ಮಾಸ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಅಭಿನಯಿಸಿರುವ ಅನೀಶ್ ತೇಜೇಶ್ವರ್ 'ಆರಾಮ್ ಅರವಿಂದ ಸ್ವಾಮಿ' ಚಿತ್ರದ ಮೂಲಕ ರೋಮ್ಯಾಂಟಿಕ್ ಹೀರೋ ಆಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಆರಂಭದಿಂದಲೂ ವಿಭಿನ್ನ ಪ್ರಚಾರದ ಮೂಲಕ ಪ್ರೇಕ್ಷಕರನ್ನು ಗಮನ ಸೆಳೆಯುತ್ತಿರುವ ಚಿತ್ರತಂಡ, ಈಗ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಆರಾಮ್ ಅರವಿಂದ ಸ್ವಾಮಿ ಸಿನಿಮಾ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದು, ಚಿತ್ರದ ಟೈಟಲ್ನಿಂದ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿದೆ.
ಟೈಟಲ್ ಟ್ರ್ಯಾಕ್ನಲ್ಲಿ ಜಬರ್ದಸ್ತ್ ಡ್ಯಾನ್ಸ್ ಮಾಡಿದ್ದ ಅನೀಶ್ ತೇಜೇಶ್ವರ್, ಈಗ ಮುಂದೆ ಹೇಗೋ ಏನೋ ಎನ್ನುತ್ತಾ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಅನೀಶ್‌ಗೆ ಮಿಲನಾ ನಾಗರಾಜ್ ಸಾಥ್ ಕೊಟ್ಟಿದ್ದು, ಮಲ್ಲು ಕುಟ್ಟಿಯಾಗಿ ಮಿಂಚಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯದ ಮೆಲೋಡಿ ಹಾಡಿಗೆ ನಿಹಾಲ್ ಟೌರೊ ಧ್ವನಿಯಾಗಿದ್ದಾರೆ. ಮ್ಯಾಜಿಕಲ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯರ ಕೈಚಳಕ ಹಾಡಿನ ಶ್ರೀಮಂತಿಕೆ ಹೆಚ್ಚಿಸಿದೆ.
ಇದನ್ನೂ ಓದಿ:ರಾಜಕೀಯದಿಂದ ನನ್ನ ಹೆಸರನ್ನು ದೂರವಿಡಿ: ಕೊಂಡಾ ಸುರೇಖಾ ಹೇಳಿಕೆಗೆ ಸಮಂತಾ ಪ್ರತಿಕ್ರಿಯೆ - Samantha Reacts To Konda Comments
'ನಮ್ ಗಣಿ ಬಿಕಾಂ ಪಾಸ್', 'ಗಜಾನನ ಅಂಡ್ ಗ್ಯಾಂಗ್' ಅಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಅಭಿಷೇಕ್ ಶೆಟ್ಟಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇಲ್ಲಿ ಅನೀಶ್‌ಗೆ ಮಿಲನಾ ನಾಗರಾಜ್ ಹಾಗೂ ಹೃತಿಕಾ ಶ್ರೀನಿವಾಸ್ ನಾಯಕಿಯರು. 'ಅಕಿರ' ಸಿನಿಮಾ ನಿರ್ಮಿಸಿದ್ದ ಶ್ರೀಕಾಂತ್ ಪ್ರಸನ್ನ ಹಾಗೂ 'ಗುಳ್ಟು' ಸಿನಿಮಾ ನಿರ್ಮಾಪಕ ಪ್ರಶಾಂತ್ ರೆಡ್ಡಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ವೈವಿಬಿ ಶಿವಸಾಗರ್ ಛಾಯಾಗ್ರಹಣ, ಉಮೇಶ್ ಆರ್.ಬಿ.ಸಂಕಲನ ಈ ಸಿನಿಮಾಗಿದೆ. ಪ್ರಚಾರದ ಪಡಸಾಲೆಗೆ ಇಳಿದಿರುವ ಚಿತ್ರತಂಡ ಭರದಿಂದ ತಯಾರಿ ನಡೆಸುತ್ತಿದ್ದು, ಸಿನಿಮಾವು ನವೆಂಬರ್ 22ಕ್ಕೆ ತೆರೆಗೆ ಬರುತ್ತಿದೆ.
'ಆರಾಮ್ ಅರವಿಂದ ಸ್ವಾಮಿ' ಚಿತ್ರದ ದೃಶ್ಯ (Movie Team) ಇದನ್ನೂ ಓದಿ:ಹಾರರ್ ಸಿನಿಮಾ ನೋಡೋದು ಇಷ್ಟ, ಆದರೆ ದೆವ್ವ ಅಂದಾಗ ಭಯ ಶುರುವಾಗುತ್ತೆ: ರಾಧಿಕಾ ಕುಮಾರಸ್ವಾಮಿ - Bhairadevi