ಕರ್ನಾಟಕ

karnataka

ETV Bharat / entertainment

ನಾಳೆ ಹೊರಬೀಳಲಿದೆ ವರುಣ್ ಧವನ್-ಕೀರ್ತಿ ಸುರೇಶ್​ ಸಿನಿಮಾದ 'ಬಿಗ್​ ಅಪ್ಡೇಟ್' - ಅಟ್ಲೀ

'ವಿಡಿ 18' ಸಿನಿಮಾಗೆ ಸಂಬಂಧಿಸಿದಂತೆ ಬಿಗ್​ ಅಪ್ಡೇಟ್ ಒಂದು ನಾಳೆ ಹೊರಬೀಳಲಿದೆ.

VD18 movie
'ವಿಡಿ 18'

By ETV Bharat Karnataka Team

Published : Feb 4, 2024, 6:09 PM IST

ಜವಾನ್​​ ಡೈರೆಕ್ಟರ್​​ ಅಟ್ಲೀ ಬೆಂಬಲವಿರುವ ವರುಣ್ ಧವನ್ ಮತ್ತು ಕೀರ್ತಿ ಸುರೇಶ್​ ನಟನೆಯ ಸಿನಿಮಾಗೆ ತಾತ್ಕಾಲಿಕವಾಗಿ 'ವಿಡಿ 18' ಎಂದು ಹೆಸರಿಡಲಾಗಿದೆ. 2023ರ ಆಗಸ್ಟ್​​ನಲ್ಲಿ ಸಿನಿಮಾ ಕೆಲಸ ಆರಂಭವಾಗಿದ್ದು, ಅಂದಿನಿಂದಲೂ ಸಖತ್​ ಸದ್ದು ಮಾಡುತ್ತಿದೆ. ನಾಯಕ ನಟ ಸಿನಿಮಾಗೆ ಸಂಬಂಧಿಸಿದಂತೆ ನಾಳೆ ಅಪ್​ಡೇಟ್ಸ್ ಹೊರಬೀಳಲಿದೆ ಎಂದು ತಿಳಿಸಿದ್ದು, ಪ್ರೇಕ್ಷಕರ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಸಿನಿಮಾದ ಅಧಿಕೃತ ಶೀರ್ಷಿಕೆ?ಬಾಲಿವುಡ್​​ ನಟ ವರುಣ್​ ಧವನ್​​ ಅವರ ಇನ್‌ಸ್ಟಾಗ್ರಾಮ್ ಸ್ಟೋರೀಸ್​ನಲ್ಲಿ, 'VD18' ಎಂದು ಬರೆದಿರುವ ಸಿಂಪಲ್​​ ಪೋಸ್ಟರ್ ಶೇರ್ ಮಾಡಿದ್ದಾರೆ. ಕಡುಗಪ್ಪು (ಮೋಡದಂತೆ ತೋರುತ್ತಿದೆ) ಹಿನ್ನೆಲೆಯಲ್ಲಿ, 'ವಿಡಿ18' ಎಂಬುದು ರೆಡ್​​ ಕಲರ್​ನಲ್ಲಿ ಬರೆದಿದೆ. ಹಿಂಬದಿ ಸಿನಿಮಾ ನಿರ್ಮಾಣ ಸಂಸ್ಥೆಗಳ ಹೆಸರಿದೆ. ಕೆಳಭಾಗದಲ್ಲಿ, ನಾಳೆ ಮಧ್ಯಾಹ್ನ 2 ಗಂಟೆಗೆ ಬಿಗ್​ ರಿವೀಲ್​​ ಎಂದು ಬರೆಯಲಾಗಿದೆ. ಇದನ್ನು ನೋಡಿದ ನೆಟ್ಟಿಗರು ಸಿನಿಮಾದ ಅಧಿಕೃತ ಶೀರ್ಷಿಕೆ ಹೊರಬೀಳುವ ಸಾಧ್ಯತೆ ಇದೆ ಎಂದು ಊಹಿಸುತ್ತಿದ್ದಾರೆ.

