ಕರ್ನಾಟಕ

karnataka

ETV Bharat / entertainment

ಬಜೆಟ್‌ಗಿಂತ 6 ಪಟ್ಟು ಲಾಭ, ಚಿತ್ರಮಂದಿರಗಳಲ್ಲಿ 200 ದಿನ ಓಡಿದ ಯಶ್​ ಸಿನಿಮಾ; 2014ರ ಹಿಟ್​ ಚಿತ್ರವಿದು - YASH

ಥಿಯೇಟರ್​ನಲ್ಲಿ 200 ದಿನಗಳ ಕಾಲ ಓಡಿ, ಬಜೆಟ್​ಗೂ 6 ಪಟ್ಟು ಹೆಚ್ಚು ಲಾಭ ಗಳಿಸಿತ್ತು ಯಶ್​ ಮುಖ್ಯಭೂಮಿಕೆಯ ಸಿನಿಮಾ. ಕೆಜಿಎಫ್​​ಗೂ ಮುನ್ನ ಬಂದ ಯಶ್ ಸಿನಿಮಾದ ದಾಖಲೆಯಿದು.

Yash Radhika
ಯಶ್​​ ರಾಧಿಕಾ ದಂಪತಿ (Photo: ETV Bharat)

By ETV Bharat Entertainment Team

Published : Jan 8, 2025, 5:34 PM IST

ರಾಕಿಂಗ್​ ಸ್ಟಾರ್​ ಯಶ್ ತಮ್ಮ ಕೆಜಿಎಫ್ ಫ್ರಾಂಚೈಸಿಯಿಂದ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದಾರೆ. ಆದ್ರೆ ಕೆಜಿಎಫ್​ಗೂ ಮೊದಲು ಕನ್ನಡ ಚಿತ್ರರಂಗದಲ್ಲಿ ಸೂಪರ್​​ ಸ್ಟಾರ್ ಆಗಿ ಮನ್ನಣೆ ಗಳಿಸಿದ್ದರು. ಆ್ಯಕ್ಷನ್​ ಡ್ರಾಮಾ ಕೆಜಿಎಫ್​​ಗೂ ಮುನ್ನ ಹಲವು ಪ್ರೇಮ್​ಕಹಾನಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇಂದು ತಮ್ಮ 39ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಯಶ್, 2007ರಲ್ಲಿ ಹಿರಿತೆರೆ ಪ್ರವೇಶಿಸಿದರು. ಅಂದಿನಿಂದ ಯಶ್ ಹಿಂತಿರುಗಿ ನೋಡಲೇ ಇಲ್ಲ. ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಕೆಜಿಎಫ್ ವಿಶ್ವಾದ್ಯಂತ ಜನಪ್ರಿಯವಾಗಿದ್ದು, ಕೆಜಿಎಫ್​​ ಸ್ಟಾರ್​ ಎಂದೇ ಹೆಸರುವಾಸಿಯಾಗಿದ್ದಾರೆ. ಕೆಜಿಎಫ್​ಗೂ ಯಶ್ ಅವರ ವೃತ್ತಿಜೀವನದಲ್ಲಿ ಅತ್ಯಂತ ಯಶಸ್ವಿ ಸಿನಿಮಾಗಳೂ ಬಂದಿವೆ. ಕೆಜಿಎಫ್ ಅಧ್ಯಾಯ 1ರಂತೆಯೇ ಈ ಚಿತ್ರವೂ ಹೆಚ್ಚು ಲಾಭ ಗಳಿಸಿದೆ ಮತ್ತು 2014ರ ಅತ್ಯಂತ ಲಾಭದಾಯಕ ಚಿತ್ರ ಎಂದು ಸಾಬೀತಾಗಿದೆ.

ಅದುವೇ 'ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ'. ಈ ಸಿನಿಮಾವನ್ನು 2013ರ ಸೆಪ್ಟೆಂಬರ್​ನಲ್ಲಿ ಘೋಷಿಸಲಾಯಿತು. ಚಿತ್ರೀಕರಣ 2014ರ ಏಪ್ರಿಲ್​ನಲ್ಲಿ ಪ್ರಾರಂಭವಾಯಿತು. ಅದೇ ವರ್ಷದ ಸೆಪ್ಟೆಂಬರ್​​ಗೆ ಶೂಟಿಂಗ್​​​ ಪೂರ್ಣಗೊಂಡಿತು. ಫೈನಲಿ ಸಿನಿಮಾ ಬಹುನಿರೀಕ್ಷೆಗಳೊಂದಿಗೆ 2014ರ ಡಿಸೆಂಬರ್​​ 25ರ ಕ್ರಿಸ್ಮಸ್ ದಿನದಂದು ತೆರೆಗಪ್ಪಳಿಸಿತು. ಈ ಚಿತ್ರದಲ್ಲಿ ರಾಧಿಕಾ ಪಂಡಿತ್​ ಜೊತೆ ಯಶ್​ ತೆರೆ ಹಂಚಿಕೊಂಡಿದ್ದರು.

