ಮುಂಬೈ: ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಇಂದು 667 ಅಂಕ ಕಳೆದುಕೊಂಡು 74,502ಕ್ಕೆ ಇಂದಿನ ವಹಿವಾಟನ್ನು ಮುಗಿಸಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 183 ಅಂಕ ಕಳೆದುಕೊಂಡು 22,704ಕ್ಕೆ ಕೊನೆಗೊಂಡಿದೆ. ನಿನ್ನೆ ಸಹ ಮಾರುಕಟ್ಟೆ ಕುಸಿತದೊಂದಿಗೆ ವ್ಯವಹಾರವನ್ನು ಮಗಿಸಿತ್ತು. ಸೋಮವಾರ ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಕಂಡು ಬಂದಿತ್ತು. ಇದೇ ರೀತಿಯ ವಹಿವಾಟು ಈ ವಾರ ಇರಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಗಳಿಕೆ ಷೇರುಗಳು : ಪವರ್‌ಗ್ರಿಡ್, ಸನ್‌ಫಾರ್ಮಾ, ನೆಸ್ಲೆ ಇಂಡಿಯಾ, ಐಟಿಸಿ, ಭಾರ್ತಿ ಏರ್‌ಟೆಲ್, ಇಂಡಸ್‌ಇಂಡ್ ಬ್ಯಾಂಕ್ಗಳು ಇಂದಿನ ಭಾರಿ ಕುಸಿತ ವಹಿವಾಟಿನಲ್ಲೂ ಲಾಭ ತಂದುಕೊಟ್ಟಿವೆ.
ನಷ್ಟಕ್ಕೆ ಒಳಗಾದ ಷೇರುಗಳು: M&M, ಟೆಕ್ ಮಹೀಂದ್ರಾ, HDFC ಬ್ಯಾಂಕ್, ICICI ಬ್ಯಾಂಕ್, ಇನ್ಫೋಸಿಸ್ ಷೇರುಗಳು ಕುಸಿತ ಕಂಡಿದ್ದು, ಷೇರುದಾರರು ನಷ್ಟಕ್ಕೆ ಒಳಗಾಗಿದ್ದಾರೆ.
ಬ್ಯಾಂಕಿಂಗ್ ಮತ್ತು ರಿಯಾಲ್ಟಿ ಷೇರುಗಳ ಗತಿ ಏನು?: ಮುಖ್ಯವಾಗಿ ಬ್ಯಾಂಕಿಂಗ್ ಮತ್ತು ರಿಯಾಲ್ಟಿ ಷೇರುಗಳು ಬುಧವಾರ ಭಾರಿ ನಷ್ಟ ಅನುಭವಿಸಿವೆ. ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಆರ್‌ಬಿಎಲ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಕೋಟಕ್ ಬ್ಯಾಂಕ್, ಎಸ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಮತ್ತು ಎಸ್‌ಬಿಐ ನಷ್ಟಕ್ಕೆ ಗುರಿಯಾಗಿದೆ. ರಿಯಾಲ್ಟಿ ಷೇರುಗಳಲ್ಲಿ ಲೋಧಾ, ಪ್ರೆಸ್ಟೀಜ್ ಮತ್ತು ಗೋದ್ರೇಜ್ ಆಸ್ತಿಗಳು ಕೂಡ ಭಾರಿ ನಷ್ಟವನ್ನು ಅನುಭವಿಸಿವೆ.