ಕರ್ನಾಟಕ

karnataka

ETV Bharat / business

ಅಂಬುಜಾ ಸಿಮೆಂಟ್ಸ್​ನಲ್ಲಿ ಮತ್ತೆ 8,339 ಕೋಟಿ ರೂ. ಹೂಡಿಕೆ ಮಾಡಿದ ಅದಾನಿ ಗ್ರೂಪ್: ಪಾಲುದಾರಿಕೆ ಶೇ 70ಕ್ಕೆ ಏರಿಕೆ - Ambuja Cements - AMBUJA CEMENTS

ಅದಾನಿ ಗ್ರೂಪ್ ಅಂಬುಜಾ ಸಿಮೆಂಟ್ಸ್​ನಲ್ಲಿ ಮತ್ತೆ 8339 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದೆ.

Adani Family further infuses Rs 8,339 crore in Ambuja Cements
Adani Family further infuses Rs 8,339 crore in Ambuja Cements

By ETV Bharat Karnataka Team

Published : Apr 18, 2024, 1:07 PM IST

ಅಹಮದಾಬಾದ್: ಬಿಲಿಯನೇರ್ ಗೌತಮ್ ಅದಾನಿ ಅವರ ಅದಾನಿ ಗ್ರೂಪ್ ಅಂಬುಜಾ ಸಿಮೆಂಟ್ಸ್​ನಲ್ಲಿ ಹೆಚ್ಚುವರಿಯಾಗಿ 8,339 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ. ಈ ಮೂಲಕ ಅಂಬುಜಾ ಸಿಮೆಂಟ್ಸ್​ನಲ್ಲಿ ತನ್ನ ಪಾಲನ್ನು 70.3% ಕ್ಕೆ ಹೆಚ್ಚಿಸಿಕೊಂಡಿದೆ.

ಅದಾನಿ ಗ್ರೂಪ್ ಈ ಹಿಂದೆ ಅಕ್ಟೋಬರ್ 18, 2022 ರಂದು ಕಂಪನಿಯಲ್ಲಿ 5,000 ಕೋಟಿ ರೂ., ಮಾರ್ಚ್ 28, 2024 ರಂದು 6,661 ಕೋಟಿ ರೂ.ಗಳನ್ನು ಹೂಡಿಕೆ ಮಾಡಿತ್ತು. ಇತ್ತೀಚಿನ ಹೂಡಿಕೆಯೊಂದಿಗೆ, ಇದು ಯೋಜಿತ 20,000 ಕೋಟಿ ರೂ.ಗಳ ಹೂಡಿಕೆಯನ್ನು ಪೂರ್ಣಗೊಳಿಸಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಅಂಬುಜಾ ಸಿಮೆಂಟ್ಸ್​ನ ವಾರಂಟಿಗಳನ್ನು ಅದಾನಿ ಗ್ರೂಪ್ ಸಂಪೂರ್ಣವಾಗಿ ಖರೀದಿಸಿದ್ದು, 8,339 ಕೋಟಿ ರೂ.ಗಳಷ್ಟು ಹೆಚ್ಚುವರಿ ಹೂಡಿಕೆ ಮಾಡುವ ಮೂಲಕ ಕಂಪನಿಯಲ್ಲಿ ತನ್ನ ಪಾಲನ್ನು ಶೇಕಡಾ 70.3 ಕ್ಕೆ ಹೆಚ್ಚಿಸಿಕೊಂಡಿದೆ.

ಸಿಮೆಂಟ್ ವಿಭಾಗದ ಉತ್ಪಾದನೆಯನ್ನು 2028 ರ ವೇಳೆಗೆ ವಾರ್ಷಿಕ 140 ಮಿಲಿಯನ್ ಟನ್ (ಎಂಟಿಪಿಎ)ಗೆ ಹೆಚ್ಚಿಸಲು ನಿಧಿಯ ಒಳಹರಿವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

"ಈ ನಿಧಿಯ ಒಳಹರಿವು ಅಂಬುಜಾ ಸಿಮೆಂಟ್ಸ್​ನ ತ್ವರಿತ ಬೆಳವಣಿಗೆ, ಬಂಡವಾಳ ನಿರ್ವಹಣಾ ಉಪಕ್ರಮಗಳು ಮತ್ತು ಅತ್ಯುತ್ತಮ ದರ್ಜೆಯ ಬ್ಯಾಲೆನ್ಸ್ ಶೀಟ್​ಗೆ ಅವಕಾಶ ನೀಡುತ್ತವೆ" ಎಂದು ಅಂಬುಜಾ ಸಿಮೆಂಟ್ಸ್ ಲಿಮಿಟೆಡ್​ನ ಪೂರ್ಣಾವಧಿ ನಿರ್ದೇಶಕ ಮತ್ತು ಸಿಇಒ ಅಜಯ್ ಕಪೂರ್ ಹೇಳಿದರು.

ಈ ವಾರದ ಆರಂಭದಲ್ಲಿ, ಅಂಬುಜಾ ಸಿಮೆಂಟ್ಸ್ ತಮಿಳುನಾಡಿನ ಟ್ಯುಟಿಕೋರಿನ್​ನಲ್ಲಿರುವ ಮೈ ಹೋಮ್ ಗ್ರೂಪ್​ನ 1.5 ಎಂಟಿಪಿಎ ಸಿಮೆಂಟ್ ಗ್ರೈಂಡಿಂಗ್ ಘಟಕವನ್ನು 413.75 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿತು. ಈ ಸ್ವಾಧೀನದ ನಂತರ ಅದಾನಿ ಗ್ರೂಪ್​ನ ಒಟ್ಟು ಸಿಮೆಂಟ್ ಸಾಮರ್ಥ್ಯವು 78.9 ಎಂಟಿಪಿಎಗೆ ತಲುಪಿದೆ.

ಅಂಬುಜಾ ತನ್ನ ಅಂಗಸಂಸ್ಥೆಗಳಾದ ಎಸಿಸಿ ಲಿಮಿಟೆಡ್ ಮತ್ತು ಸಂಘಿ ಇಂಡಸ್ಟ್ರೀಸ್ ಲಿಮಿಟೆಡ್​ನೊಂದಿಗೆ ದೇಶಾದ್ಯಂತ 18 ಸಮಗ್ರ ಸಿಮೆಂಟ್ ಉತ್ಪಾದನಾ ಘಟಕಗಳು ಮತ್ತು 19 ಸಿಮೆಂಟ್ ಗ್ರೈಂಡಿಂಗ್ ಘಟಕಗಳನ್ನು ಹೊಂದಿದ್ದು, ಅದಾನಿ ಗ್ರೂಪ್​ನ ಒಟ್ಟು ಸಿಮೆಂಟ್ ಉತ್ಪಾದನಾ ಸಾಮರ್ಥ್ಯವು 78.9 ಎಂಟಿಪಿಎಗೆ ತಲುಪಿದೆ. ಅದಾನಿ ಗ್ರೂಪ್ ಭಾರತದಲ್ಲಿ 10 ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಗಳನ್ನು ಒಳಗೊಂಡಿರುವ ವೈವಿಧ್ಯಮಯ ಸಂಸ್ಥೆಯಾಗಿದೆ. ಅದಾನಿ ಗ್ರೂಪ್ ಭಾರತದ ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.

ಇದನ್ನೂ ಓದಿ : 9 ಸೀಟರ್ ಮಹೀಂದ್ರಾ ಬೊಲೆರೊ Neo+ ಎಸ್​ಯುವಿ ಬಿಡುಗಡೆ​: ಬೆಲೆ ₹11.39 ಲಕ್ಷದಿಂದ ಆರಂಭ - Mahindra Bolero Neo Plus

For All Latest Updates

ABOUT THE AUTHOR

...view details