ETV Bharat / business

2024ರಲ್ಲಿ ಹೆಚ್ಚು ಚಿನ್ನ ಖರೀದಿ ಮಾಡಿದ 2ನೇ ದೊಡ್ಡ ರಾಷ್ಟ್ರವಾದ ಭಾರತ: ಇಂಡಿಯಾ ಬಳಿ ಇದೆ ಇಷ್ಟೊಂದು ಸಂಗ್ರಹ - BUYER OF GOLD

2024 ರಲ್ಲಿ ಭಾರತ ವಿಶ್ವದ 2ನೇ ಅತಿದೊಡ್ಡ ಚಿನ್ನ ಖರೀದಿದಾರ ದೇಶವಾಗಿ ಹೊರಹೊಮ್ಮಿದೆ.

ಚಿನ್ನ
ಚಿನ್ನ (ani)
author img

By ETV Bharat Karnataka Team

Published : Jan 6, 2025, 8:00 PM IST

ನವದೆಹಲಿ: ಜಾಗತಿಕ ಕೇಂದ್ರ ಬ್ಯಾಂಕುಗಳು 2024ರ ನವೆಂಬರ್​ನಲ್ಲಿ ಸಕ್ರಿಯವಾಗಿ ಚಿನ್ನ ಖರೀದಿಸುತ್ತಿದ್ದು, ಒಟ್ಟಾರೆಯಾಗಿ ಅವು 53 ಟನ್ ಚಿನ್ನ ಖರೀದಿಸಿವೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ (ಡಬ್ಲ್ಯುಜಿಸಿ) ತಿಳಿಸಿದೆ. ಇದು ಜಾಗತಿಕ ಆರ್ಥಿಕ ಅನಿಶ್ಚಿತತೆಗಳ ಮಧ್ಯೆ ಚಿನ್ನವು ಸುರಕ್ಷಿತ ಹೂಡಿಕೆಯ ಆಸ್ತಿಯಾಗಿ ಮುಂದುವರೆದಿರುವುದರ ಸೂಚನೆಯಾಗಿದೆ.

2024ರಲ್ಲಿ 73 ಟನ್​ ಚಿನ್ನ ಖರೀದಿಸಿದ ಇಂಡಿಯಾ: ನವೆಂಬರ್ ಅಂತ್ಯದ ವೇಳೆಗೆ ಭಾರತವು ಒಟ್ಟು 876 ಟನ್ ಚಿನ್ನದ ಮೀಸಲು ದಾಸ್ತಾನು ಹೊಂದಿದೆ. ಅಲ್ಲದೇ ಹೊಸದಾಗಿ 73 ಟನ್ ಚಿನ್ನ ಖರೀದಿಸುವ ಮೂಲಕ ಪೋಲೆಂಡ್ ನಂತರ 2024 ರ ಎರಡನೇ ಅತಿದೊಡ್ಡ ಚಿನ್ನ ಖರೀದಿದಾರ ದೇಶವಾಗಿದೆ ಎಂದು ಡಬ್ಲ್ಯುಜಿಸಿ ತಿಳಿಸಿದೆ.

90 ಟನ್​ ಬಂಗಾರ ಖರೀದಿಸಿದ ಪೋಲೆಂಡ್​​ಗೆ ಅಗ್ರ ಸ್ಥಾನ; ನ್ಯಾಷನಲ್ ಬ್ಯಾಂಕ್ ಆಫ್ ಪೋಲೆಂಡ್ (ಎನ್​ಬಿಪಿ) ನವೆಂಬರ್​ನಲ್ಲಿ ಚಿನ್ನದ ಅತಿದೊಡ್ಡ ಖರೀದಿದಾರನಾಗಿ ಹೊರಹೊಮ್ಮಿದ್ದು, ಅದರ ಚಿನ್ನದ ಮೀಸಲು ಸಂಗ್ರಹ 21 ಟನ್​ಗಳಷ್ಟು ಹೆಚ್ಚಳವಾಗಿ 448 ಟನ್​ಗಳಿಗೆ ಏರಿಕೆಯಾಗಿದೆ. ಪೋಲೆಂಡ್​ನ ಒಟ್ಟು ಮೀಸಲುಗಳಲ್ಲಿ ಚಿನ್ನದ ಪಾಲು ಸುಮಾರು 18 ಪ್ರತಿಶತದಷ್ಟಿದೆ. ವರ್ಷದಿಂದ ವರ್ಷಕ್ಕೆ 90 ಟನ್ ಚಿನ್ನ ಖರೀದಿಯೊಂದಿಗೆ, ಎನ್​ಬಿಪಿ 2024 ರ ಅಗ್ರ ಚಿನ್ನದ ಖರೀದಿದಾರನಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

