ಕಚ್ (ಗುಜರಾತ್):ಇಂದು ಕಚ್ ಬಗ್ಗೆ ಪರಿಚಯಿಸುವ ಅಥವಾ ಅದರ ಬಗ್ಗೆ ಹೇಳುವ ಅಗತ್ಯವಿಲ್ಲ. ಏಕೆಂದ್ರೆ ಗುಜರಾತ್‌ನ ರಾನ್ ಪ್ರದೇಶದಲ್ಲಿ ನೆಲೆಗೊಂಡಿರುವ ಈ ನಗರವು ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವುದು ಗೊತ್ತಿರುವ ಸಂಗತಿ. ಅಷ್ಟೇ ಅಲ್ಲ ಇದರ ಜೊತೆಗೆ ವಿವಿಧ ರೀತಿಯ ಕಲೆ ಮತ್ತು ಕೆಲಸಗಾರಿಕೆಗೂ ಈ ನಗರಿ ಹೆಸರುವಾಸಿಯಾಗಿದೆ. ಕಚ್‌ನ ಹಲವಾರು ಕುಶಲಕರ್ಮಿಗಳು ದೇಶ ಮತ್ತು ವಿದೇಶಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಕಚ್ ಕಲೆಗೆ ವಿಶಿಷ್ಟವಾದ ಗುರುತು ನೀಡಲಾಗಿದೆ ಮತ್ತು ಅನೇಕ ಕುಶಲಕರ್ಮಿಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಬಂಧನಿ ಕಲೆಯಲ್ಲಿ ಸಾಕಷ್ಟು ಹೆಸರು ಮತ್ತು ಖ್ಯಾತಿಯನ್ನು ಗಳಿಸಿದ ಅಂತಹ ಯುವ ಕಲಾವಿದರಿದ್ದಾರೆ.
ಕಚ್‌ನ ಬಂಧನಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಈ ವಿಶಿಷ್ಟ ಕಲೆ ಸುಮಾರು 200 ವರ್ಷಗಳಿಂದ ಪ್ರಚಲಿತದಲ್ಲಿದೆ. ಇಲ್ಲಿನ ಬಂಧನಿ ಕುಶಲಕರ್ಮಿಗಳು ಗುಜರಾತಿನಲ್ಲಿ ಮಾತ್ರವಲ್ಲದೇ ದೇಶ - ವಿದೇಶಗಳಲ್ಲಿಯೂ ಇದ್ದು, ಈ ಕಲೆಯನ್ನು ಜನಪ್ರಿಯಗೊಳಿಸಿದ್ದಾರೆ. ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಬಂಧನಿ ಕಲೆಯಲ್ಲಿ ಸಾಕಷ್ಟು ಹೆಸರು ಮತ್ತು ಖ್ಯಾತಿ ಕೂಡಾ ಗಳಿಸಿದ ಅಂತಹ ಒಬ್ಬ ಯುವ ಕಲಾವಿದನ ಬಗ್ಗೆ ನಾವು ಇಂದು ನಿಮಗೆ ಹೇಳಲಿದ್ದೇವೆ.
ಈ ಯುವ ಕುಶಲಕರ್ಮಿ ಮತ್ತು ಉದ್ಯಮಿಯ ಹೆಸರು ಅಬ್ದುಲ್ ವಹಾಬ್ ಖತ್ರಿ. 25 ವರ್ಷದ ಅಬ್ದುಲ್ ವಹಾಬ್ ಖತ್ರಿ ತನ್ನ ಏಳು ಮತ್ತು ಎಂಟನೇ ತರಗತಿಯಿಂದಲೇ ಬಂಧನಿ ಕಲೆಯನ್ನು ಇಷ್ಟಪಡುತ್ತಿದ್ದರು. ಅವರ ಹೆತ್ತವರು ಸಹ ಬಂಧನಿ ಕುಶಲಕರ್ಮಿಗಳು ಆಗಿದ್ದರು. 2017 ರಲ್ಲಿ, ಅಬ್ದುಲ್ ಒಂದು ವರ್ಷದ ಕಾಲೇಜು ವ್ಯಾಸಂಗ ಮುಗಿಸಿ ಅರ್ಧಕ್ಕೆ ಮೊಟಕುಗೊಳಿಸಿದರು. ಬಳಿಕ ಅವರು ಆದಿಪುರ ನಗರದ ಸೋಮಯ್ಯ ಕಲಾ ಶಾಲೆಯಲ್ಲಿ ಫ್ಯಾಷನ್ ಡಿಸೈನರ್ ಆಗಿ ತರಬೇತಿ ಪಡೆದರು.
