ಮುಂಬೈ: ಸೋಮವಾರದ ವಹಿವಾಟಿನಲ್ಲಿ ಭಾರತದ ಬೆಂಚ್ ಮಾರ್ಕ್ ಈಕ್ವಿಟಿ ಸೂಚ್ಯಂಕಗಳು ಅಲ್ಪಮಟ್ಟದ ಏರಿಕೆಯೊಂದಿಗೆ ಕೊನೆಗೊಂಡಿವೆ. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 131.18 ಪಾಯಿಂಟ್ ಅಥವಾ ಶೇಕಡಾ 0.17ರಷ್ಟು ಏರಿಕೆ ಕಂಡು 77,341.08ರಲ್ಲಿ ಕೊನೆಗೊಂಡಿದೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 463.96 ಪಾಯಿಂಟ್ ಅಥವಾ ಶೇಕಡಾ 0.60ರಷ್ಟು ಕುಸಿದು 76,745.94ಕ್ಕೆ ತಲುಪಿತ್ತು. ನಿಫ್ಟಿ 36.75 ಪಾಯಿಂಟ್ ಅಥವಾ ಶೇಕಡಾ 0.16ರಷ್ಟು ಏರಿಕೆ ಕಂಡು 23,537.85ರಲ್ಲಿ ಕೊನೆಗೊಂಡಿದೆ.
ಸೆನ್ಸೆಕ್ಸ್‌ನ 30 ಕಂಪನಿಗಳ ಪೈಕಿ ಮಹೀಂದ್ರಾ & ಮಹೀಂದ್ರಾ, ಪವರ್ ಗ್ರಿಡ್, ಸನ್ ಫಾರ್ಮಾ, ನೆಸ್ಲೆ, ಅಲ್ಟ್ರಾಟೆಕ್ ಸಿಮೆಂಟ್, ಎನ್‌ಟಿಪಿಸಿ, ಐಟಿಸಿ, ಐಸಿಐಸಿಐ ಬ್ಯಾಂಕ್, ಟೈಟಾನ್, ಬಜಾಜ್ ಫಿನ್ ಸರ್ವ್, ಭಾರ್ತಿ ಏರ್‌ಟೆಲ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಅತಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ. ಇಂಡಸ್ಇಂಡ್ ಬ್ಯಾಂಕ್, ಅದಾನಿ ಪೋರ್ಟ್ಸ್, ಟಾಟಾ ಸ್ಟೀಲ್, ರಿಲಯನ್ಸ್ ಇಂಡಸ್ಟ್ರೀಸ್, ಆಕ್ಸಿಸ್ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ನಷ್ಟ ಅನುಭವಿಸಿದವು.
ಏಷ್ಯಾದ ಮಾರುಕಟ್ಟೆಗಳಲ್ಲಿ ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಇಳಿಕೆಯಲ್ಲಿ ವಹಿವಾಟು ನಡೆಸಿದರೆ, ಟೋಕಿಯೊ ಏರಿಕೆಯೊಂದಿಗೆ ಕೊನೆಗೊಂಡಿತು. ಯುರೋಪಿಯನ್ ಮಾರುಕಟ್ಟೆಗಳು ಲಾಭದೊಂದಿಗೆ ವಹಿವಾಟು ನಡೆಸುತ್ತಿವೆ. ಯುಎಸ್ ಮಾರುಕಟ್ಟೆಗಳು ಶುಕ್ರವಾರ ಬಹುತೇಕ ಕೆಳಮಟ್ಟದಲ್ಲಿ ಕೊನೆಗೊಂಡವು.