ಕರ್ನಾಟಕ

karnataka

ETV Bharat / business

ಕೇಂದ್ರ ಬಜೆಟ್​​- 2025 : ಯಾವ ವಸ್ತುಗಳು ಅಗ್ಗ, ಯಾವುದೆಲ್ಲಾ ದುಬಾರಿ? - CHEAPER AND COSTLY IN BUDGET

ಕೇಂದ್ರ ಬಜೆಟ್​ನಲ್ಲಿ ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಸರ್ಕಾರವು ಕೆಲ ವಸ್ತುಗಳ ಮೇಲಿನ ಸುಂಕವನ್ನು ಕಡಿಮೆ ಮಾಡಿದೆ.

ಕೇಂದ್ರ ಬಜೆಟ್​​ನಲ್ಲಿ ಯಾವ ವಸ್ತುಗಳು ಅಗ್ಗ, ದುಬಾರಿ
ಕೇಂದ್ರ ಬಜೆಟ್​​ನಲ್ಲಿ ಯಾವ ವಸ್ತುಗಳು ಅಗ್ಗ, ದುಬಾರಿ (ETV Bharat)

By ETV Bharat Karnataka Team

Published : Feb 1, 2025, 8:01 PM IST

ನವದೆಹಲಿ:ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು, ಸತತ 8 ನೇ ಬಜೆಟ್​ ಮಂಡಿಸಿದರು. 2025-26 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸಾಮಾನ್ಯರಿಗೆ ಹೊರೆ ತಗ್ಗಿಸಲು ಹಲವು ವಸ್ತುಗಳ ಮೇಲಿನ ದರ/ ತೆರಿಗೆಯನ್ನು ಇಳಿಸಲಾಗಿದೆ. ಇದೇ ವೇಳೆ ಕೆಲ ವಸ್ತುಗಳೂ ದುಬಾರಿಯಾಗಿವೆ.

ಯಾವೆಲ್ಲಾ ವಸ್ತುಗಳು ಅಗ್ಗ;

  • ಕ್ಯಾನ್ಸರ್ ರೋಗದ 36 ಜೀವರಕ್ಷಕ ಔಷಧಗಳ ಮೇಲಿನ ಕಸ್ಟಮ್ಸ್ ಸುಂಕ ಇಳಿಕೆ
  • ಕೋಬಾಲ್ಟ್ ಪುಡಿ, ಲಿಥಿಯಂ, ಸೀಸ, ಸತು, ಸೇರಿ 12 ಖನಿಜಗಳ ಮೇಲಿನ ತೆರಿಗೆ ಕಡಿತ
  • ಮೀನಿನ ಪ್ಲೇಟಿನ ಮೇಲಿನ ತೆರಿಗೆ
  • ಎಲೆಕ್ಟ್ರಿಕ್​ ಕಾರುಗಳು
  • ಎತರ್ನೆಟ್​ ಸ್ವಿಚ್​ ಮೇಲಿನ ತೆರಿಗೆ
  • ಭಾರತದಲ್ಲಿ ತಯಾರಿಸಿದ ಬಟ್ಟೆಗಳು
  • ಚರ್ಮದ ವಸ್ತುಗಳು
  • ಝಿಂಕ್​, ಲಿಥಿಯಮ್​​ ಬ್ಯಾಟಿರಿಯ ಸ್ಕ್ರ್ಯಾಪ್​ ಮೇಲಿನ ತೆರಿಗೆ ಇಳಿಕೆ
  • ದೋಣಿ, ಹಡಗು ತಯಾರಿಸಲು ಬಳಸುವ ಸಾಮಗ್ರಿಗಳ ಮೇಲಿನ ಕಸ್ಟಮ್ಸ್​ ಮುಂದಿನ 10 ವರ್ಷಗಳವರೆಗೆ ವಿನಾಯಿತಿ
  • ಕರಕುಶಲ ವಸ್ತುಗಳ ರಫ್ತಿಗೆ ಅವಕಾಶ

ಯಾವುದೆಲ್ಲಾ ದುಬಾರಿ;

  • ಫ್ಲ್ಯಾಟ್​ ಪ್ಯಾನಲ್​ ಡಿಸ್​​ಪ್ಲೇ ಮೇಲೆ ತೆರಿಗೆ
  • ಪ್ಲಾಸ್ಟಿಕ್​ ಉಪಕರಣಗಳ ಮೇಲಿನ ಕಸ್ಟಮ್ಸ್​ ಸುಂಕ ಶೇ.25 ರಷ್ಟು ಹೆಚ್ಚಳ
  • ಟೆಲಿಕಾಂ ಉಪಕರಣಗಳ ಮೇಲಿನ ಕಸ್ಟಮ್ಸ್​ ಸುಂಕ ಶೇ.10-15 ರಷ್ಟು ಅಧಿಕ
  • ನೇಯ್ಗೆಯ ಬಟ್ಟೆಗಳ ಮೇಲೆ ಸುಂಕ ಹೆಚ್ಚಳ
  • ಐಷಾರಾಮಿ ಸರಕುಗಳು ಮೇಲೆ ಹೆಚ್ಚಿನ ಸುಂಕ
  • ಆಲ್ಕೋಹಾಲ್​ ಮೇಲಿನ ಸುಂಕ ಹೆಚ್ಚಳ
  • ತಂಬಾಕು ಪದಾರ್ಥಗಳ ಮೇಲಿನ ಸುಂಕ ಏರಿಕೆ
  • ಸಿಗರೇಟ್​​ ಮೇಲಿನ ಸುಂಕ ಏರಿಕೆ
  • ಚಿನ್ನ ಮತ್ತ್ತು ಬೆಳ್ಳಿ ಮೇಲಿನ ಆಮದು ಸುಂಕ ಹೆಚ್ಚಳ
  • ವಿಮಾನ ಇಂಧನದ ಮೇಲಿನ ಟ್ಯಾಕ್ಸ್​ ಅಧಿಕ

ABOUT THE AUTHOR

...view details