ಕರ್ನಾಟಕ

karnataka

ETV Bharat / business

ಭಾರತದಲ್ಲಿ ಸ್ಮಾರ್ಟ್​ಫೋನ್ ಮಾರಾಟ ಶೇ 8ರಷ್ಟು ಹೆಚ್ಚಳ: 5ಜಿ ಫೋನ್​ಗಳಿಗೆ ಅತ್ಯಧಿಕ ಬೇಡಿಕೆ - India Smartphone Market

ಭಾರತದ ಸ್ಮಾರ್ಟ್​ಫೋನ್ ಮಾರಾಟ ಶೇ 8ರಷ್ಟು ಹೆಚ್ಚಾಗಿದೆ.

By ETV Bharat Karnataka Team

Published : May 9, 2024, 12:54 PM IST

ಭಾರತದಲ್ಲಿ ಸ್ಮಾರ್ಟ್​ಫೋನ್ ಮಾರಾಟ
ಭಾರತದಲ್ಲಿ ಸ್ಮಾರ್ಟ್​ಫೋನ್ ಮಾರಾಟ (IANS)

ನವದೆಹಲಿ: ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆಯು ಸಂಖ್ಯಾ ದೃಷ್ಟಿಯಿಂದ ದಾಖಲೆಯ ಶೇಕಡಾ 8 ರಷ್ಟು (ವರ್ಷದಿಂದ ವರ್ಷಕ್ಕೆ) ಮತ್ತು ಮೌಲ್ಯದ ದೃಷ್ಟಿಯಿಂದ ಶೇಕಡಾ 18 ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ವರದಿಯೊಂದು ಗುರುವಾರ ತಿಳಿಸಿದೆ. ಎಲ್ಲಾ ಶ್ರೇಣಿಯ ಗ್ರಾಹಕರು ಪ್ರಸ್ತುತ ಬಳಸುತ್ತಿರುವುದಕ್ಕಿಂತರ ಹೆಚ್ಚಿನ ಬೆಲೆಯ ಸ್ಮಾರ್ಟ್​ಪೋನ್​ಗಳನ್ನು ಖರೀದಿಸುತ್ತಿರುವುದು ಈ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ.

ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, ಸ್ಮಾರ್ಟ್​ಪೋನ್ ಮಾರುಕಟ್ಟೆಯಲ್ಲಿ 5ಜಿ ಸ್ಮಾರ್ಟ್​ಪೋನ್​ಗಳ ಪಾಲು ಗರಿಷ್ಠ ಶೇಕಡಾ 71 ರಷ್ಟಿದೆ. ಪ್ರೀಮಿಯಂ ವಿಭಾಗದ ಪೋನ್​ಗಳು ಸಂಖ್ಯಾದೃಷ್ಟಿಯಿಂದ ಶೇಕಡಾ 20 ರಷ್ಟು ಪಾಲು ಹೊಂದಿದ್ದು, ಹಿಂದೆಂದಿಗಿಂತಲೂ ಅತ್ಯಧಿಕವಾಗಿದೆ ಮತ್ತು ಮೌಲ್ಯದ ದೃಷ್ಟಿಯಿಂದ ದೇಶದ ಒಟ್ಟಾರೆ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಶೇಕಡಾ 51 ರಷ್ಟು ಪಾಲು ಪಡೆದುಕೊಂಡಿವೆ.

ಸದ್ಯ ಮಧ್ಯಮ ಶ್ರೇಣಿಯ ಮೂರನೇ ಒಂದು ಭಾಗದಷ್ಟು ಸ್ಮಾರ್ಟ್​ಫೋನ್ ಬಳಕೆದಾರರು ತಾವು ಮುಂದಿನ ಬಾರಿ ಪ್ರೀಮಿಯಂ ಸ್ಮಾರ್ಟ್​​ಫೋನ್ ಕೊಳ್ಳಲು ಸಿದ್ಧರಾಗಿದ್ದಾರೆ ಎಂದು ವರದಿ ಹೇಳಿದೆ.

