ಹೈದರಾಬಾದ್;ಹೂಡಿಕೆಯ ವಿಷಯದಲ್ಲಿ ಹೆಚ್ಚಿನ ಜನರು ಯೋಚಿಸುವ ಮೊದಲ ವಿಚಾರ ಎಂದರೆ ಅದು ಸುರಕ್ಷಿತವಾಗಿರಬೇಕು ಎಂದು. ಅಷ್ಟಕ್ಕೂ ನಿಮಗೆಲ್ಲ ತಟ್ಟಂಥ ನೆನಪಾಗುವುದು ಸ್ಥಿರ ಠೇವಣಿಗಳ ಬಗ್ಗೆಯೇ. ಯಾಕೆಂದರೆ ಸ್ಥಿರ ಠೇವಣಿ ಉತ್ತಮ ಮತ್ತು ಸುರಕ್ಷಿತ ಎಂಬ ಕಾರಣಕ್ಕೆ ಈ ಯೋಜನೆಯ ಮೊರೆ ಹೋಗ್ತಾರೆ ಹೆಚ್ಚಿನವರು. ಇವು ಆದಾಯ ಮತ್ತು ತೆರಿಗೆ ಪ್ರಯೋಜನಗಳನ್ನು ಹೊಂದಿರುವ ಕಾರಣ ಬಹುತೇಕರು ಇವುಗಳಲ್ಲಿಯೇ ಹೂಡಿಕೆ ಮಾಡುತ್ತಾರೆ. ಅಲ್ಲದೇ ಬ್ಯಾಂಕ್ ಗಳಲ್ಲಿ ಹಣ ಹಾಕಿದರೆ ಅಪಾಯ ಕಡಿಮೆ ಎಂಬುದನ್ನು ಪರಿಗಣಿಸಲಾಗುತ್ತದೆ.
ಹಣ ಕಳೆದು ಹೋಗುತ್ತೆ ಎಂಬ ಭಯದಲ್ಲಿ ಇರುವರಿಗಾಗಿ ಪೋಸ್ಟ್ ಆಫೀಸ್ 'ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ' ಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ. ಈ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಆಕರ್ಷಕ ಬಡ್ಡಿದರದ ಜತೆಗೆ ತೆರಿಗೆ ವಿನಾಯಿತಿಯನ್ನೂ ಕೂಡಾ ಪಡೆಯಬಹುದು. ಅದರಲ್ಲೂ ಬ್ಯಾಂಕ್‌ಗಳಲ್ಲಿ ಹಾಕುವ ನಿಶ್ಚಿತ ಠೇವಣಿಗಿಂತ ಈ ಯೋಜನೆಯಲ್ಲಿ ಹೆಚ್ಚು ಬಡ್ಡಿ ಬರುತ್ತದೆ.
ಬ್ಯಾಂಕ್ FD ಗೆ ಹೋಲಿಸಿದರೆ ಹೆಚ್ಚಿನ ಆದಾಯ:ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯು ಶೇ 7.7 ರಷ್ಟು ಸ್ಥಿರ ಬಡ್ಡಿದರವನ್ನು ನೀಡುತ್ತದೆ. ಇದು ಎಸ್‌ಬಿಐ ಸೇರಿದಂತೆ ಇತರ ಹಲವು ಬ್ಯಾಂಕ್‌ಗಳು ತಮ್ಮ ಸ್ಥಿರ ಠೇವಣಿಗಳ -ಎಫ್‌ಡಿ ಮೇಲೆ ನೀಡುವ ಬಡ್ಡಿ ದರಕ್ಕಿಂತ ಹೆಚ್ಚು. ಉದಾಹರಣೆಗೆ SBI ಪ್ರಸ್ತುತ 5 ವರ್ಷಗಳ ಅವಧಿಯೊಂದಿಗೆ ಸ್ಥಿರ ಠೇವಣಿಗಳ ಮೇಲೆ ಶೇ 6.50ರಷ್ಟು ಬಡ್ಡಿಯನ್ನು ನೀಡುತ್ತದೆ. ಆದರೆ ಎನ್‌ಎಸ್‌ಸಿಯಲ್ಲಿ ನಿಮಗೆ ಶೇಕಡಾ 7.7 ಬಡ್ಡಿ ಸಿಗುತ್ತದೆ.
1.5 ಲಕ್ಷದವರೆಗೆ ತೆರಿಗೆ ವಿನಾಯಿತಿ : ಸೆಕ್ಷನ್ 80C ಅಡಿ NSC ನಲ್ಲಿ ಹೂಡಿಕೆ ಮಾಡಿದ ಮೊತ್ತ ರೂ. 1.5 ಲಕ್ಷ ತೆರಿಗೆ ವಿನಾಯಿತಿಗೆ ಒಳ ಪಡುತ್ತದೆ.
NSC ಯೋಜನೆಯ ಪ್ರಯೋಜನಗಳು: