ಕರ್ನಾಟಕ

karnataka

ETV Bharat / business

ಷೇರು ಮಾರುಕಟ್ಟೆಯಲ್ಲಿ ಇಂದು ಭರ್ಜರಿ ರ್‍ಯಾಲಿ: ಹೂಡಿಕೆದಾರರಿಗೆ ಸಖತ್​ ಲಾಭ - Stock Market Today

ಶುಕ್ರವಾರದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆ ಏರಿಕೆಯೊಂದಿಗೆ ಕೊನೆಗೊಂಡಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Sep 20, 2024, 6:22 PM IST

ಮುಂಬೈ:ಭಾರತೀಯ ಷೇರು ಮಾರುಕಟ್ಟೆಯ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ50 ಶುಕ್ರವಾರದ ವಹಿವಾಟಿನಲ್ಲಿ ಏರಿಕೆಯೊಂದಿಗೆ ಕೊನೆಗೊಂಡಿವೆ. ಎರಡೂ ಸೂಚ್ಯಂಕಗಳು ಇಂದು ತಲಾ 1 ಪ್ರತಿಶತದಷ್ಟು ಲಾಭದೊಂದಿಗೆ ಕೊನೆಗೊಂಡಿವೆ.

ಇಂಟ್ರಾಡೇ ವಹಿವಾಟಿನಲ್ಲಿ ದಾಖಲೆಯ ಏರಿಕೆ:ಸೆನ್ಸೆಕ್ಸ್ 1,359.51 ಪಾಯಿಂಟ್ ಅಥವಾ ಶೇಕಡಾ 1.63 ರಷ್ಟು ಏರಿಕೆಯಾಗಿ 84,544.31 ರಲ್ಲಿ ಕೊನೆಗೊಂಡಿದೆ. ಸೂಚ್ಯಂಕವು ಇಂಟ್ರಾಡೇ ವಹಿವಾಟಿನಲ್ಲಿ ದಾಖಲೆಯ ಗರಿಷ್ಠ 84,694.46 ಕ್ಕೆ ಏರಿಕೆಯಾಗಿತ್ತು. ಹಾಗೆಯೇ ನಿಫ್ಟಿ 50 ಶುಕ್ರವಾರದ ವಹಿವಾಟಿನಲ್ಲಿ 375.15 ಪಾಯಿಂಟ್ ಅಥವಾ ಶೇಕಡಾ 1.48 ರಷ್ಟು ಏರಿಕೆಯೊಂದಿಗೆ 25,790.95 ರಲ್ಲಿ ಕೊನೆಗೊಂಡಿದೆ. ನಿಫ್ಟಿ ಇಂಟ್ರಾಡೇ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ 25,849.25 ಕ್ಕೆ ತಲುಪಿತ್ತು.

ಈ ಷೇರುಗಳಿಗೆ ಭರ್ಜರಿ ಲಾಭ:ನಿಫ್ಟಿ 50 ರ 50 ಘಟಕ ಷೇರುಗಳಲ್ಲಿ 44 ಷೇರುಗಳು ಏರಿಕೆ ಕಂಡವು. ನಿಫ್ಟಿಯಲ್ಲಿ ಮಹೀಂದ್ರಾ & ಮಹೀಂದ್ರಾ, ಐಸಿಐಸಿಐ ಬ್ಯಾಂಕ್, ಜೆಎಸ್​​ಡಬ್ಲ್ಯೂ ಸ್ಟೀಲ್, ಲಾರ್ಸೆನ್ & ಟೂಬ್ರೊ ಮತ್ತು ಕೋಲ್ ಇಂಡಿಯಾ ತಲಾ ಶೇಕಡಾ 5.3 ರಷ್ಟು ಲಾಭದೊಂದಿಗೆ ಕೊನೆಗೊಂಡಿವೆ.

