ಕರ್ನಾಟಕ

karnataka

ETV Bharat / business

ರೋಡ್​ಸ್ಟರ್​ ಸರಣಿಯ ಎಲೆಕ್ಟ್ರಿಕ್ ಮೋಟರ್​ ಸೈಕಲ್​ ಪರಿಚಯಿಸಿದ Ola: ಬೆಲೆ ಎಷ್ಟು? ವಿಶೇಷತೆಗಳೇನು? - Roadster Electric Motorcycles - ROADSTER ELECTRIC MOTORCYCLES

ರೋಡ್​​ಸ್ಟರ್​ ಎಕ್ಸ್​​ ವೇಗದ ಎಲೆಕ್ಟ್ರಿಕ್​ ಮೋಟರ್ ​​ಸೈಕಲ್​ ಆಗಿದ್ದು, ಇವು​ ಬಜೆಟ್‌ಸ್ನೇಹಿಯಾಗಿದೆ ಎಂದು ಕಂಪೆನಿ ತಿಳಿಸಿದೆ.

Roadster e motorcycles launch by Ola Electric
ಓಲಾ ರೋಡ್​ಸ್ಟರ್​​ ಮೋಟರ್​ಸೈಕಲ್ (IANS)

By ETV Bharat Karnataka Team

Published : Aug 15, 2024, 4:07 PM IST

ಬೆಂಗಳೂರು: ಇವಿ ದ್ವಿಚಕ್ರ ವಾಹನದಲ್ಲಿ ಮುಂಚೂಣಿಯಲ್ಲಿರುವ ಓಲಾ ಎಲೆಕ್ಟ್ರಿಕ್​​ ಕಂಪನಿ ಇದೀಗ ಎಲೆಕ್ಟ್ರಿಕ್​ ಮೋಟರ್​ಸೈಕಲ್​​ ಪರಿಚಯಿಸಿದೆ. ಈ ಮೋಟರ್​ ಸೈಕಲ್​ 2026ರ ಮೊದಲ ತ್ರೈಮಾಸಿಕದಲ್ಲಿ ಮಾರುಕಟ್ಟೆಗೆ ಬರಲಿದೆ.

ರೋಡ್​​ಸ್ಟರ್ ಸರಣಿಯಲ್ಲಿ​ ಈ ಮೋಟರ್​ ಸೈಕಲ್‌ಗಳು​​ ಹೊರಬರುತ್ತಿವೆ. ರೋಡ್​ಸ್ಟರ್​, ರೋಡ್​ಸ್ಟರ್​​ ಎಕ್ಸ್​ ಮತ್ತು ರೋಡ್​ಸ್ಟರ್​​ ಪ್ರೊಗಳನ್ನು ಕಂಪೆನಿ ಪರಿಚಯಿಸಿದೆ. ಇವುಗಳ ಬೆಲೆ ಕ್ರಮವಾಗಿ 74,999, 1,04,999 ಹಾಗೂ 1,99,999 ರೂ.ಗಳು.

ಇದರ ಜೊತೆಗೆ, ಸ್ಪೋರ್ಟ್​​ಸ್ಟರ್​ ಮತ್ತು ಆರೋಹೆಡ್​ ಅನ್ನು ಮುಂಬರುವ ದಿನದಲ್ಲಿ ಪರಿಚಯಿಸಲು ನಿರ್ಧರಿಸಲಾಗಿದೆ. ತಮ್ಮದೇ ಫ್ಯಾಕ್ಟರಿಯಲ್ಲಿ ಉತ್ಪಾದಿಸಿದ ಬ್ಯಾಟರಿಗಳನ್ನು ಇವು ಹೊಂದಿರುವುದು ವಿಶೇಷ.

