ಕರ್ನಾಟಕ

karnataka

ETV Bharat / business

ಸೆನ್ಸೆಕ್ಸ್​ 398 ಅಂಕ ಕುಸಿತ, 24,918ಕ್ಕಿಳಿದ ನಿಫ್ಟಿ: ದೊಡ್ಡ ನಷ್ಟ ಅನುಭವಿಸಿದ ಟಾಟಾ ಮೋಟಾರ್ಸ್​​ - Stock Market Update - STOCK MARKET UPDATE

ಬುಧವಾರದ ವಹಿವಾಟಿನಲ್ಲಿ ಮುಂಬೈ ಷೇರು ಮಾರುಕಟ್ಟೆ ಇಳಿಕೆಯೊಂದಿಗೆ ಕೊನೆಗೊಂಡಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Sep 11, 2024, 5:51 PM IST

ಮುಂಬೈ:ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ಬುಧವಾರದಂದು ಇಳಿಕೆಯೊಂದಿಗೆ ವಹಿವಾಟು ಕೊನೆಗೊಳಿಸಿದವು. ಬಿಎಸ್ಇ ಸೆನ್ಸೆಕ್ಸ್ 398.13 ಪಾಯಿಂಟ್ಸ್ ಅಥವಾ ಶೇಕಡಾ 0.49 ರಷ್ಟು ಕುಸಿದು 81,523.16 ರಲ್ಲಿ ಕೊನೆಗೊಂಡಿದೆ. ಸೆನ್ಸೆಕ್ಸ್​ ಬುಧವಾರದಂದು 81,423.14 ರಿಂದ 82,134.95 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.

ಏತನ್ಮಧ್ಯೆ, ಎನ್ಎಸ್ಇ ನಿಫ್ಟಿ 50 ತನ್ನ 2 ಸೆಷನ್​ಗಳ ಏರಿಕೆಯನ್ನು ಕೊನೆಗೊಳಿಸಿ 122.65 ಪಾಯಿಂಟ್ಸ್​ ಅಥವಾ ಶೇಕಡಾ 0.49 ರಷ್ಟು ಕುಸಿದು 24,918.45 ರಲ್ಲಿ ಕೊನೆಗೊಂಡಿತು. ನಿಫ್ಟಿ ಬುಧವಾರ 24,885.15 ರಿಂದ 25,113.70 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.

ನಿಫ್ಟಿ ಫಿಫ್ಟಿಯ ಟಾಪ್​ 50 ಷೇರುಗಳಲ್ಲಿ 34 ಷೇರುಗಳು ಕುಸಿತ ಕಂಡವು. ಟಾಟಾ ಮೋಟಾರ್ಸ್, ಒಎನ್​ಜಿಸಿ, ವಿಪ್ರೋ, ಎಲ್ &ಟಿ ಮತ್ತು ಅದಾನಿ ಎಂಟರ್ ಪ್ರೈಸಸ್ ಶೇಕಡಾ 5.73 ರಷ್ಟು ನಷ್ಟದೊಂದಿಗೆ ಕೊನೆಗೊಂಡವು. ಏತನ್ಮಧ್ಯೆ, ಬಜಾಜ್ ಆಟೋ, ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್ ಮತ್ತು ಶ್ರೀರಾಮ್ ಫೈನಾನ್ಸ್ ಶೇಕಡಾ 4.03 ರಷ್ಟು ಲಾಭ ಗಳಿಸಿದವು.

ಹಾಗೆಯೇ ಬಿಎಸ್ಇಯಲ್ಲಿ, ಸೆನ್ಸೆಕ್ಸ್​ನಲ್ಲಿ ಲಿಸ್ಟ್​ ಮಾಡಲಾದ 30 ಷೇರುಗಳ ಪೈಕಿ 20 ಷೇರುಗಳು ಕುಸಿತದೊಂದಿಗೆ ಕೊನೆಗೊಂಡವು. ಟಾಟಾ ಮೋಟಾರ್ಸ್, ಎನ್​ಟಿಪಿಸಿ ಮತ್ತು ಅದಾನಿ ಪೋರ್ಟ್ಸ್ ಶೇಕಡಾ 5.77 ರಷ್ಟು ಕುಸಿತ ಕಂಡವು. ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ಸನ್ ಫಾರ್ಮಾ ಮತ್ತು ಹಿಂದೂಸ್ತಾನ್ ಯೂನಿಲಿವರ್ ಸೇರಿದಂತೆ 10 ಷೇರುಗಳು ಶೇಕಡಾ 2.18 ರಷ್ಟು ಲಾಭದೊಂದಿಗೆ ಕೊನೆಗೊಂಡವು.

ಬುಧವಾರ ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕವು ಶೇಕಡಾ 0.81 ರಷ್ಟು ಕುಸಿದಿದೆ. ವಲಯ ಸೂಚ್ಯಂಕಗಳಲ್ಲಿ ನಿಫ್ಟಿ ಪಿಎಸ್​ಯು ಬ್ಯಾಂಕ್, ಬ್ಯಾಂಕ್, ಆಟೋ, ಮೆಟಲ್ ಮತ್ತು ರಿಯಾಲ್ಟಿ ಸೂಚ್ಯಂಕಗಳು ಶೇಕಡಾ 1.75 ರಷ್ಟು ನಷ್ಟದೊಂದಿಗೆ ಇಳಿಕೆಯಲ್ಲಿ ಕೊನೆಗೊಂಡವು. ಇದಕ್ಕೆ ವ್ಯತಿರಿಕ್ತವಾಗಿ ನಿಫ್ಟಿ ಎಫ್ಎಂಸಿಜಿ ಶೇಕಡಾ 0.28 ರಷ್ಟು ಏರಿಕೆ ಕಂಡಿತು ಮತ್ತು ಸತತ ಮೂರನೇ ಸೆಷನ್​ನಲ್ಲಿ ಲಾಭವನ್ನು ಉಳಿಸಿಕೊಂಡಿತು. ಬುಧವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಂದು ಬಾರಿ​ ದಾಖಲೆಯ ಗರಿಷ್ಠ 65,344.60 ಕ್ಕೆ ತಲುಪಿತ್ತು.

ಭಾರತೀಯ ರೂಪಾಯಿ ಬುಧವಾರ ಯುಎಸ್ ಡಾಲರ್ ವಿರುದ್ಧ 83.98 (ತಾತ್ಕಾಲಿಕ) ರಲ್ಲಿ ಕೊನೆಗೊಂಡಿದೆ. ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಅಮೇರಿಕನ್ ಕರೆನ್ಸಿಯ ವಿರುದ್ಧ 83.97 ಕ್ಕೆ ಪ್ರಾರಂಭವಾಯಿತು ಮತ್ತು ವಿರುದ್ಧ 83.93 ರ ಗರಿಷ್ಠ ಮತ್ತು 83.98 ರ ಕನಿಷ್ಠವನ್ನು ಮುಟ್ಟಿತು. ಅಂತಿಮವಾಗಿ ಯುಎಸ್ ಡಾಲರ್ ವಿರುದ್ಧ ರೂಪಾಯಿ 83.98 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು.

ಇದನ್ನೂ ಓದಿ : 17 ದಿನಗಳಿಂದ ಅಮೆರಿಕ ಪ್ರವಾಸದಲ್ಲಿ ಸಿಎಂ ಸ್ಟಾಲಿನ್: ಬಂಡವಾಳ ಹೂಡಿಕೆಯ ಹಲವು ಒಪ್ಪಂದಗಳಿಗೆ ಸಹಿ - CM Stalin USA Tour

For All Latest Updates

ABOUT THE AUTHOR

...view details