ನವದೆಹಲಿ:ಭಾರತೀಯ ಸ್ಟೇಟ್ ಬ್ಯಾಂಕ್ ವರದಿಯಲ್ಲಿ ಭಾರತದ ನೈಜ ಜಿಡಿಪಿಯು ಆರ್ಥಿಕ ವರ್ಷ 2025ರ ಅವಧಿಯಲ್ಲಿ ಶೇಕಡಾ 7.0 ರಷ್ಟು ಬೆಳವಣಿಗೆಯಾಗಲಿದೆ ಎಂದು ಯೋಜಿಸಿದೆ. ಇದು ಆರ್‌ಬಿಐನ ಮುನ್ಸೂಚನೆಯ ಶೇಕಡಾ 7.2ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. 20 ಬೇಸಿಸ್ ಪಾಯಿಂಟ್‌ಗಳಿಂದ ಸ್ವಲ್ಪಮಟ್ಟಿಗೆ ಕಡಿತ ಆಗಲಿರುವುದು ಜಾಗತಿಕ ವಿಚಾರಗಳನ್ನ ಆಧರಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
"ಆರ್ಥಿಕ ವರ್ಷ 2025ರ ಅವಧಿಯಲ್ಲಿ ಶೇಕಡಾ 7.0 ರಷ್ಟು ಬೆಳವಣಿಗೆ ಆಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ನಮ್ಮ ಅಂದಾಜು ಆರ್ಬಿಐಗಿಂತ 20 ಬೇಸಿಸ್ ಪಾಯಿಂಟ್‌ಗಳು ಕಡಿಮೆಯಾಗಿದೆ. ವರದಿಯ ಡೌನ್‌ಗ್ರೇಡ್ ಹೊರತಾಗಿಯೂ ಭಾರತೀಯ ಆರ್ಥಿಕತೆಯು ದೃಢವಾದ ಬೆಳವಣಿಗೆಯನ್ನು ಕಾಣುವುದನ್ನು ಮುಂದುವರೆಸಿದೆ. ಮತ್ತು ಈ ವರ್ಷ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿ ಉಳಿಯುವ ನಿರೀಕ್ಷೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಎಸ್ಬಿಐ ವರದಿಯು 2025ರ ಆರ್ಥಿಕ ವರ್ಷದ GDP ಅಂದಾಜು ಹಲವಾರು ಸಕಾರಾತ್ಮಕ ಅಂಶಗಳನ್ನು ಆಧರಿಸಿದೆ. ಲಾಭಾಂಶದಿಂದ ಬೆಂಬಲಿತವಾದ ವರ್ಧಿತ ಹಣಕಾಸಿನ ಬಫರ್‌ಗಳು, ಸುಧಾರಿತ ಮಾನ್ಸೂನ್ ಪರಿಸ್ಥಿತಿಗಳಿಂದಾಗಿ ಕೃಷಿ ಚಟುವಟಿಕೆಯಲ್ಲಿ ನಿರೀಕ್ಷಿತ ಚೇತರಿಕೆ ಮತ್ತು ಬಲವಾದ ಉತ್ಪಾದನಾ ಚಟುವಟಿಕೆಯ ನಡುವೆ ಖಾಸಗಿ ಬಂಡವಾಳ ವೆಚ್ಚದಲ್ಲಿ ಹೆಚ್ಚಳ ಸೇರಿದೆ.
ವಿತ್ತೀಯ ನೀತಿ ಸಮಿತಿ:ಭಾರತೀಯ ರಿಸರ್ವ್ ಬ್ಯಾಂಕ್‌ನ ವಿತ್ತೀಯ ನೀತಿ ಸಮಿತಿಯು (MPC) 2025ರ ಆರ್ಥಿಕ ವರ್ಷದ ಜಿಡಿಪಿ ಬೆಳವಣಿಗೆ ದರ ಶೇಕಡಾ 7.2ರಷ್ಟು ಇರಲಿದೆ ಎಂದು ಹೇಳಿದೆ. ಆದಾಗ್ಯೂ, MPC ತನ್ನ 2025ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿದ ಬೆಳವಣಿಗೆಯ ಅಂದಾಜನ್ನು ಶೇಕಡಾ 7.1 ಕ್ಕೆ ಪರಿಷ್ಕರಿಸಿದೆ. ಇದು ಅದರ ಹಿಂದಿನ ಮುನ್ಸೂಚನೆಯಿಂದ 20 ಬೇಸಿಸ್ ಪಾಯಿಂಟ್‌ಗಳು ಕಡಿತವಾಗಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, 2024-25ರ ಹಣಕಾಸು ವರ್ಷದಲ್ಲಿ ಶೇ 7.2ರ ನೈಜ ಜಿಡಿಪಿ ಬೆಳವಣಿಗೆಯೊಂದಿಗೆ ದೇಶದ ಆರ್ಥಿಕತೆ ಮುನ್ನಡೆಯಲಿದೆ ಎಂದು ಹೇಳಿದ್ದರು. ಜೂನ್‌ನಲ್ಲಿ ಹಣದುಬ್ಬರವು ಶೇಕಡಾ 5.1ಕ್ಕೆ ಇಳಿದಿದೆ. 2024-25ರ ನೈಜ GDP ಬೆಳವಣಿಗೆಯು ಮೊದಲ ತ್ರೈಮಾಸಿಕದಲ್ಲಿ ಶೇ 7.1 , ದ್ವಿತೀಯ ತ್ರೈಮಾಸಿಕದಲ್ಲಿ ಶೇ 7.2 , ತೃತೀಯ ತ್ರೈಮಾಸಿಕದಲ್ಲಿ 7.3 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 7.2ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ. 2025-26ರ ಮೊದಲ ತ್ರೈಮಾಸಿಕದಲ್ಲಿ ನಿಜವಾದ GDP ಬೆಳವಣಿಗೆಯಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
''ಜೂನ್‌ನಲ್ಲಿ ಹಿಂದಿನ ಎಂಪಿಸಿಯಲ್ಲಿ ನಾವು ನೀಡಿದ ಪ್ರೊಜೆಕ್ಟ್ಗೆ ಸಂಬಂಧಿಸಿದಂತೆ ನಾವು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಬೆಳವಣಿಗೆಯ ಅಂದಾಜನ್ನು ಸ್ವಲ್ಪಮಟ್ಟಿಗೆ ಮಾಡರೇಟ್ ಮಾಡಿದ್ದೇವೆ. ಇದು ಪ್ರಾಥಮಿಕವಾಗಿ ಕೆಲವು ಹೆಚ್ಚಿನ ಆವರ್ತನ ಸೂಚಕಗಳ ಬಗ್ಗೆ ನವೀಕರಿಸಿದ ಮಾಹಿತಿಯಿಂದಾಗಿ ಕಡಿಮೆಯಾಗಿದೆ'' ಎಂದು ಶಕ್ತಿದಾಸ್ ಹೇಳಿದ್ದರು.
ಇದನ್ನೂ ಓದಿ:2 ದಿನ ಅಲ್ಲ ಇನ್ಮುಂದೆ ಕೆಲವೇ ಗಂಟೆಗಳಲ್ಲಿ ಚೆಕ್ ಪಟಾಪಟ್ ಕ್ಲಿಯರೆನ್ಸ್: ಆರ್‌ಬಿಐ ಮಹತ್ವದ ಘೋಷಣೆ - CLEARING TIME FOR CHEQUES