ಓಲಾದ ಎಲೆಕ್ಟ್ರಿಕ್​ ಅಧ್ಯಕ್ಷರ ಮಾತು: "ಭಾರತದಲ್ಲಿ ಇಂದು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮೋಟರ್​ ಸೈಕಲ್​ಗಳು ಮೂರನೇ ಎರಡರಷ್ಟಿವೆ. ಇದೀಗ ಓಲಾ ಕೂಡ ಮೋಟರ್​ಸೈಕಲ್​ ಮಾರುಕಟ್ಟೆ ಪ್ರವೇಶಕ್ಕೆ ಸಜ್ಜಾಗಿದೆ. ನಮ್ಮ ಉದ್ದೇಶ ಓಲಾ ಗ್ರಾಹಕರಿಗೆ ಕೈಗೆಟುಕುವ ದರ, ಸಾಮರ್ಥ್ಯದಾಯಕ ವಾಹನವನ್ನು ನೀಡುವುದು. ನಾವು ಮುಂದಿನ ಪೀಳಿಗೆಯ ಬ್ಯಾಟರಿ ತಂತ್ರಜ್ಞಾನವನ್ನು 4680 ಸೆಲ್​​ ಜೊತೆಗೆ ಅಭಿವೃದ್ಧಿ ಮಾಡುತ್ತಿದ್ದೇವೆ. ಈ ಸೆಲ್​ಗಳನ್ನು ಸದ್ಯ ಓಲಾ ಗಿಗಾ ಫ್ಯಾಕ್ಟರಿಯಲ್ಲಿ ಪ್ರಯೋಗ ನಡೆಸಲಾಗುತ್ತಿದೆ. ದೇಶೀಯವಾಗಿ ಅಭಿವೃದ್ಧಿ ಮಾಡಿದ ಭಾರತ್​ 4680 ಸೆಲ್​ ಮತ್ತು ಬ್ಯಾಟರಿ ಪ್ಯಾಕ್​​ ಅನ್ನು ಸಂಸ್ಥೆ ಹೊರತರಲಿದೆ" ಎಂದು ಓಲಾದ ಎಲೆಕ್ಟ್ರಿಕ್​ನ ಎಂಡಿ ಹಾಗೂ ಅಧ್ಯಕ್ಷ ಭವಿಶ್​ ಅಗರ್​ವಾಲ್​ ತಿಳಿಸಿದರು.

ವಿಶೇಷತೆಗಳೇನು?: ರೋಡ್​​ಸ್ಟರ್​ ಎಕ್ಸ್​​ ವೇಗದ ಎಲೆಕ್ಟ್ರಿಕ್​ ಮೋಟರ್​​ಸೈಕಲ್​ ಆಗಿದ್ದು, ಇವು​ ಬಜೆಟ್‌ಸ್ನೇಹಿಯಾಗಿದೆ. ಇದರ ಆರಂಭಿಕದ ದರದಲ್ಲಿ 2.5 ಕಿ.ವ್ಯಾ ಬ್ಯಾಟರಿ ಬೈಕ್​ ದರ 74,999 ಆಗಿದ್ದು, ಒಂದೇ ಚಾರ್ಜಿನಲ್ಲಿ 200 ಕಿ.ಮೀ ಸಾಗಬಹುದು. ಮೋಟರ್​ಸೈಕಲ್​ನ ಗರಿಷ್ಟ ವೇಗ ಗಂಟೆಗೆ 124 ಕಿ.ಮೀ ಆಗಿದ್ದು, 2.8 ಸೆಕೆಂಡ್‌ನಲ್ಲಿ ಗಂಟೆಗೆ 0-40ಕೆಡಬ್ಲೂಎಚ್​ ವೇಗ ಹೊಂದಿದೆ. ಇದು 18 ಇಂಚ್​ನ ಅಲೊಯ್​ ಚಕ್ರ ಮತ್ತು 4.3 ಇಂಚಿನ ಟಚ್​ ಸ್ಕ್ರೀನ್​ ಡಿಸ್​ಪ್ಲೇ ಹೊಂದಿದೆ. ಮಧ್ಯಮ ಕ್ರಮಾಂಕದ ಮೋಟರ್​ಸೈಕಲ್​ 2.5ಕೆ ವ್ಯಾಟ್​ ಎಚ್‌ ದರ 1, 04,999 ಆಗಿದ್ದು ರೋಡ್​ಸ್ಟರ್​ ಪ್ರೊ 8 ಕಿವ್ಯಾಟ್​ ಬ್ಯಾಟರಿಯೊಂದಿಗೆ 1,99,999 ಲಭ್ಯವಾಗಲಿದೆ ಎಂದು ಕಂಪೆನಿ ಮಾಹಿತಿ ನೀಡಿದೆ.(ಐಎಎನ್​ಎಸ್​)

ಇದನ್ನೂ ಓದಿ: ಓಲಾ ಎಲೆಕ್ಟ್ರಿಕ್​​ ಬೈಕ್​​​​​​​​​​​ ಬೆಲೆಯಲ್ಲಿ ಭಾರಿ ಇಳಿಕೆ: S1X ಸ್ಕೂಟರ್‌ ಈ ಬೆಲೆಯಲ್ಲಿ ಲಭ್ಯ

ABOUT THE AUTHOR

...view details