'ವಿಡಿ 18'

'ವಿಡಿ18' ಚಿತ್ರೀಕರಣದ ವೇಳೆ ನಟನಿಗೆ ಗಾಯಗಳಾಗಿದ್ದವು. ಈ ಕಾರಣದಿಂದ ಚಿತ್ರ ಭರ್ಜರಿ ಆ್ಯಕ್ಷನ್ ದೃಶ್ಯಗಳನ್ನು ಒಳಗೊಂಡಿರಬಹುದು ಎಂದು ನಂಬಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ನಟ ಗಾಯಗೊಂಡಿದ್ದರು. ಘಟನೆಯ ನಂತರ ನಟ, ಬ್ಯಾಂಡೇಜ್​ನಿಂದ ಕವರ್​​ ಮಾಡಲಾಗಿದ್ದ ಕಾಲಿನ ವಿಡಿಯೋವನ್ನು ಹಂಚಿಕೊಂಡಿದ್ದರು.

ಡಿಸೆಂಬರ್‌ನಲ್ಲಿ ವಿಡಿ18 ತಂಡ ಕೇರಳ ಶೂಟಿಂಗ್​​ ಶೆಡ್ಯೂಲ್​​​ ಪೂರ್ಣಗೊಳಿಸಿದೆ. ಆದ್ರೆ ಯೋಜನೆ ಬಗ್ಗೆ ಇನ್ನೂ ಯಾವುದೇ ಅಧಿಕೃತ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಈ ಚಿತ್ರದಲ್ಲಿ ವರುಣ್ ಧವನ್​​ ಜೊತೆ ಕೀರ್ತಿ ಸುರೇಶ್ ಮತ್ತು ವಾಮಿಕಾ ಗಬ್ಬಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:'ಬ್ಲ್ಯಾಕ್​'ಗೆ 19 ವರ್ಷ: ರಾಷ್ಟ್ರಪ್ರಶಸ್ತಿ ಗೆದ್ದ ಪಾತ್ರಕ್ಕೆ ಒಂದು ಪೈಸೆಯನ್ನೂ ಪಡೆದಿರಲಿಲ್ಲ ಬಚ್ಚನ್​​

ವರುಣ್​​ ಧವನ್​ ಕೊನೆಯದಾಗಿ ನಿತೇಶ್ ತಿವಾರಿ ಅವರ ರೊಮ್ಯಾಂಟಿಕ್ ಸಿನಿಮಾ 'ಬವಾಲ್‌'ನಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಜಾಹ್ನವಿ ಕಪೂರ್ ಜೊತೆ ತೆರೆ ಹಂಚಿಕೊಂಡಿದ್ದರು. ಇನ್ನು, ವರುಣ್​​ ಅವರು ಸೌತ್​ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಜೊತೆ ರುಸ್ಸೋ ಬ್ರದರ್ಸ್ ಸಿರಿಸ್​​​​ 'ಸಿಟಾಡೆಲ್‌'ನ ಭಾರತೀಯ ರೂಪಾಂತರದಲ್ಲಿ ನಟಿಸಿದ್ದು, ಇದರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ರಾಜ್ ಮತ್ತು ಡಿಕೆ ಮುಂದಾಳತ್ವದಲ್ಲಿ ರೆಡಿಯಾಗಿರುವ ಇಂಡಿಯನ್​ 'ಸಿಟಾಡೆಲ್'​ನ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಮೂಲ ಸಿಟಾಡೆಲ್‌ನಲ್ಲಿ (ಇಂಟರ್​ನ್ಯಾಶನಲ್​​ ವರ್ಷನ್​​) ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ನಟಿಸಿದ್ದರು. ವರುಣ್ ಧವನ್ ಅವರ ಹಲವು ಸಿನಿಮಾಗಳು ಚಲನಚಿತ್ರೋದ್ಯಮದಲ್ಲಿ ಅವರ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿವೆ. ಅಭಿಮಾನಿಗಳೀಗ ವಿಡಿ18 ಮತ್ತು ಸಿಟಾಡೆಲ್‌ನ ಅಪ್​ಡೇಟ್ಸ್​​ಗಾಗಿ ಕಾತುರರಾಗಿದ್ದಾರೆ. ಸೋಮವಾರ ಮಧ್ಯಾಹ್ನ, 'ವಿಡಿ18'ರ ಅಪ್​ಡೇಟ್ಸ್ ಹೊರಬೀಳಲಿದೆ.

ಇದನ್ನೂ ಓದಿ:ಪೂನಂ ಪಾಂಡೆ ಪರ ದನಿಯೆತ್ತಿದ ಪತಿ ಸ್ಯಾಮ್​​: 4 ತಿಂಗಳ ಹಿಂದೆಯೇ ಆರಂಭವಾಗಿತ್ತಂತೆ ಅಭಿಯಾನ!

ABOUT THE AUTHOR

...view details