ಬೆಂಗಳೂರು: ಸ್ಟೇಷನ್ ಮಾಸ್ಟರ್, ಟ್ರೈನ್ಸ್ ಕ್ಲರ್ಕ್, ಜೂನಿಯರ್ ಅಕೌಂಟೆಂಟ್ ಸೇರಿದಂತೆ 11,558 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದ ರೈಲ್ವೇ ನೇಮಕಾತಿ ಮಂಡಳಿ (RRB) ಇದೀಗ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 27ರವರೆಗೆ ಅವಕಾಶ ನೀಡಲಾಗಿದೆ.
ಹುದ್ದೆಗಳ ವಿವರ:
- ಗೂಡ್ಸ್ ಟ್ರೈನ್ ಮ್ಯಾನೇಜರ್ - 3144
- ಸ್ಟೇಷನ್ ಮಾಸ್ಟರ್ - 994
- ಚೀಫ್ ಕಮರ್ಷಿಯಲ್ ಆ್ಯಂಡ್ ಟಿಕೆಟ್ ಸೂಪರ್ವೈಸರ್ - 1736
- ಜೂನಿಯರ್ ಅಕೌಂಟೆಂಟ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್ - 1507
- ಸೀನಿಯರ್ ಕ್ಲರ್ಕ್ ಆ್ಯಂಡ್ ಟೈಪಿಸ್ಟ್ - 732
- ಅಕೌಂಟ್ ಕ್ಲರ್ಕ್ ಆ್ಯಂಡ್ ಟೈಪಿಸ್ಟ್ - 361
- ಕಮರ್ಷಿಯಲ್ ಆ್ಯಂಡ್ ಟಿಕೆಟ್ ಕ್ಲರ್ಕ್ - 2022
- ಜೂನಿಯರ್ ಕ್ಲರ್ಕ್ ಆ್ಯಂಡ್ ಟೈಪಿಸ್ಟ್ - 990
- ಟ್ರೈನ್ ಕ್ಲರ್ಕ್- 72
ವಿದ್ಯಾರ್ಹತೆ: ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಪೂರ್ಣಗೊಳಿಸಿರಬೇಕು. ಇನ್ನಿತರ ಹುದ್ದೆಗಳಿಗೆ ಪದವಿ ಹೊಂದಿರಬೇಕು.
ವಯೋಮಿತಿ: ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳ ಗರಿಷ್ಟ ವಯೋಮಿತಿ 33 ವರ್ಷ. ಇನ್ನಿತರ ಹುದ್ದೆಗಳ ಗರಿಷ್ಠ ವಯೋಮಿತಿ 36 ವರ್ಷ.