ಕರ್ನಾಟಕ

karnataka

ETV Bharat / entertainment

'ಕಲ್ಕಿ 2898 AD' ಅವತಾರಕ್ಕೆ ಆರೇ ದಿನ ಬಾಕಿ: ಇಂದು ಸಂಜೆ 2ನೇ ಟ್ರೇಲರ್ ಬಿಡುಗಡೆ - Kalki 2898 AD Final Trailer

ಇಂದು ಸಂಜೆ ಕಲ್ಕಿ 2898 AD ಚಿತ್ರದ ಎರಡನೇ ಟ್ರೇಲರ್ ಬಿಡುಗಡೆಯಾಗಲಿದೆ. ಚಿತ್ರತಂಡ ಇದಕ್ಕೂ ಮುನ್ನ ಕಾಸಿ ಮತ್ತು ಶಂಬಲ ಎಂಬೆರಡು ಪೋಸ್ಟರ್‌ಗಳನ್ನು ಹಂಚಿಕೊಂಡಿದೆ. ಇದು ನೆಟ್ಟಿಗರ ಗಮನ ಸೆಳೆಯುತ್ತಿದೆ.

6 Days to Go: Kalki 2898 AD Final Trailer out Today, Sneak Peek into Kasi, Shambala, and Complex Revealed
ಕಲ್ಕಿ 2898 AD (Film Poster)

By ETV Bharat Karnataka Team

Published : Jun 21, 2024, 4:15 PM IST

ನಟ ಪ್ರಭಾಸ್ ಅಭಿನಯ ಮತ್ತು ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 AD' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಪ್ಯಾನ್​​ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿರುವ ಈ ಚಿತ್ರದ ಮೊದಲ ಟ್ರೇಲರ್​ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಈ ಮೂಲಕ ಸಿನಿರಸಿಕರ ಉತ್ಸಾಹ ಹೆಚ್ಚಿಸಿತ್ತು.

ಬಿಗ್ ಬಜೆಟ್‌ನಲ್ಲಿ ತಯಾರಾಗಿರುವ ಕಲ್ಕಿ ಜೂ. 27ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲಿದೆ. ಪ್ರಭಾಸ್‌ ಅವರ ಕೊನೆಯ ಸೂಪರ್ ಹಿಟ್ ಸಿನಿಮಾ 'ಸಲಾರ್'ನ ಎರಡು ಟ್ರೇಲರ್ ರಿಲೀಸ್ ಆಗಿರುವುದರಿಂದ 'ಕಲ್ಕಿ'ಯಿಂದಲೂ ಎರಡನೇ ಟ್ರೇಲರ್ ಬಿಡುಗಡೆಯಾಗಬಹುದು ಎಂಬ ಮಾತಿತ್ತು. ನಿರೀಕ್ಷೆಯಂತೆ ಇಂದು ಎರಡನೇ ಹಾಗೂ ಕೊನೆಯ ಟ್ರೇಲರ್ ಬಿಡುಗಡೆಯಾಗಲಿದೆ.

ಸಂಜೆ 6ಕ್ಕೆ ಎರಡನೇ ಟ್ರೇಲರ್ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ. ಹೊಸ ಟ್ರೇಲರ್‌ನಲ್ಲಿ ಸಾಕಷ್ಟು ಹೊಸ ಫೂಟೇಜ್‌ಗಳು ಮೂಡಿಬರಲಿವೆ. ಅಲ್ಲದೇ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.

ಚಿತ್ರತಂಡ ಬೆಳಗ್ಗೆ ಎರಡು ಪೋಸ್ಟರ್​ಗಳನ್ನು ಬಿಡುಗಡೆ ಮಾಡಿ ಹೊಸ ಲೋಕವನ್ನೇ ತೆರೆದಿಟ್ಟಿದೆ. ಮೊದಲು ಭವ್ಯವಾದ ಶಂಬಲ ಸಾಮ್ರಾಜ್ಯದ ಒಂದು ನೋಟ ಒಳಗೊಂಡ ವಿಶೇಷ ಕೌಂಟ್‌ಡೌನ್ ಪೋಸ್ಟರ್ ಅನಾವರಣಗೊಳಿಸಿದ್ದು, ಇದರಲ್ಲಿ ಕಲ್ಲಿನ ಪರ್ವತದ ಮೇಲೆ ಬೃಹತ್ ಒಣಗಿದ ಆಲದ ಮರವನ್ನು ತೋರಿಸಿದೆ. ಇದರಲ್ಲಿ "ಶಂಬಾಲಾ: ಮನೆಗಾಗಿ ಕಾಯುತ್ತಿದ್ದೇನೆ" ಎಂಬ ಶೀರ್ಷಿಕೆ ಇದೆ. "ಕಾಶಿ: ದಿ ಲಾಸ್ಟ್ ಸಿಟಿ" ಎಂಬ ಶೀರ್ಷಿಕೆಯೊಂದಿಗೆ ಮತ್ತೊಂದು ಪೋಸ್ಟರ್‌ ಕೂಡ ಹಂಚಿಕೊಂಡಿದೆ. ಇದು ಸುಂದರವಾದ ಭೂದೃಶ್ಯ, ಹಸಿರ ಸಿರಿ ಹೊಂದಿದೆ.

ಜೂ.10ರಂದು 'ಕಲ್ಕಿ 2898 ಎಡಿ'ಯ ಮೊದಲ ಟ್ರೇಲರ್ ರಿಲೀಸ್ ಆಗಿತ್ತು. ಅದ್ಭುತ ದೃಶ್ಯ ಒಳಗೊಂಡ ಟ್ರೇಲರ್​ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಟ್ರೇಲರ್ ಬಿಡುಗಡೆಯಾದ 24 ಗಂಟೆಯೊಳಗೆ 13 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಕಂಡಿತ್ತು.

ಚಿತ್ರದಲ್ಲಿ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಕಮಲ್ ಹಾಸನ್ ಸೇರಿದಂತೆ ಹಲವರು ನಟಿಸಿದ್ದಾರೆ. ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರವು 2D, 3D, IMAX, ಮತ್ತು 4DX ಆವೃತ್ತಿಗಳಲ್ಲಿ ಲಭ್ಯವಿರಲಿದೆ. ವೈಜಯಂತಿ ಮೂವೀಸ್ ನಿರ್ಮಿಸಿರುವ 'ಕಲ್ಕಿ ಎಡಿ 2898' ಪೌರಾಣಿಕ ಅಂಶಗಳನ್ನು ಒಳಗೊಂಡಿರುವ ಸೈನ್ಸ್ ಫಿಕ್ಷನ್. 600 ಕೋಟಿ ರೂ.ನಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ ಎಂಬ ವರದಿಗಳಿವೆ.

ಇದನ್ನೂ ಓದಿ:ಅಶ್ವಿನಿ ದತ್ ಪಾದ ಸ್ಪರ್ಶಿಸಿದ ಅಮಿತಾಭ್​​​​: ಬಚ್ಚನ್​​ ಬಗ್ಗೆ ನಿರ್ಮಾಪಕರು ಹೇಳಿದ್ದೇನು? - Aswini Dutt

ABOUT THE AUTHOR

...view details