ಕರ್ನಾಟಕ

karnataka

ETV Bharat / entertainment

15 ರೂ. ಸೀರೆಯುಟ್ಟು ಬಂದ 'ದಿ ಕೇರಳ ಸ್ಟೋರಿ' ನಟಿ ಅದಾ ಶರ್ಮಾ; ವಿಡಿಯೋ - Adah Sharma 15rs Saree - ADAH SHARMA 15RS SAREE

ನಟಿ ಅದಾ ಶರ್ಮಾ ಅವರ ವಿಡಿಯೋವೊಂದು ಸಖತ್​ ವೈರಲ್​ ಆಗುತ್ತಿದೆ. ಅದರಲ್ಲಿ ತನ್ನ ಈ ಸೀರೆ ಬೆಲೆ ಕೇವಲ 15 ರೂಪಾಯಿ ಎಂದು ಸ್ವತಃ ನಟಿಯೇ ತಿಳಿಸಿದ್ದಾರೆ.

Actress Adah Sharma
ನಟಿ ಅದಾ ಶರ್ಮಾ

By ETV Bharat Karnataka Team

Published : Apr 3, 2024, 1:59 PM IST

ಅದಾ ಶರ್ಮಾ, ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಜನಪ್ರಿಯ ನಟಿ. ಸಾಧಾರಣ ಚಿತ್ರಗಳಿಂದ ಹಿಡಿದು, ಸೂಪರ್ ಹಿಟ್​​ ಸಿನಿಮಾಗಳು ನಟಿಯ ಲಿಸ್ಟ್​​ನಲ್ಲಿದೆ. ಗ್ಲ್ಯಾಮರ್‌ನಿಂದಲೂ ಗಮನ ಸೆಳೆಯುವ ತಾರೆ. ಬಹುಭಾಷೆಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ಬಾಲಿವುಡ್​ ಏರಿಯಾದಲ್ಲಿ ತಂಗಿದ್ದಾರೆ. ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವ ನಟಿ ಲೇಡಿ ಓರಿಯೆಂಟೆಡ್ ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿಜೀವನವನ್ನು ಮುನ್ನಡೆಸುತ್ತಿದ್ದಾರೆ. ಕಳೆದ ವರ್ಷ ತೆರೆಕಂಡು ಯಶಸ್ವಿಯಾಗಿರುವ 'ದಿ ಕೇರಳ ಸ್ಟೋರಿ' ಸಿನಿಮಾ ಮೂಲಕ ಭಾರತದಾದ್ಯಂತ ಜನಪ್ರಿಯರಾದರು.

ನಾಯಕಿಯರು ಮಾಡರ್ನ್ ಕಾಸ್ಟ್ಯೂಮ್​​ನಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಒಮ್ಮೆ ತೊಟ್ಟ ಉಡುಗೆ ಮತ್ತೊಮ್ಮೆ ತೊಡುವುದು ತೀರಾ ಅಪರೂಪ. ತಮ್ಮದೇ ಆದ ಕಾಸ್ಟ್ಯೂಮ್​​ ಡಿಸೈನರ್​ಗಳನ್ನು ಹೊಂದಿರುತ್ತಾರೆ. ಅವರಿಗೆ ಪಾವತಿಸುವ ಶುಲ್ಕ ಕೂಡ ದೊಡ್ಡ ಮಟ್ಟದಲ್ಲೇ ಇರುತ್ತದೆ. ಹೆಚ್ಚಾಗಿ ಮಾರ್ಡನ್​ ಡ್ರೆಸ್​ನಲ್ಲಿ, ಕೆಲವೊಮ್ಮೆ ಸಾಂಪ್ರದಾಯಿಕವಾಗಿಯೂ ಕಾಣಿಸಿಕೊಳ್ಳುತ್ತಾರೆ. ನಟಿಮಣಿಯರ ಡ್ರೆಸ್ಸಿಂಗ್ ಶೈಲಿ ಕೂಡ ತನ್ನದೇ ಆದ ಫ್ಯಾನ್​ ಫಾಲೋವಿಂಗ್​ ಹೊಂದಿರುತ್ತದೆ. ಅಭಿಮಾನಿಗಳ, ನೆಟ್ಟಿಗರ ಗಮನ ಅವರ ಮೇಲೆ ಇರುತ್ತವೆ. ಪಾಪ್ಯುಲರ್ ನಟಿಮಣಿಯರು ತೊಟ್ಟ ಔಟ್​ಫಿಟ್​ ಕೆಲ ಕಾಲಗಳವರೆಗೆ ಟ್ರೆಂಡಿಂಗ್​ನಲ್ಲಿರುತ್ತದೆ. ಡ್ರೆಸ್​ ಜೊತೆ, ಹೇರ್​ಸ್ಟೈಲ್​, ಹ್ಯಾಂಡ್​ ಬ್ಯಾಗ್​, ಸ್ಯಾಂಡಲ್ಸ್, ಜ್ಯುವೆಲರಿಗಳೂ ಕೂಡ ನೆಟಿಜನ್ಸ್ ಗಮನ ಸೆಳೆಯೋದುಂಟು. ಇದೀಗ ಈ ವಿಚಾರದಲ್ಲಿ 'ದಿ ಕೇರಳ ಸ್ಟೋರಿ' ನಟಿ ಅದಾ ಶರ್ಮಾ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:ಇಂಡಿಯನ್​ ಮೈಕಲ್​​ ಜಾಕ್ಸನ್​​​ ಪ್ರಭುದೇವ ಜನ್ಮದಿನ: 'GOAT' ಪೋಸ್ಟರ್ ಅನಾವರಣ - Prabhu Deva GOAT poster

