ಹೈದರಾಬಾದ್:ಮುತ್ತಿನ ನಗರಿಯಲ್ಲಿ ದಿನನಿತ್ಯದ ಬ್ಯುಸಿ ಜೀವನದಲ್ಲಿ ತಮ್ಮದೇ ಕುಂಚದ ಲೋಕದಲ್ಲಿ ಕಳೆದು ಹೋದ ಅನೇಕ ಯುವ ಜನರಿದ್ದಾರೆ. ಅವರ ಕಲೆ ಕುರಿತಾದ ತುಡಿತ, ಉತ್ಸಾಹ ಮತ್ತು ಕುಟುಂಬದ ಬೆಂಬಲದ ನಡುವೆ ಕೆಲವರು ಸದ್ದಿಲ್ಲದೇ ಸಾಧನೆ ಮಾಡುತ್ತಿದ್ದಾರೆ. ಅಂತಹ ಒಬ್ಬ ಯುವ ಕಲಾವಿದೆ ಶ್ರೀಜಾ ಕನುಮರಿ. ಬಾಲ್ಯದಿಂದಲೂ ಕಲೆಯಲ್ಲಿ ಅತೀವ ಆಸಕ್ತಿ ಹೊಂದಿರುವ ಶ್ರೀಜಾಳ ಕಲೆ ಇದೀಗ ಅವಳನ್ನು ಸಿಂಗಾಪೂರದ ಭಾರತೀಯ ಹೈ ಕಮಿಷನ್ನತ್ತ ಸಾಗುವಂತೆ ಮಾಡಿದೆ.
ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಶ್ರೀಜಾ ಕಲೆಗೆ ಪೋಷಕರಿಂದ ಸಿಕ್ಕ ಬೆಂಬಲ ಅಪಾರ. ತಂದೆ ಸೋಮರಾಜು ಗ್ರಾಮಗಳ ವಿದ್ಯುದೀಕರಣಕ್ಕೆ ನಿರಂತವಾಗಿ ಕೆಲಸ ಮಾಡಿದರೆ, ತಾಯಿ ಗೃಹಿಣಿಯಾಗಿದ್ದಾರೆ. ಶ್ರೀಜಾ ಬಾಲ್ಯದಲ್ಲಿಯೇ ಕಲೆ ಬಗ್ಗೆ ಆಸಕ್ತಿ ಹೊಂದಲು ಆಕೆಯ ತಾಯಿಯ ಪ್ರೋತ್ಸಾಹವೇ ಹೆಚ್ಚಿದೆ. ಮಗಳ ಕಲೆ ಕುರಿತ ಆಸಕ್ತಿ ತಿಳಿದ ತಾಯಿ, ಆಕೆಯ ಆಸಕ್ತಿಗೆ ನೀರೆರದು ಪೋಷಿಸಿದರು. ಮಗಳು ಇಂಜಿನಿಯರ್ ಅಥವಾ ವೈದ್ಯೆಯಾಗಬೇಕು ಎಂಬ ಕನಸು ಬಿಟ್ಟು ತಮ್ಮ ಆಸಕ್ತಿ ಬೆನ್ನಟ್ಟುವಂತೆ ಬೆಂಬಲಿಸಿದರು.
ತನ್ನ ಆರಂಭದ ದಿನದಲ್ಲಿ ತಾಯಿಯ ಪಾತ್ರವನ್ನು ಆಕೆಯ ಪ್ರೋತ್ಸಾಹವನ್ನು ನೆನಪಿಸಿಕೊಂಡ ಶ್ರೀಜಾ, ನನ್ನ ತಾಯಿಗೆ ಯಾವುದೇ ಹವ್ಯಾಸಗಳು ಇರಲಿಲ್ಲ. ಇದೇ ಕಾರಣಕ್ಕೆ ಆಕೆ ನಮ್ಮ ಆಸಕ್ತಿ ವಿಚಾರಕ್ಕೆ ನೀರೆರದು ಪೋಷಿಸಿದಳು. ಅಷ್ಟೇ ಅಲ್ಲದೇ, ನಮ್ಮ ಹೃದಯದ ಮಾತು ಕೇಳುವಂತೆ ತಿಳಿಸಿದಳು. ಅದರಂತೆ ನಾನು ಕೂಡ ಮುಂದುವರಿದೆ. ಟೆಸ್ಟ್ಬುಕ್ನ ಮಾರ್ಜಿನ್ಗಳ ಅವಿಷ್ಕಾರದಿಂದ ಕುಚಿಪುಡಿ ನೃತ್ಯದವರೆಗೆ ಎಲ್ಲಾ ರೀತಿಯ ಕಲೆಗಳ ಅನಾವರಣ ಮಾಡಲು ಮುಂದಾದೆ ಎನ್ನುತ್ತಾರೆ ಅವರು.
ಶ್ರೀಜಾ ಈ ಕಲಾ ಪ್ರಯಾಣವೂ ಆತ್ಮತೃಪ್ತಿಯನ್ನು ಹೊಂದುವ ಗುರಿಯನ್ನು ಹೊಂದಿದೆ. ಸಾಂಪ್ರದಾಯಿಕ ವೃತ್ತಿಯನ್ನು ಹೊಂದುವಂತಹ ಸಾಮಾಜಿಕ ಜಗತ್ತಿನ ಒತ್ತಡದ ಹೊರತಾಗಿ ಶ್ರೀಜಾ ಕಲಾ ಜಗತ್ತಿನಲ್ಲಿ ತಮ್ಮ ಆತ್ಮತೃಪ್ತಿಯನ್ನು ಪಡೆಯುತ್ತಿದ್ದು, ಸಾಧನೆಯನ್ನೂ ಮಾಡುತ್ತಿದ್ದಾರೆ.