ನವದೆಹಲಿ:ದೇಶೀಯ ಷೇರು ಮಾರುಕಟ್ಟೆಗಳು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಭಾರೀ ಏರಿಕೆ ದಾಖಲಿಸಿವೆ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 366 ಪಾಯಿಂಟ್ಗಳ ಹೆಚ್ಚಳ ಕಂಡು ರ್ಸಾಕಾಲಿಕ ಗರಿಷ್ಠ ಮಟ್ಟವಾದ 74,555ಕ್ಕೆ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 22,624ಕ್ಕೆ ಏರಿ ಮೊದಲ ಬಾರಿಗೆ ಗರಿಷ್ಠ ಹೆಚ್ಚಳ ದಾಖಲಿಸಿತು.
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಿದೇಶಿ ಹೂಡಿಕೆಗಳು ಹೆಚ್ಚುತ್ತಿದ್ದು, ಪ್ರಮುಖ ಬಡ್ಡಿ ದರಗಳು ಬದಲಾಗದೆ ಇರುವುದು ಸೇರಿದಂತೆ ಸಕಾರಾತ್ಮಕ ವಹಿವಾಟು ನಡೆದ ಕಾರಣ ದೇಶೀಯ ಮಾರುಕಟ್ಟೆಗಳು ಪ್ರಗತಿಯತ್ತ ಸಾಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಹೇಳಿದೆ.
ಪ್ರಸ್ತುತ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 382 ಪಾಯಿಂಟ್ಗಳ ಏರಿಕೆ ಕಂಡು 74,625ರಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿಯು ಪ್ರಸ್ತುತ 107 ಅಂಕಗಳ ಏರಿಕೆಯೊಂದಿಗೆ 22,620 ಅಂಕಗಳಿಗೆ ತಲುಪಿದೆ.
ಲಾಭ, ನಷ್ಟದಲ್ಲಿರುವ ಷೇರುಗಳು:ಪವರ್‌ಗ್ರಿಡ್, ರಿಲಯನ್ಸ್, ಆಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ಎನ್‌ಟಿಪಿಸಿ, ಮಾರುತಿ ಸುಜುಕಿ, ಇನ್ಫೋಸಿಸ್ ಲಾಭದಲ್ಲಿ ಮುಂದುವರಿದಿವೆ. ವಿಪ್ರೋ, ಎಚ್‌ಡಿಎಫ್‌ಸಿ ಬ್ಯಾಂಕ್, ಟಾಟಾ ಮೋಟಾರ್ಸ್, ಟೈಟಾನ್, ನೆಸ್ಲೆ ಇಂಡಿಯಾ, ಎಸ್‌ಬಿಐ, ಬಜಾಜ್ ಫೈನಾನ್ಸ್ನ ಷೇರುಗಳು ನಷ್ಟದ ಷೇರುಗಳು ತುಸು ನಷ್ಟಕ್ಕೀಡಾಗಿವೆ.