ಸ್ಟಾರ್ ಸೆಲೆಬ್ರಿಟಿಗಳು ಸದಾ ಲೈಮ್ಲೈಟ್ನಲ್ಲಿರುತ್ತಾರೆ. ಕಲಾವಿದರ ಪ್ರತೀ ನಡೆನುಡಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತದೆ. ಈ ಮೂಲಕ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾರೆ. ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಪವರ್ಫುಲ್ ಕಪಲ್ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ತಮ್ಮ ವೈಯಕ್ತಿಕ ಜೀವನದ ಬಗೆಗಿನ ವದಂತಿಗಳಿಗೆ ಒಂದೇ ಒಂದು ಮಾತಿಲ್ಲದೇ ಅಂತ್ಯವಿರಾಮ ಇಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ವರ್ಷ ಅಂಬಾನಿ ಅದ್ಧೂರಿ ಮದುವೆ ಸಮಾರಂಭದಲ್ಲಿ ಐಶ್ವರ್ಯಾ ರೈ ಬಚ್ಚನ್ ಕುಟುಂಬದೊಂದಿಗೆ ಕಾಣಿಸಿಕೊಳ್ಳದ ಹಿನ್ನೆಲೆ ಅವರ ಸಂಬಂಧದದಲ್ಲಿ ಬಿರುಕು ಮೂಡಿದೆ ಎಂದು ವದಂತಿಗಳು ಹರಡಲು ಶುರುವಾಯಿತು. ನಂತರ ಒಂದಿಷ್ಟು ಸಮಯ ಐಶ್ ಅಭಿ ಜೊತೆಯಾಗಿ ಕಾಣಿಸಿಕೊಳ್ಳಲಿಲ್ಲ. ಈ ಹಿನ್ನೆಲೆ ಊಹಾಪೋಹ ಹುಟ್ಟಿಕೊಂಡಿತು. ಆದ್ರೆ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಆ ವದಂತಿಗಳಳಿಗೆ ಪರೋಕ್ಷವಾಗಿ ಫುಲ್ ಸ್ಟಾಪ್ ಇಟ್ಟಿದ್ದರು. ಅವರ ನಡೆ ಸಂಬಂಧ ಬಲವಾಗಿದೆ ಎಂಬುದನ್ನು ಒತ್ತಿ ಹೇಳಿದೆ. ಮಾತುಗಳ ಮೂಲಕ ಪ್ರತಿಕ್ರಿಯಿಸುವ ಬದಲು, ದಂಪತಿ ತಮ್ಮ ನಡೆಯೇ ನುಡಿಯಾಗಲು ಅವಕಾಶ ಮಾಡಿಕೊಡುತ್ತಿದ್ದಾರೆ. ಇಲ್ಲಸಲ್ಲದ ಗಾಸಿಪ್ಗಳನ್ನು ಜೊತೆಯಾಗಿ, ಪ್ರಬುದ್ಧವಾಗಿ ಕಾಣಿಸಿಕೊಳ್ಳುವ ಮೂಲಕ ಮೌನಗೊಳಿಸುತ್ತಿದ್ದಾರೆ.