ಸೆಂಟ್ರಲ್ ಬ್ಯಾಂಕ್ ಆಫ್ ಉಜ್ಬೇಕಿಸ್ತಾನ್ ಕೂಡ ಗಮನಾರ್ಹ ಪ್ರಮಾಣದಲ್ಲಿ ಚಿನ್ನ ಖರೀದಿ ಮಾಡಿದೆ. ಜುಲೈನಿಂದ ಕೆಲ ಕಾಲ ವಿರಾಮದ ನಂತರ ಅದು ತನ್ನ ಚಿನ್ನದ ಮೀಸಲುಗಳನ್ನು 9 ಟನ್​ಗಳಷ್ಟು ಹೆಚ್ಚಿಸಿದೆ. ವಾರ್ಷಿಕವಾಗಿ ಅದು ನಿವ್ವಳ 11 ಟನ್ ಚಿನ್ನ ಖರೀದಿಸಿದೆ. ಅಲ್ಲಿಗೆ ಅದರ ಒಟ್ಟು ಹಿಡುವಳಿ ಈಗ 382 ಟನ್​ಗೆ ಏರಿಕೆಯಾಗಿದೆ. ಹಾಗೆಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಚಿನ್ನ ಖರೀದಿಯನ್ನು ಮುಂದುವರಿಸಿದ್ದು, ನವೆಂಬರ್​ನಲ್ಲಿ 8 ಟನ್ ಚಿನ್ನವನ್ನು ಖರೀದಿಸಿದೆ.

5 ಟನ್​ ಚಿನ್ನ ಖರೀದಿಸಿದ ಚೀನಾ: ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (ಪಿಬಿಒಸಿ) ಆರು ತಿಂಗಳ ವಿರಾಮದ ನಂತರ ಚಿನ್ನದ ಖರೀದಿಯನ್ನು ಪುನರಾರಂಭಿಸಿದ್ದು, ಹೊಸದಾಗಿ 5 ಟನ್ ಚಿನ್ನ ಖರೀದಿಸಿದೆ. ಅಲ್ಲಿಗೆ ಅದರ ಒಟ್ಟು ಚಿನ್ನದ ಹಿಡುವಳಿಯು 2,264 ಟನ್​ಗೆ ಏರಿಕೆಯಾಗಿದೆ. ಇನ್ನು ಸೆಂಟ್ರಲ್ ಬ್ಯಾಂಕ್ ಆಫ್ ಜೋರ್ಡಾನ್ ನವೆಂಬರ್​ನಲ್ಲಿ ತನ್ನ ಚಿನ್ನದ ಹಿಡುವಳಿಯನ್ನು 4 ಟನ್​ಗಳಷ್ಟು ಹೆಚ್ಚಿಸಿಕೊಂಡಿದೆ.

ಟರ್ಕಿಯ ಸೆಂಟ್ರಲ್ ಬ್ಯಾಂಕ್ ತನ್ನ ಚಿನ್ನದ ಮೀಸಲಿಗೆ 3 ಟನ್​ಗಳನ್ನು ಸೇರಿಸಿದೆ ಮತ್ತು ದೇಶೀಯ ಬ್ಯಾಂಕುಗಳೊಂದಿಗೆ ಗೋಲ್ಡ್ -ಫಾರ್ - ಲಿರಾ ವಿನಿಮಯ ಒಪ್ಪಂದಗಳ ಮೂಲಕ ತನ್ನ ನಗದು ನಿರ್ವಹಣಾ ಪ್ರಯತ್ನಗಳನ್ನು ಮುಂದುವರೆಸಿದೆ. ಏತನ್ಮಧ್ಯೆ, ಜೆಕ್ ನ್ಯಾಷನಲ್ ಬ್ಯಾಂಕ್ ತನ್ನ ಖರೀದಿ ಸರಣಿಯನ್ನು ಸತತ 21ನೇ ತಿಂಗಳಿಗೆ ವಿಸ್ತರಿಸಿದ್ದು, ಸುಮಾರು 2 ಟನ್ ಚಿನ್ನ ಖರೀದಿಸಿದೆ. ಬ್ಯಾಂಕ್ ಆಫ್ ಘಾನಾ ತನ್ನ ದೇಶೀಯ ಚಿನ್ನ ಖರೀದಿ ಕಾರ್ಯಕ್ರಮದ ಭಾಗವಾಗಿ ನವೆಂಬರ್​ನಲ್ಲಿ 1 ಟನ್ ಚಿನ್ನ ಸೇರಿಸಿದ್ದು, ಅದರ ಒಟ್ಟು ಮೀಸಲು 29 ಟನ್​ಗಳಿಗೆ ತಲುಪಿದೆ.

ಇದನ್ನೂ ಓದಿ : ತೆಂಗಿನಕಾಯಿ ದರ ಏರಿಕೆ, ಹೋಟೆಲ್ ಮಾಲೀಕರಿಗೆ ದೋಸೆ ಜೊತೆ ಚಟ್ನಿ ಕೊಡೋದೆ ಚಿಂತೆ! - COCONUT PRICE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.