ಕರ್ನಾಟಕ

karnataka

ETV Bharat / education-and-career

NCC ಅಭ್ಯರ್ಥಿಗಳಿಗೆ ಭಾರತೀಯ ಸೇನೆಯಲ್ಲಿ ವಿಶೇಷ ನೇಮಕಾತಿ: ಹುದ್ದೆ, ವಿದ್ಯಾರ್ಹತೆ, ವೇತನ ವಿವರ ಹೀಗಿದೆ - NCC Special Entry Scheme - NCC SPECIAL ENTRY SCHEME

ಎನ್​ಸಿಸಿ ವಿಶೇಷ ಪ್ರವೇಶ ಯೋಜನೆ 57ನೇ ಕೋರ್ಸ್​ ಮೂಲಕ ಭಾರತೀಯ ಸೇನೆ ಸೇರಲು ಎಸ್​ಎಸ್​ಸಿ ಅಧಿಸೂಚನೆ ಪ್ರಕಟಿಸಿದೆ.

NCC Special Entry Scheme 57th Course in Indian Army
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)

By ETV Bharat Karnataka Team

Published : Jul 13, 2024, 3:53 PM IST

ಬೆಂಗಳೂರು: ಎನ್​ಸಿಸಿ (ನ್ಯಾಷನಲ್​ ಕ್ರೆಡಿಟ್​​ ಕಾರ್ಪ್​​) ಸಿ ಸರ್ಟಿಫಿಕೇಟ್​ ಪಡೆದ ಅಭ್ಯರ್ಥಿಗಳು ಇದೀಗ ದೇಶ ಸೇವೆಗೆ ಭಾರತೀಯ ಸೇನೆ ಸೇರುವ ಅವಕಾಶಬಂದಿದೆ. ಎನ್​ಸಿಸಿ ವಿಶೇಷ ಪ್ರವೇಶ ಯೋಜನೆ 57ನೇ ಕೋರ್ಸ್​ ಮೂಲಕ ಭಾರತೀಯ ಸೇನೆ ಸೇರಲು ಎಸ್​ಎಸ್​ಸಿ ಅಧಿಸೂಚನೆ ಪ್ರಕಟಿಸಿದೆ. ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ ವಿವರ: ಎನ್​ಸಿಸಿ ವಿಶೇಷ ಪ್ರವೇಶಾತಿ ಯೋಜನೆ ಅಡಿ ಭಾರತೀಯ ಸೇನೆಯಲ್ಲಿ ದೇಶಾದ್ಯಂತ ಈ ನೇಮಕಾತಿ ನಡೆಯಲಿದ್ದು, ಒಟ್ಟು 76 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಪುರುಷ ಅಭ್ಯರ್ಥಿಗಳಿಗೆ 70 ಸ್ಥಾನ ಮೀಸಲಿರಿಸಲಾಗಿದ್ದು, ಮಹಿಳಾ ಅಭ್ಯರ್ಥಿಗಳಿಗೆ 6 ಸ್ಥಾನ ಮೀಸಲಿರಿಸಲಾಗಿದೆ.

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಪೂರ್ಣಗೊಳಿಸಿರಬೇಕು. ಈ ಅಭ್ಯರ್ಥಿಗಳು ಎನ್​ಸಿಸಿಯಲ್ಲಿ ಕನಿಷ್ಠ ಎರಡು ಅಥವಾ ಮೂರು ವರ್ಷದ ಎನ್​ಸಿಸಿ ಸಿ ಪ್ರಮಾಣ ಪತ್ರ ಹೊಂದಿರಬೇಕು. ಅಂತಿಮ ಪದವಿ ಹಂತದ ವಿದ್ಯಾರ್ಥಿಗಳು ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 19 ವರ್ಷ, ಗರಿಷ್ಠ ವಯೋಮಿತಿ 25 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆಯಿದ್ದು ಭಾರತೀಯ ಸೇನೆ ಇಲಾಖೆ ನಿಯಮದಂತೆ ನಡೆಸಲಾಗುವುದು.