ಕೆಲ ಷೇರುಗಳಿಗೆ ನಷ್ಟ: ಇನ್ನು ಗ್ರಾಸಿಮ್ ಇಂಡಸ್ಟ್ರೀಸ್, ಎಸ್​ಬಿಐ ಮತ್ತು ಎನ್​ಟಿಪಿಸಿ ಶುಕ್ರವಾರ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ.

ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕ ಶೇಕಡಾ 1.44 ರಷ್ಟು ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕ ಶುಕ್ರವಾರ ಶೇಕಡಾ 0.98 ರಷ್ಟು ಏರಿಕೆಯಾಗಿದೆ.

ನಿಫ್ಟಿ ಪಿಎಸ್​ಯು ಬ್ಯಾಂಕ್ ಹೊರತುಪಡಿಸಿ ಎಲ್ಲಾ ವಲಯ ಸೂಚ್ಯಂಕಗಳು ಶುಕ್ರವಾರ ಏರಿಕೆಯೊಂದಿಗೆ ಕೊನೆಗೊಂಡವು. ನಿಫ್ಟಿ ರಿಯಾಲ್ಟಿ ಸೂಚ್ಯಂಕವು ಶೇಕಡಾ 3.05 ರಷ್ಟು ಏರಿಕೆ ಕಂಡರೆ, ಬ್ಯಾಂಕ್ ನಿಫ್ಟಿ, ಫೈನಾನ್ಷಿಯಲ್ ಸರ್ವೀಸಸ್, ಆಟೋ, ಎಫ್ ಎಂಸಿಜಿ, ಮೆಟಲ್ ಮತ್ತು ಪ್ರೈವೇಟ್ ಬ್ಯಾಂಕ್ ಸೂಚ್ಯಂಕಗಳು ತಲಾ ಶೇಕಡಾ 1 ಕ್ಕಿಂತ ಹೆಚ್ಚು ಲಾಭವನ್ನು ದಾಖಲಿಸಿವೆ.

ಸತತ ಏಳನೇ ದಿನವೂ ಏರಿಕೆ ದಾಖಲಿಸಿದ ರೂಪಾಯಿ:ಭಾರತೀಯ ರೂಪಾಯಿ ಸತತ ಏಳನೇ ದಿನದ ವಹಿವಾಟಿನಲ್ಲಿ ಏರಿಕೆಯಾಗಿದೆ. ಶುಕ್ರವಾರ (ಸೆಪ್ಟೆಂಬರ್ 20, 2024) ರೂಪಾಯಿ ಡಾಲರ್ ವಿರುದ್ಧ 10 ಪೈಸೆ ಏರಿಕೆಯಾಗಿ 83.55 ರಲ್ಲಿ (ತಾತ್ಕಾಲಿಕ) ಸ್ಥಿರವಾಯಿತು. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ಭಾರತೀಯ ಕರೆನ್ಸಿ 83.63 ರಲ್ಲಿ ಪ್ರಾರಂಭವಾಯಿತು ಮತ್ತು ಡಾಲರ್​ ವಿರುದ್ಧ ಇಂಟ್ರಾ-ಡೇ ಗರಿಷ್ಠ 83.48 ಕ್ಕೆ ತಲುಪಿತ್ತು. ಅಂತಿಮವಾಗಿ ರೂಪಾಯಿ ಡಾಲರ್ ಎದುರು 83.55 ಕ್ಕೆ (ತಾತ್ಕಾಲಿಕ) ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 10 ಪೈಸೆ ಲಾಭವಾಗಿದೆ.

ಇದನ್ನೂ ಓದಿ : ಈ ಸೀಸನ್​ನಲ್ಲಿ ಎಷ್ಟು ಲಕ್ಷ ವಿವಾಹಗಳು ನಡೆಯಲಿವೆ ಗೊತ್ತಾ?: ಖರ್ಚು ಕೇಳಿದರೆ ದಂಗಾಗುವಿರಿ! - Weddings Season

For All Latest Updates

ABOUT THE AUTHOR

...view details