ಕಳೆದ 8 ವರ್ಷಗಳಲ್ಲಿ (2016-17 ರಿಂದ 2023-24 ರವರೆಗೆ) ಕರ್ನಾಟಕವು ದೇಶದ ತೆರಿಗೆ ಆದಾಯಕ್ಕೆ ಸರಾಸರಿ ಶೇಕಡಾ 37ರಷ್ಟು ಕೊಡುಗೆ ನೀಡಿದೆ. ಹಾಗೆಯೇ 2016-17 ರಿಂದ 2023-24 ರವರೆಗೆ ಮಹಾರಾಷ್ಟ್ರವು ಭಾರತದ ಖಜಾನೆಗೆ ತೆರಿಗೆ ರೂಪದಲ್ಲಿ 142544.84 ಕೋಟಿ ರೂ. ಕೊಡುಗೆ ನೀಡಿದೆ.
ಕರ್ನಾಟಕದಿಂದ ನೇರ ತೆರಿಗೆ ಸಂಗ್ರಹ (ಕಾರ್ಪೊರೇಟ್ ತೆರಿಗೆ, ವೈಯಕ್ತಿಕ ಆದಾಯ ತೆರಿಗೆ ಮತ್ತು ಇತರ ನೇರ ತೆರಿಗೆಗಳು)
ಹಣಕಾಸು ವರ್ಷ 2017-18: ಈ ವರ್ಷದಲ್ಲಿ ಕರ್ನಾಟಕವು ಕೇಂದ್ರ ಸರ್ಕಾರಕ್ಕೆ 48138 (8.92%) ಕೋಟಿ ಜಿಎಸ್ಟಿ ತೆರಿಗೆಯನ್ನು ಕೊಡುಗೆಯಾಗಿ ನೀಡಿದೆ ಮತ್ತು 24305 ಕೋಟಿ (50.49%) ರಿಟರ್ನ್ ಪಾಲನ್ನು ಪಡೆದಿದೆ.
ಹಣಕಾಸು ವರ್ಷ 2018-19: ಈ ವರ್ಷ ಕರ್ನಾಟಕವು ಕೇಂದ್ರಕ್ಕೆ 78762 ಕೋಟಿ ರೂ. (9.01%) ಜಿಎಸ್ಟಿ ತೆರಿಗೆ ನೀಡಿದೆ ಮತ್ತು 42891 ಕೋಟಿ ರೂ. (54.46%) ರಿಟರ್ನ್ ಪಾಲನ್ನು ಪಡೆದಿದೆ.
ಹಣಕಾಸು ವರ್ಷ 2019-20: ಈ ವರ್ಷದಲ್ಲಿ ಕರ್ನಾಟಕವು ಕೇಂದ್ರ ಸರ್ಕಾರಕ್ಕೆ 83,408 ಕೋಟಿ (8.86%) ಜಿಎಸ್ಟಿ ತೆರಿಗೆ ನೀಡಿದೆ ಮತ್ತು 43665 ಕೋಟಿ ರೂ. (52.35%) ರಿಟರ್ನ್ ಪಾಲನ್ನು ಪಡೆದಿದೆ.
ಹಣಕಾಸು ವರ್ಷ 2020-21: ಈ ವರ್ಷದಲ್ಲಿ ಕರ್ನಾಟಕವು ಕೇಂದ್ರಕ್ಕೆ 75,660 ಕೋಟಿ (8.74%) ಜಿಎಸ್ಟಿ ತೆರಿಗೆ ನೀಡಿದೆ ಮತ್ತು 54,194 ಕೋಟಿ ರೂ. (56.5%) ಆದಾಯವನ್ನು ತನ್ನ ರಿಟರ್ನ್ ಪಾಲಾಗಿ ಪಡೆದುಕೊಂಡಿದೆ.
ಹಣಕಾಸು ವರ್ಷ 2021-22: ಈ ವರ್ಷದಲ್ಲಿ ಕರ್ನಾಟಕವು 95926 ಕೋಟಿ (8.74%) ಜಿಎಸ್ ಟಿ ಕೊಡುಗೆ ನೀಡಿದೆ ಮತ್ತು 54194 ಕೋಟಿ ರಿಟರ್ನ್ ಪಾಲನ್ನು ಪಡೆದಿದೆ.
ಹಣಕಾಸು ವರ್ಷ 2022-23: ಈ ವರ್ಷದಲ್ಲಿ ಕರ್ನಾಟಕವು 12,2822 ಕೋಟಿ ರೂ. (9.27%) ಜಿಎಸ್ ಟಿ ಕೊಡುಗೆ ನೀಡಿದೆ ಮತ್ತು 60218 ಕೋಟಿ (49.03%) ರಿಟರ್ನ್ ಪಾಲನ್ನು ಪಡೆದಿದೆ.
ಹಣಕಾಸು ವರ್ಷ 2023-24: ಈ ಸಾಲಿನಲ್ಲಿ ಕರ್ನಾಟಕ 1,45,266 ಕೋಟಿ ರೂ. (ಶೇ.9.54) ಕೊಡುಗೆ ನೀಡಿದೆ.
ಹಣಕಾಸು ವರ್ಷ 2024-25: ಈ ವರ್ಷದಲ್ಲಿ ಕರ್ನಾಟಕವು 1,05,070 ಕೋಟಿ (9.51%) ಕೊಡುಗೆ ನೀಡಿದೆ.