ಅಧಿಸೂಚನೆ (ಎಸ್​ಎಸ್​ಸಿ, ಭಾರತೀಯ ಸೇನೆ)

ವೇತನ:ಈ ಹುದ್ದೆಗಳಿಗೆ ತರಬೇತಿ ವೇಳೆ ಮಾಸಿಕ 56,100 ರೂ. ಸ್ಟೈಫಂಡ್​ ನೀಡಲಾಗುವುದು. ಚೆನ್ನೈನ ಆಫೀಸರ್​ ಟ್ರೈನಿಂಗ್​ ಅಕಾಡೆಮಿಯಲ್ಲಿ 49 ವಾರಗಳ ಕಾಲ ಈ ತರಬೇತಿ ನಡೆಯಲಿದೆ. ತರಬೇತಿ ಬಳಿಕ ಭಾರತೀಯ ಸೇನೆಯ ವಿವಿಧ ಹುದ್ದೆಗಳ ಸ್ತರಗಳಿಗೆ ಅನುಗುವಾಗಿ 56,100ರೂ. ನಿಂದ 2,50,000 ರೂ.ವರೆಗೆ ವೇತನ ನಿಗದಿ ಮಾಡಲಾಗಿದೆ.

ಈ ಹುದ್ದೆಗಳನ್ನು ಶಾರ್ಟ್​ ಸರ್ವೀಸ್​ ಕಮಿಷನ್​ ಅಡಿ 14 ವರ್ಷಗಳ ಅವಧಿಗೆ ನೇಮಕಾತಿ ನಡೆಸಲಾಗುವುದು. ಹುದ್ದೆಯ ಆರಂಭಿಕ ಅವಧಿ 10 ವರ್ಷ ಆಗಿದ್ದು, ಇದಾದ ಬಳಿಕ 4 ವರ್ಷ ವಿಸ್ತರಣೆ ನಡೆಸಲಾಗುವುದು. ಮೊದಲ ಆರು ತಿಂಗಳ ಸಮಯ ಪ್ರೊಬೆಷನರಿ ಆಗಿರಲಿದೆ.

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಮೆಡಿಕಲ್​ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಆರಂಭ ಜುಲೈ 11ರಿಂದ ಆಗಲಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​​ 9 ಆಗಿದೆ.

ಈ ಹದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಈhttps://www.joinindianarmy.nic.in/ ಜಾಲತಾಣಕ್ಕೆ ಭೇಟಿ ನೀಡಿ. ಇಲ್ಲಿ ಆಫೀಸರ್​ ಎಂಟ್ರಿ ಅಪ್ಲಿಕೇಷನ್​/ಲಾಗಿನ್​ಗೆ ಭೇಟಿ ನೀಡಿ, ರಿಜಿಸ್ಟ್ರೇಷನ್​ ನಡೆಸಿ. ಬಳಿಕ ಅರ್ಜಿಯಲ್ಲಿ ಸರಿಯಾದ ದಾಖಲೆ, ವಿವರಗಳನ್ನು ನೀಡಿ ಭರ್ತಿ ಮಾಡಿ. ಅರ್ಜಿ ಸಲ್ಲಿಕೆಗೆ ಆಧಾರ್​ ಅಥವಾ 10ನೇ ತರಗತಿ ಪ್ರಮಾಣ ಪತ್ರ ಕಡ್ಡಾಯವಾಗಿದೆ.

ಇದನ್ನೂ ಓದಿ:SSLC ಆಗಿದ್ರೆ ಅರ್ಜಿ ಸಲ್ಲಿಕೆ: ರಾಮನಗರದ ಕಾನೂನು ಸೇವಾ ಪ್ರಾಧಿಕಾರದಲ್ಲಿದೆ ಉದ್ಯೋಗ

ABOUT THE AUTHOR

...view details