ಜೊತೆಯಾಗಿ ಕಾಣಿಸಿಕೊಂಡ ಅಭಿಷೇಕ್ ಐಶ್ವರ್ಯಾ (Video: ANI) ಇದನ್ನೂ ಓದಿ:ಟಾಕ್ಸಿಕ್, ಕಾಂತಾರ 2, ಸಂಜು ವೆಡ್ಸ್ ಗೀತಾ 2..: 2025ರಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರಗಳಿವು
ಅಂಬಾನಿ ಕುಟುಂಬದ ಅದ್ಧೂರಿ ವಿವಾಹ ಸಮಾರಂಭಕ್ಕೆ ಐಶ್ವರ್ಯಾ ಮತ್ತು ಅಭಿಷೇಕ್ ಪ್ರತ್ಯೇಕವಾಗಿ ಪ್ರವೇಶಿಸಿದರೂ, ಈವೆಂಟ್ನಲ್ಲಿ ಒಟ್ಟಿಗೆ ಸಮಯ ಕಳೆದಿರುವ ಫೋಟೋ ವಿಡಿಯೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಾಗ ಅಭಿಮಾನಿಗಳಲ್ಲಿ ಭರವಸೆ ಮೂಡಿತು. ಅವರ ನಡೆಯು ಜೋಡಿ ಪತ್ಯೇಕವಾಗಲಿದ್ದಾರಾ? ಎಂಬ ವದಂತಿಗಳಿಗೆ ವಿರುದ್ಧ ಎನ್ನುವಂತಿತ್ತು. ನಂತರ, ತಾರಾ ದಂಪತಿ ತಮ್ಮ ಮಗಳು ಆರಾಧ್ಯ ಅವರ ವಾರ್ಷಿಕ ಶಾಲಾ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಗಾಸಿಪ್ಗೆ ತೆರೆ ಎಳೆದರು. ಒಂದೇ ಒಂದು ಮಾತಿಲ್ಲದೇ ಊಹಾಪೋಹಗಳಿಗೆ ಪೂರ್ಣ ವಿರಾಮ ಇಡೋದಂದ್ರೆ ಬಹುಶಃ ಇದೇ ಇರಬಹುದು. ನಡೆಯೇ ನುಡಿಯಾಗಲು ಅವಕಾಶ ಮಾಡಿಕೊಟ್ಟ ಐಶ್ವರ್ಯಾ, ಅಭಿಷೇಕ್ ಮೇಲೆ ಅಪಾರ ಸಂಖ್ಯೆಯ ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ಇದನ್ನೂ ಓದಿ:ಸಂಧ್ಯಾ ಥಿಯೇಟರ್ ಪ್ರಕರಣ: ನಟ ಅಲ್ಲು ಅರ್ಜುನ್ಗೆ ಜಾಮೀನು ಮಂಜೂರು
ಶಾಲಾ ಕಾರ್ಯಕ್ರಮದ ಕೆಲವೇ ದಿನಗಳ ನಂತರ, ಸೆಲೆಬ್ರಿಟಿ ಕಪಲ್ ತಮ್ಮ ಮಗಳೊಂದಿಗೆ ಹೊಸ ವರ್ಷಾ ಆಚರಿಸಿದ್ದಾರೆ. ವಿದೇಶ ಪ್ರವಾಸದಿಂದ ಇಂದು ಮುಂಜಾನೆ ಮುಂಬೈಗೆ ಹಿಂದಿರುಗಿದ್ದು, ಬಚ್ಚನ್ ಫ್ಯಾಮಿಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದೆ. ಬೂದು ಬಣ್ಣದ ಹೂಡಿಯಲ್ಲಿ ನಟ ಅಭಿಷೇಕ್ ಬಚ್ಚನ್ ಕೂಲ್ ಲುಕ್ ಕೊಟ್ರೆ, ಐಶ್ವರ್ಯಾ ಸೊಗಸಾದ ಬ್ಲ್ಯಾಕ್ ಔಟ್ಫಿಟ್ನಲ್ಲಿ ಎಂದಿನಂತೆ ತಮ್ಮ ಸೌಂದರ್ಯ ಸಾಬೀತುಪಡಿಸಿದ್ದು, ಮೇಡ್ ಫರ್ ಈಚ್ ಅದರ್ ಎಂಬ ಕಾಮೆಂಟ್ಸ್ ಸ್ವೀಕರಿಸಿದ್ದಾರೆ. ಇನ್ನು, ಮುದ್ದು ಮಗಳು ಆರಾಧ್ಯ ಎಂದಿನಂತೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಏರ್ಪೋರ್ಟ್ ಫೋಟೋ ವಿಡಿಯೋಗಳು ವ್ಯಾಪಕವಾಗಿ ವೈರಲ್ ಆಗಿವೆ.