ಅದಾ ಶರ್ಮಾ ಸೌಂದರ್ಯದಿಂದಲೂ ಗಮನ ಸೆಳೆಯುವ ತಾರೆ. ಈ ಬಾರಿ ಸಖತ್​ ಸಿಂಪಲ್ ಸೀರೆಯಲ್ಲೂ ಬಹಳ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಸೀರೆಗಿಂತ ಅದರ ಬೆಲೆ ನೆಟ್ಟಿಗರ ಹುಬ್ಬೇರಿಸಿದೆ. ಟ್ರೆಂಡಿ ಡಿಸೈನ್​ನ ಬ್ಲೌಸ್​​ನೊಂದಿಗೆ ತಿಳಿ ಕೇಸರಿ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿರುವ ಅದಾ ಶರ್ಮಾ ಸ್ವತಃ ತಮ್ಮ ಸೀರೆ ಬೆಲೆ ತಿಳಿಸಿ ಎಲ್ಲರ ಆಶ್ಚರ್ಯಕ್ಕೆ ಕಾರಣರಾಗಿದ್ದಾರೆ.

ಇದನ್ನೂ ಓದಿ:ಸೆಟ್ಟೇರಿತು 'ರಾಮಾಯಣ': ಯಶ್, ರಣ್​ಬೀರ್, ಸಾಯಿಪಲ್ಲವಿ ಸಿನಿಮಾ ಮೇಲೆ ಭಾರಿ ನಿರೀಕ್ಷೆ - Ramayana

ಎಂದಿನಂತೆ ಅದಾ ಶರ್ಮಾ ಕಂಡೊಂಡನೆ ಪಾಪರಾಜಿಗಳು ತಮ್ಮ ಕ್ಯಾಮರಾ ಹಿಡಿದು ನಟಿಯನ್ನು ಸುತ್ತುವರೆದರು. ನಟಿ ಕೂಡ ಕ್ಯಾಮರಾಗಳಿಗೆ ಪೋಸ್ ಕೊಟ್ಟಿದ್ದಾರೆ. ಈ ವೇಳೆ, ನಟಿ ಬಳಿ ಓರ್ವರು ಸೀರೆ ಬೆಲೆ ಕೇಳಿದ್ದಾರೆ. ನಟಿ ಕೂಡ ಸೀರೆಯ ನೈಜ ಬೆಲೆ ತಿಳಿಸಿದ್ದಾರೆ. ಬೆಲೆ ಕೇಳಿ ಉಳಿದವರು ಬೆಚ್ಚಿಬಿದ್ದಿದ್ದಾರೆ. ಈ ಸೀರೆ ಬೆಲೆ ಕೇವಲ 15 ರೂಪಾಯಿ. ನಂಬಲು ಸಾಧ್ಯವಾಗದಿದ್ದರೂ ಇದು ಸತ್ಯ ಎನ್ನುತ್ತಾರೆ ಅದಾ ಶರ್ಮಾ. ಬಹಳ ವರ್ಷಗಳ ಹಿಂದೆ ಖರೀದಿಸಿರುವುದು. ನನ್ನ ಅಜ್ಜಿಯ ಸೀರೆ. ಆ ಕಾಲದಲ್ಲಿ ಕೇವಲ 15 ರೂಪಾಯಿ ಇತ್ತು. ಬಹಳ ಹಿಂದಿನದ್ದು ಎಂದು ತಿಳಿಸಿದ್ದಾರೆ. ಅಜ್ಜಿ ಕೊಟ್ಟ ಸೀರೆಯ ಬ್ಲೌಸ್​ ಅನ್ನು ಈ ಕಾಲಕ್ಕೆ ತಕ್ಕಂತೆ ಬಹಳ ಟ್ರೆಂಡಿಯಾಗಿ ಹೊಲಿಸಿದ್ದಾರೆ. ಅದಾ ಶರ್ಮಾ ಅವರ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ABOUT THE AUTHOR

...view details