"ಭಾರತದ ಸ್ಮಾರ್ಟ್​ಪೋನ್ ಮಾರುಕಟ್ಟೆಯು ಈ ತ್ರೈಮಾಸಿಕದಲ್ಲಿ ಅತ್ಯಧಿಕ ಬೆಳವಣಿಗೆ ಕಂಡಿದೆ. ಮುಖ್ಯವಾಗಿ ಪ್ರೀಮಿಯಂ ಫೋನ್​ಗಳ ಮಾರಾಟ ಹೆಚ್ಚಳದಿಂದ ಈ ಬೆಳವಣಿಗೆ ಸಾಧ್ಯವಾಗಿದೆ. ಕೈಗೆಟುಕುವ ಹಣಕಾಸು ಸಾಲ ಯೋಜನೆಗಳು, ಹಳೆಯ ಫೋನಿಗೆ ಉತ್ತಮ ಬೆಲೆ ಮತ್ತು ಆಫರ್​ಗಳು, ಜೊತೆಗೆ ಎಐ, ಗೇಮಿಂಗ್ ಮತ್ತು ಇಮೇಜಿಂಗ್ ಸುಧಾರಣೆಯಂಥ ಉನ್ನತ ಶ್ರೇಣಿಯ ವೈಶಿಷ್ಟ್ಯಗಳಿಗೆ ಬೇಡಿಕೆ ಉಂಟಾಗಿರುವುದು ಕೂಡ ಸ್ಮಾರ್ಟ್​ಪೋನ್ ಮಾರುಕಟ್ಟೆಯ ಬೆಳವಣಿಗೆಗೆ ಕಾರಣವಾಗಿವೆ" ಎಂದು ಹಿರಿಯ ಸಂಶೋಧನಾ ವಿಶ್ಲೇಷಕಿ ಶಿಲ್ಪಿ ಜೈನ್ ಹೇಳಿದ್ದಾರೆ.

ಸಂಖ್ಯಾದೃಷ್ಟಿಯಿಂದ ಇದೇ ಮೊದಲ ಬಾರಿಗೆ ವಿವೋ ಯಾವುದೇ ಒಂದು ತ್ರೈಮಾಸಿಕದಲ್ಲಿ ಅತ್ಯಧಿಕ ಮಾರುಕಟ್ಟೆ ಪಾಲು ಪಡೆದುಕೊಂಡಿದೆ. ಒಟ್ಟು ಮಾರುಕಟ್ಟೆ ಮೌಲ್ಯದ ದೃಷ್ಟಿಯಿಂದ ನಾಲ್ಕನೇ ಒಂದು ಭಾಗದಷ್ಟು ಪಾಲು ಪಡೆದ ಸ್ಯಾಮ್​ಸಂಗ್ ಈ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ. ಸ್ಯಾಮ್ ಸಂಗ್​ನ ಸರಾಸರಿ ಮಾರಾಟ ಬೆಲೆ (ಎಎಸ್​ಪಿ) ಭಾರತದಲ್ಲಿ ಇದುವರೆಗಿನ ಗರಿಷ್ಠ ಮಟ್ಟವನ್ನು ತಲುಪಿದೆ.

ಪ್ರೀಮಿಯಂ ಫೋನ್​ಗಳ ಮಾರಾಟದಲ್ಲಿ ಹೆಚ್ಚಳ, 5ಜಿ ನೆಟ್​ವರ್ಕ್​ನ ಬಳಕೆ ಹೆಚ್ಚಳ ಮತ್ತು ಕೋವಿಡ್ ನಂತರ ಹೊಸ ಫೋನ್​ಗಳ ಕೊಲ್ಳುವಿಕೆಗಳ ಕಾರಣದಿಂದ 2024 ರಲ್ಲಿ ಭಾರತದ ಸ್ಮಾರ್ಟ್​ಪೋನ್​ ಮಾರುಕಟ್ಟೆ ಏಕ ಅಂಕಿಯಲ್ಲಿ ಬೆಳೆಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ವರದಿ ಹೇಳಿದೆ.

ಇದನ್ನೂ ಓದಿ : 2022ರಲ್ಲಿ ಭಾರತಕ್ಕೆ ವಿದೇಶಗಳಿಂದ 111 ಶತಕೋಟಿ ಡಾಲರ್ ಹಣ ವರ್ಗಾವಣೆ: ವಿಶ್ವದಲ್ಲೇ ಇದು ಅತ್ಯಧಿಕ - Foreign Remittances

For All Latest Updates

ABOUT THE AUTHOR

...view details