ಕಲೆಕ್ಷನ್​ ದಾಖಲೆಯಿದು: ಕೆಜಿಎಫ್ ಚಾಪ್ಟರ್ 1ರ ಬಜೆಟ್ 80 ಕೋಟಿ ರೂಪಾಯಿ. ಸಿನಿಮಾ ಗಳಿಸಿದ್ದು ಸುಮಾರು 250 ಕೋಟಿ ರೂಪಾಯಿ. ಕೆಜಿಎಫ್ 2ರ ಬಜೆಟ್ 100 ಕೋಟಿ ಆಗಿತ್ತು ಮತ್ತು ವಿಶ್ವದಾದ್ಯಂತ 1,200 ಕೋಟಿ ರೂಪಾಯಿಗೂ ಅಧಿಕ ವ್ಯವಹಾರ ನಡೆಸಿದೆ. ಕೆಜಿಎಫ್ 2 ಯಶ್ ಅವರ ವೃತ್ತಿಜೀವನದ ಅತ್ಯಂತ ಲಾಭದಾಯಕ ಮತ್ತು ಬ್ಲಾಕ್​ಬಸ್ಟರ್ ಚಿತ್ರವಾಗಿದೆ. ಅದರಂತೆ 2014ರಲ್ಲಿ ಬಂದ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಚಿತ್ರದ ಬಜೆಟ್ 8 ಕೋಟಿ ರೂ. ಆಗಿತ್ತು. ರಾಕಿಂಗ್ ಕಪಲ್​​ ತೆರೆಹಂಚಿಕೊಂಡ ಈ ಚಿತ್ರವು ತನ್ನ ಬಜೆಟ್‌ಗಿಂತ 6 ಪಟ್ಟು ಹೆಚ್ಚು ಅಂದರೆ ಸುಮಾರು 50 ಕೋಟಿ ರೂ. ಗಳಿಸಿತ್ತು.

ಇದನ್ನೂ ಓದಿ:ಗೋವಾದಲ್ಲಿ ಫ್ಯಾಮಿಲಿಯೊಂದಿಗೆ ಯಶ್​ ಜನ್ಮದಿನಾಚರಣೆ: ಸೆಲೆಬ್ರೇಶನ್​​ ಫೋಟೋಗಳಿಲ್ಲಿವೆ​​

ಅಷ್ಟೇ ಅಲ್ಲ, ಈ ಚಿತ್ರ 200ಕ್ಕೂ ಹೆಚ್ಚು ದಿನಗಳ ಕಾಲ ಥಿಯೇಟರ್‌ಗಳಲ್ಲಿ ಓಡಿದೆ. ಕನ್ನಡ ಚಿತ್ರರಂಗದಲ್ಲಿ ಆ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಕೂಡಾ ಹೌದು. ಇದು SIIMA ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಇದನ್ನೂ ಓದಿ:ಬಾಕ್ಸ್​​ ಆಫೀಸ್​ನಲ್ಲಿ ಮುಗ್ಗರಿಸಿದ್ರೂ ಆಸ್ಕರ್​​ಗೆ ಎಂಟ್ರಿ; ಇದು ಸೂರ್ಯ ನಟನೆಯ 'ಕಂಗುವ' ಸಾಧನೆ

ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಕಥೆಯನ್ನು ಗಮನಿಸೋದಾದ್ರೆ, ಕಾಲೇಜು ವಿದ್ಯಾರ್ಥಿ ರಾಮಾಚಾರಿ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದರು. ರಾಮಾಚಾರಿ ಬಾಲ್ಯದಿಂದಲೂ ನಟ ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿ. ಚಿತ್ರದಲ್ಲಿ ರಾಧಿಕಾ ಪಂಡಿತ್ ದಿವ್ಯಾ ಎಂಬ ಪಾತ್ರದಲ್ಲಿ ನಟಿಸಿದ್ದರು. ಬೆಂಗಳೂರು, ಮೈಸೂರು ಮತ್ತು ಚಿತ್ರದುರ್ಗದಲ್ಲಿ ಚಿತ್ರೀಕರಣ ನಡೆದಿತ್ತು. ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸಂಗೀತವಿತ್ತು.

ABOUT THE AUTHOR

...view details