ಉತ್ತಮ ಕ್ರೆಡಿಟ್ ಸ್ಕೋರ್ ಯಾರಿಗೆ ಬೇಡ ಹೇಳಿ. ಈ ಕ್ರೆಡಿಟ್ ಸ್ಕೋರ್ ನಿಮ್ಮ ