ಬೆಂಗಳೂರು: ರೈಲ್ವೆ ನೇಮಕಾತಿ ಮಂಡಳಿಯಿಂದ ಬರೋಬ್ಬರಿ 32,438 ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಗ್ರೂಪ್ ಡಿ ಹುದ್ದೆ ಇದಾಗಿದ್ದು, 10ನೇ ತರಗತಿ ಪೂರ್ಣಗೊಂಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಹುದ್ದೆ ವಿವರ : ಒಟ್ಟು 32,438 ಹುದ್ದೆ
- ಪಾಯಿಂಟ್ ಮ್ಯಾನ್- ಬಿ - 5058
- ಅಸಿಸ್ಟಂಟ್ (ಟ್ರಾಕ್ ಮಷಿನ್) - 799
- ಅಸಿಸ್ಟಂಟ್ (ಬ್ರಿಡ್ಜ್) - 301
- ಟ್ರಾಕ್ ಮೆಂಟೇನರ್ ಗ್ರೇಡ್ 4- 13,187
- ಅಸಿಸ್ಟಂಟ್ ಪಿ- ವೇ - 257
- ಅಸಿಸ್ಟಂಟ್ (ಸಿ ಅಂಡ್ ಡಬ್ಲ್ಯೂ) 2587
- ಅಸಿಸ್ಟಂಟ್ ಟಿಆರ್ಡಿ - 1381
- ಅಸಿಸ್ಟಂಟ್ ಲೋಕೋ ಶೆಡ್ (ಡಿಸೇಲ್) - 2012
- ಅಸಿಸ್ಟಂಟ್ ಲೋಕೋ ಶೆಡ್ (ಎಲೆಕ್ಟ್ರಿಕಲ್ ) 420
- ಅಸಿಸ್ಟಂಟ್ ಆಪರೇಷನ್ (ಎಲೆಕ್ಟ್ರಿಕಲ್) 950
- ಅಸಿಸ್ಟಂಟ್ ಟಿಎಲ್ ಅಂಡ್ ಎಸಿ - 1041
- ಅಸಿಸ್ಟಂಟ್ (ಎಸ್ ಅಂಡ್ ಟಿ) - 744
- ಅಸಿಸ್ಟಂಟ್ ಟಿಎಲ್ ಅಂಡ್ ಎಸಿ (ವರ್ಕ್ ಶಾಪ್) - 624
- ಅಸಿಸ್ಟಂಟ್ (ವರ್ಕ್ ಶಾಪ್) (ಮೆಕಾನಿಕಲ್) - 3077
ವಿದ್ಯಾರ್ಹತೆ: ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಅಥವಾ ಅಧಿಕೃತ ಮಂಡಳಿಯಿಂದ ಐಟಿಐ ಪೂರ್ಣಗೊಳಿಸಿರಬೇಕು.
ವಯೋಮಿತಿ: ಕನಿಷ್ಠ 18 ಮತ್ತು ಗರಿಷ್ಠ 36 ವರ್ಷ ವಯೋಮಿತಿ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ಮತ್ತು ಪ.ಜಾ ಹಾಗೂ ಪ. ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಪ. ಜಾ, ಪ. ಪಂ, ಮಹಿಖಾ, ವಿಕಲಚೇತನ, ತೃತೀಯ ಲಿಂಗಿ, ನಿವೃತ್ತ ಯೋಧರಿಗೆ 250 ರೂ. ಅರ್ಜಿ ಶುಲ್ಕ ಹಾಗೂ ಇತರೆ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ನಿಗದಿಸಲಾಗಿದೆ.