ಕರ್ನಾಟಕ

karnataka

ETV Bharat / business

ಪುಟಿದೆದ್ದ ಷೇರು ಮಾರುಕಟ್ಟೆ: ಸೆನ್ಸೆಕ್ಸ್​ 378 ಅಂಕ ಏರಿಕೆ, 24,698ಕ್ಕೆ ತಲುಪಿದ ನಿಫ್ಟಿ - Stock Market Today

ಭಾರತೀಯ ಷೇರು ಮಾರುಕಟ್ಟೆಗಳು ಇಂದು ಏರಿಕೆಯೊಂದಿಗೆ ಕೊನೆಗೊಂಡಿವೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Aug 20, 2024, 5:57 PM IST

ಮುಂಬೈ: ಜಾಗತಿಕ ಷೇರು ಮಾರುಕಟ್ಟೆಗಳಲ್ಲಿನ ದೃಢ ಪ್ರವೃತ್ತಿಯ ಮಧ್ಯೆ ಬ್ಯಾಂಕಿಂಗ್, ಹಣಕಾಸು ಮತ್ತು ವಾಹನ ಷೇರುಗಳ ಬಲವಾದ ಖರೀದಿಯಿಂದಾಗಿ ಮುಂಬೈ ಷೇರು ಮಾರುಕಟ್ಟೆಯ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ ಏರಿಕೆ ಕಂಡವು.

30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 378.18 ಪಾಯಿಂಟ್ಸ್ ಅಥವಾ ಶೇಕಡಾ 0.47ರಷ್ಟು ಏರಿಕೆಯಾಗಿ 80,802.86ಕ್ಕೆ ತಲುಪಿದೆ. ದಿನದ ವಹಿವಾಟಿನ ಒಂದು ಹಂತದಲ್ಲಿ ಸೆನ್ಸೆಕ್ಸ್​ 518.28 ಪಾಯಿಂಟ್ ಅಥವಾ ಶೇಕಡಾ 0.64 ರಷ್ಟು ಏರಿಕೆಯಾಗಿ 80,942.96 ಕ್ಕೆ ತಲುಪಿತ್ತು. ಎನ್ಎಸ್ಇ ನಿಫ್ಟಿ 126.20 ಪಾಯಿಂಟ್ಸ್ ಅಥವಾ ಶೇಕಡಾ 0.51ರಷ್ಟು ಏರಿಕೆಯಾಗಿ 24,698.85 ಕ್ಕೆ ತಲುಪಿದೆ.

ಸೆನ್ಸೆಕ್ಸ್‌ನ 30 ಷೇರುಗಳ ಪೈಕಿ ಬಜಾಜ್ ಫಿನ್ ಸರ್ವ್, ಇಂಡಸ್ ಇಂಡ್ ಬ್ಯಾಂಕ್, ಟೆಕ್ ಮಹೀಂದ್ರಾ, ಬಜಾಜ್ ಫೈನಾನ್ಸ್, ಕೊಟಕ್ ಮಹೀಂದ್ರಾ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಎನ್‌ಟಿಪಿಸಿ ಮತ್ತು ಸನ್ ಫಾರ್ಮಾ ಲಾಭ ಗಳಿಸಿದ ಪ್ರಮುಖ ಷೇರುಗಳಾಗಿವೆ. ಮತ್ತೊಂದೆಡೆ, ಭಾರ್ತಿ ಏರ್ ಟೆಲ್, ಐಟಿಸಿ, ಅದಾನಿ ಪೋರ್ಟ್ಸ್, ಜೆಎಸ್ ಡಬ್ಲ್ಯೂ ಸ್ಟೀಲ್ ಮತ್ತು ಟಾಟಾ ಮೋಟಾರ್ಸ್ ನಷ್ಟ ಅನುಭವಿಸಿದವು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಸೋಮವಾರ 2,667.46 ಕೋಟಿ ರೂ.ಗಳ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿ ಅಂಶಗಳು ತಿಳಿಸಿವೆ. ಏತನ್ಮಧ್ಯೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) 1,802.92 ಕೋಟಿ ರೂ.ಗಳ ಈಕ್ವಿಟಿಗಳನ್ನು ಖರೀದಿಸಿದ್ದಾರೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ಸಿಯೋಲ್ ಮತ್ತು ಟೋಕಿಯೊ ಏರಿಕೆಯಲ್ಲಿ ಕೊನೆಗೊಂಡರೆ, ಶಾಂಘೈ ಮತ್ತು ಹಾಂಗ್ ಕಾಂಗ್ ಇಳಿಕೆಯೊಂದಿಗೆ ಕೊನೆಗೊಂಡವು. ಜಾಗತಿಕ ತೈಲ ಬೆಲೆಯ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.72ರಷ್ಟು ಇಳಿದು ಬ್ಯಾರೆಲ್​ಗೆ 77.10 ಡಾಲರ್​ಗೆ ತಲುಪಿದೆ.

ಭಾರತೀಯ ರೂಪಾಯಿ ಮಂಗಳವಾರ (ಆಗಸ್ಟ್ 20, 2024) ಯುಎಸ್ ಡಾಲರ್ ವಿರುದ್ಧ 8 ಪೈಸೆ ಏರಿಕೆಯಾಗಿ 83.79 ಕ್ಕೆ (ತಾತ್ಕಾಲಿಕ) ಸ್ಥಿರವಾಯಿತು. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಡಾಲರ್ ವಿರುದ್ಧ ರೂಪಾಯಿ 83.86 ರಲ್ಲಿ ಪ್ರಾರಂಭವಾಯಿತು ಮತ್ತು 83.76 ರಿಂದ 83.88 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು. ರೂಪಾಯಿ ಅಂತಿಮವಾಗಿ ಡಾಲರ್ ವಿರುದ್ಧ 83.79 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯ ಮಟ್ಟಕ್ಕಿಂತ 8 ಪೈಸೆ ಲಾಭವಾಗಿದೆ.

ಇದನ್ನೂ ಓದಿ: ಹೊಸೂರಿನ ಟಾಟಾ ಐಫೋನ್​ ಕಾರ್ಖಾನೆ 2024ರ ವರ್ಷಾಂತ್ಯಕ್ಕೆ ಆರಂಭ ಸಾಧ್ಯತೆ: 50 ಸಾವಿರ ಜನರಿಗೆ ಉದ್ಯೋಗ - Hosur Tata iPhone Factory

ABOUT THE AUTHOR

...view details