ್ದಾರೆ. ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಪ್ರೇಮಪಕ್ಷಿಗಳು ಎಲ್ಲಿಯೂ ತಮ್ಮ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಮದುವೆಗೆ ಇನ್ನೇನು ಕೆಲ ದಿನಗಳಿವೆ ಎನ್ನುವಾಗ ಸುದ್ದಿ ಹೊರಬಿತ್ತು. 2023ರ ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದರು. ಸಮಾರಂಭಕ್ಕೆ ಕುಟುಂಬಸ್ಥರು, ಆಪ್ತರು ಸಾಕ್ಷಿಯಾಗಿದ್ದರು.

ಇದನ್ನೂ ಓದಿ:ಸಿನಿಮಾ ಅರ್ಧಕ್ಕೆ ಸ್ಥಗಿತಗೊಳಿಸಿದ ನಿರ್ದೇಶಕನ ಬೆದರಿಸಲು ಏರ್ ಫೈರ್: ನಟ ತಾಂಡವ್ ರಾಮ್ ಬಂಧನ

ABOUT THE AUTHOR

...view details