ಮುಂಬೈ, ಮಹಾರಾಷ್ಟ್ರ:ಹೂಡಿಕೆದಾರರು ಬ್ಯಾಂಕಿಂಗ್ ಮತ್ತು ಐಟಿ ಕ್ಷೇತ್ರಗಳಲ್ಲಿ ಹೂಡಿಕೆ ಕಡಿಮೆ ಮಾಡಿದ್ದರಿಂದ ಬಿಎಸ್ಇ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಶುಕ್ರವಾರ ಸುಮಾರು ಶೇ 1 ರಷ್ಟು ಕುಸಿದವು. ಅಮೆರಿಕದ ಡಾಲರ್ ವಿರುದ್ಧ ರೂಪಾಯಿ ದುರ್ಬಲಗೊಳ್ಳುತ್ತಿರುವುದು ಮಾರುಕಟ್ಟೆಯ ಭಾವನೆಯ ಮೇಲೆ ಪರಿಣಾಮ ಬೀರಿದೆ ಎಂದು ಟ್ರೇಡರ್ಸ್ ತಿಳಿಸಿದ್ದಾರೆ.
ಶುಕ್ರವಾರದ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 720.60 ಪಾಯಿಂಟ್ಸ್ ಅಥವಾ ಶೇಕಡಾ 0.90 ರಷ್ಟು ಕುಸಿದು 79,223.11 ರಲ್ಲಿ ಕೊನೆಗೊಂಡಿದೆ. ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 833.98 ಪಾಯಿಂಟ್ ಗಳ ಕುಸಿತ ಕಂಡು 79,109.73 ಅಂಕಗಳಿಗೆ ತಲುಪಿತ್ತು. ಅಂತಿಮವಾಗಿ ಎನ್ಎಸ್ಇ ನಿಫ್ಟಿ 183.90 ಪಾಯಿಂಟ್ಸ್ ಅಥವಾ ಶೇಕಡಾ 0.76 ರಷ್ಟು ಕುಸಿದು 24,004.75 ರಲ್ಲಿ ಕೊನೆಗೊಂಡಿದೆ.
ಈ ಷೇರುಗಳಲ್ಲಿ ಕುಸಿತ:ಸೆನ್ಸೆಕ್ಸ್ ಷೇರುಗಳ ಪೈಕಿ ಜೊಮಾಟೊ, ಎಚ್ಡಿಎಪ್ಸಿ ಬ್ಯಾಂಕ್, ಟೆಕ್ ಮಹೀಂದ್ರಾ, ಅದಾನಿ ಪೋರ್ಟ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಐಸಿಐಸಿಐ ಬ್ಯಾಂಕ್, ಸನ್ ಫಾರ್ಮಾ, ಲಾರ್ಸನ್ & ಟೂಬ್ರೊ, ಎಚ್ಸಿಎಲ್ ಟೆಕ್ ಮತ್ತು ಐಟಿಸಿ ನಷ್ಟಕ್ಕೀಡಾದ ಪ್ರಮುಖ ಷೇರುಗಳಾಗಿವೆ.
ಕುಸಿತದ ನಡುವೆ ಲಾಭ ಕಂಡ ಷೇರುಗಳಿವು:ಟಾಟಾ ಮೋಟಾರ್ಸ್, ನೆಸ್ಲೆ, ಟೈಟನ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಾಭ ಗಳಿಸಿದವು.