ಬಂಧನಿ ಕಲೆ ಎಂದರೇನು?:ಬಂಧನಿಯು ಕಚ್‌ನಲ್ಲಿ ಟೈ ಮತ್ತು ಡೈ ಕ್ರಾಫ್ಟ್ ಆಗಿಯೂ ಪ್ರಸಿದ್ಧವಾಗಿದೆ. ನಾವು ಬಂಧನಿಯ ಇತಿಹಾಸದ ಬಗ್ಗೆ ಮಾತನಾಡಿದರೆ, ಇದು 12 ನೇ ಶತಮಾನಕ್ಕೆ ಸಂಬಂಧಿಸಿದೆ. ಖತ್ರಿ ಸಮುದಾಯದ ಸದಸ್ಯರು ಸಿಂಧ್‌ನಿಂದ ವಲಸೆ ಬಂದು ಕಚ್‌ನಲ್ಲಿ ನೆಲೆಸಿದರು. 18 ನೇ ಶತಮಾನದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಜವಳಿ ರಫ್ತು ಸ್ಥಳೀಯ ಆದಾಯದ ಮುಖ್ಯ ಮೂಲವಾಯಿತು. ಸ್ಥಳೀಯ ಬ್ಲಾಕ್ ಪ್ರಿಂಟರ್‌ಗಳಂತೆ ಬಂಧನಿ ಕುಶಲಕರ್ಮಿಗಳು ತಮ್ಮ ಬಟ್ಟೆಗಳನ್ನು ಗಾಢ ಬಣ್ಣಗಳಲ್ಲಿ ಬಣ್ಣ ಮಾಡಲು ಸ್ಥಳೀಯ ಹಣ್ಣುಗಳು ಮತ್ತು ತರಕಾರಿ ಬಣ್ಣಗಳನ್ನು ಬಳಸಿದರು. ಬಟ್ಟೆಯ ಗಂಟುಗಳಿಗೆ ದಾರವನ್ನು ಬಿಗಿಯಾಗಿ ಕಟ್ಟಿ ಅದಕ್ಕೆ ಬಣ್ಣ ಹಚ್ಚುವ ತಂತ್ರ ಇಂದಿಗೂ ಬಳಕೆಯಲ್ಲಿದೆ. ಇದನ್ನೇ ಬಂಧನಿ ಕಲೆ ಎನ್ನುತ್ತಾರೆ.
ಬಂಧನಿ ಮಾಡುವ ಪ್ರಕ್ರಿಯೆ:ಬಂಧನಿ ಕಲೆಗೆ ಸಾಕಷ್ಟು ಕೌಶಲ್ಯ ಬೇಕಾಗುತ್ತದೆ. ಮೊದಲನೆಯದಾಗಿ, ಒಂದು ತುಂಡು ಬಟ್ಟೆಯ ಮೇಲೆ ವಿನ್ಯಾಸವನ್ನು ತಯಾರಿಸಲಾಗುತ್ತದೆ. ಆ ವಿನ್ಯಾಸದ ಅಚ್ಚುವನ್ನು ಬಟ್ಟೆ ಮೇಲೆ ಬಿಡಿಸಲಾಗುತ್ತದೆ. ವಿನ್ಯಾಸದ ಬಳಿಕ ಅರ್ಧ ಭಾಗದ ಬಟ್ಟೆಯನ್ನು ದಾರದಿಂದ ಬಿಗಿಯಾಗಿ ಕಟ್ಟಲಾಗುತ್ತದೆ ಮತ್ತು ಬಣ್ಣದಲ್ಲಿ ಮುಳುಗಿಸಲಾಗುತ್ತದೆ. ಬಂಧನಿಯಲ್ಲಿ ವಿಶೇಷವಾಗಿ ಚಂದ್ರಕಲಾ, ಬವನ್ ಬಾಗ್, ಶಿಕಾರಿ ಮೊದಲಾದ ವಿನ್ಯಾಸಗಳು ಪ್ರಮುಖವಾಗಿವೆ. ದಾರದಿಂದ ಬಟ್ಟೆಯನ್ನು ಕಟ್ಟುವ ಕೆಲಸವನ್ನು ಸ್ಥಿರ ವಿನ್ಯಾಸದ ಪ್ರಕಾರ ಮಾಡಲಾಗುತ್ತದೆ. ಮುಖ್ಯವಾಗಿ ಹಳದಿ, ಕೆಂಪು, ನೀಲಿ, ಹಸಿರು ಮತ್ತು ಕಪ್ಪು ಬಣ್ಣಗಳನ್ನು ವಿವಿಧ ಬಂಧನಿ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ.