ಕರ್ನಾಟಕ

karnataka

ETV Bharat / entertainment

'ಚಿತ್ರರಂಗಕ್ಕೆ ಕಾಶೀನಾಥ್ ಕೊಡುಗೆ ಅಪಾರ': ಪುತ್ರ ಅಭಿಮನ್ಯು ಸಿನಿಮಾಗೆ ಸುದೀಪ್​ ಸಪೋರ್ಟ್ - ELLIGE PAYANA YAVUDO DAARI TRAILER

ದಿ. ಕಾಶೀನಾಥ್ ಅವರ ಪುತ್ರ ಅಭಿಮನ್ಯು ಕಾಶೀನಾಥ್ ಅಭಿನಯಿಸಿರುವ ''ಎಲ್ಲಿಗೆ ಪಯಣ ಯಾವುದೋ ದಾರಿ'' ಸಿನಿಮಾದ ಟ್ರೇಲರ್​ ಅನ್ನು ಕಿಚ್ಚ ಸುದೀಪ್​ ಅನಾವರಣಗೊಳಿಸಿದ್ದಾರೆ.

Ellige Payana Yavudo Daari Trailer Release Event
ಎಲ್ಲಿಗೆ ಪಯಣ ಯಾವುದೋ ದಾರಿ ಟ್ರೇಲರ್​ ರಿಲೀಸ್​ ಈವೆಂಟ್​ (Photo source: ETV Bharat)

By ETV Bharat Entertainment Team

Published : Oct 16, 2024, 10:06 AM IST

ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಟ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ದಿ. ಕಾಶೀನಾಥ್ ಅವರ ಪುತ್ರ ಅಭಿಮನ್ಯು ಕಾಶೀನಾಥ್ ಅಭಿನಯಿಸಿರುವ ''ಎಲ್ಲಿಗೆ ಪಯಣ ಯಾವುದೋ ದಾರಿ'' ಸಿನಿಮಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಪೋರ್ಟ್ ಸಿಕ್ಕಿದೆ. ಬಿಡುಗಡೆಗೆ ಸಜ್ಜಾಗಿರುವ ಚಿತ್ರದ ಟ್ರೇಲರ್​ ಅನ್ನು ಕಿಚ್ಚ ಸುದೀಪ್ ಅನಾವರಣಗೊಳಿಸಿದ್ದಾರೆ. ಬಿಗ್ ಬಾಸ್ ಶೋ ಹಾಗೂ ಸಿನಿಮಾಗಳ ಒತ್ತಡಗಳ ನಡುವೆಯೂ ಸುದೀಪ್ ಅವರು ಕಾಶೀನಾಥ್ ಮಗನ ಸಿನಿಮಾಗೆ ಸಾಥ್ ನೀಡಿ, ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಕಿಚ್ಚ ಸುದೀಪ್, ಕನ್ನಡ ಚಿತ್ರರಂಗ ಎಂದಿಗೂ ಕಾಶೀನಾಥ್ ಅವರ ಕೊಡುಗೆಗಳನ್ನು, ಅವರಿಂದಾದ ಒಳಿತುಗಳನ್ನು ಮರೆಯಲು ಸಾಧ್ಯವಿಲ್ಲ. ಅದರ ಮುಂದೆ ಅಭಿಮನ್ಯು ಅವರಿಗೆ ನಾವು ಕೊಡುತ್ತಿರುವ ಬೆಂಬಲ ತೀರಾ ಚಿಕ್ಕದು ಎಂದು ತಿಳಿಸಿದರು. ಜೊತೆಗೆ, ಈ ಟ್ರೇಲರ್​​ನಲ್ಲಿ ಅಭಿಮನ್ಯು ಕಾಣಿಸಿಕೊಂಡಿರುವ ರೀತಿಯನ್ನೂ ಮೆಚ್ಚಿಕೊಂಡಿದ್ದಾರೆ. ಟ್ರೇಲರ್​​ ಭರವಸೆ ಮೂಡಿಸಿದೆ ಎನ್ನುತ್ತಲೇ ನಿರ್ದೇಶಕ ಕಿರಣ್ ಎಸ್ ಸೂರ್ಯ ಹಾಗೂ ತಂಡದ ಪರಿಶ್ರಮಕ್ಕೂ ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಖುದ್ದು ತಾವೇ ಈ ಸಿನಿಮಾಕ್ಕಾಗಿ ಹಾಡಿರುವ ಹಾಡಿನ ಕುರಿತೂ ಮಾತಾಡಿದ್ದಾರೆ. ಆದ್ರೆ ಈ ವೇದಿಕೆಯಲ್ಲಿ ಬಿಗ್ ಬಾಸ್ ವಿಚಾರದ ಬಗ್ಗೆ ಒಂದು ಮಾತು ಕೂಡಾ ಆಡದೇ ಸುದೀಪ್ ತೆರಳಿದರು.

ಎಲ್ಲಿಗೆ ಪಯಣ ಯಾವುದೋ ದಾರಿ ಟ್ರೇಲರ್​ ರಿಲೀಸ್​ ಈವೆಂಟ್​ (Photo source: ETV Bharat)

ನಂತರ ಮಾತಾಡಿದ ನಟ ಅಭಿಮನ್ಯು, ಆರಂಭಿಕವಾಗಿ ಈ ಸಿನಿಮಾ ಸಾಗಿ ಬಂದ ರೀತಿಯ ಬಗ್ಗೆ ಸವಿವರವಾಗಿ ತಿಳಿಸಿದರು. ನಿರ್ದೇಶಕರ ಸೂಕ್ಷ್ಮವಂತಿಕೆಯನ್ನು ಮೆಚ್ಚಿಕೊಳ್ಳುತ್ತಲೇ, ಆರಂಭದಲ್ಲಿ ಕಥಾ ಎಳೆ ಹೇಳಿದಂತೆಯೇ ಚೆಂದವಾಗಿ ಈ ಸಿನಿಮಾವನ್ನು ರೂಪಿಸಿದ್ದಾರೆಂಬ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೇ ಹಂತದಲ್ಲಿ ಸಿನಿಮಾದ ಕೆಲ ಪಾತ್ರಗಳ ಚಹರೆಗಳನ್ನು ಪ್ರೇಕ್ಷಕರಿಗೆ ದಾಟಿಸಿದ್ದಾರೆ.

ಸುದರ್ಶನ ಆರ್ಟ್ಸ್ ಬ್ಯಾನರ್​ ಅಡಿ ಈ ಚಿತ್ರವನ್ನು ಜತಿನ್ ಪಟೇಲ್ ನಿರ್ಮಾಣ ಮಾಡಿದ್ದಾರೆ. ಅವರು ಈ ಸಿನಿಮಾ ನಿರ್ಮಾಣದ ಅನುಭವಗಳ ಬಗ್ಗೆ ಮಾತಾಡುತ್ತಲೇ, ಇಂಥ ಚೆಂದದ ಚಿತ್ರ ಮಾಡಲು ಸಾಥ್ ಕೊಟ್ಟವರನ್ನೆಲ್ಲ ಸ್ಮರಿಸಿದರು.

ಇದನ್ನೂ ಓದಿ:ದೀಪಾವಳಿಗೆ 'ಬಘೀರ'ನ ಅಬ್ಬರ ಶುರು: 'ಕೆಜಿಎಫ್​' ಪ್ರಶಾಂತ್‌ ನೀಲ್‌ ಕಥೆಯ ಸಿನಿಮಾವಿದು; ನಾಳೆ ಫಸ್ಟ್ ಸಾಂಗ್​ ರಿಲೀಸ್​

ಅಭಿಮನ್ಯು ಕಾಶೀನಾಥ್ ಜೋಡಿಯಾಗಿ ಸ್ಫೂರ್ತಿ ಉಡಿಮನೆ ಅಭಿನಯಿಸಿದ್ದಾರೆ. ಇವರ ಜೊತೆ ವಿಜಯಶ್ರೀ ಕಲಬುರ್ಗಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸಿನಿಮಾದಲ್ಲಿ ಬಲ ರಾಜವಾಡಿ, ಶೋಭನ್, ಅಯಾಂಕ್, ರಿನಿ ಬೋಪಣ್ಣ, ಪ್ರದೀಪ್, ರವಿತೇಜ, ಕಿಶೋರ್, ಅಶ್ವಿನಿ ರಾವ್, ಪ್ರಿಯಾ ಮುಂತಾದವರ ತಾರಾಗಣವಿದೆ.

ಇದನ್ನೂ ಓದಿ:ಬಿಗ್​ ಬಾಸ್​​ ಶೋನಲ್ಲಿ ಜಗದೀಶ್ ಅಶ್ಲೀಲ ಪದ ಬಳಕೆ: 'ಎಲ್ಲವೂ ಗಮನದಲ್ಲಿದೆ' - ಈ ವಾರವಾದ್ರೂ ಸೀರಿಯಸ್​​ ಕ್ಲಾಸ್​ ಕೊಡ್ತಾರಾ ಕಿಚ್ಚ

ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೊಂದಿಗೆ ಕಿರಣ್ ಎಸ್ ಸೂರ್ಯ ನಿರ್ದೇಶನ ಮಾಡಿದ್ದಾರೆ. ಪ್ರಣವ್ ರಾವ್ ಸಂಗೀತ ನಿರ್ದೇಶನ, ಸತ್ಯ ರಾಮ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಮೋದ್ ಮರವಂತೆ ಅವರ ಸಾಹಿತ್ಯವಿದೆ. ಅಂದಹಾಗೆ ಈ ಚಿತ್ರ ಇದೇ ಅಕ್ಟೋಬರ್ 25ರಂದು ಪ್ರೇಕ್ಷಕರ ಮುಂದೆ ಬರಲಿದೆ.

ABOUT THE AUTHOR

...view details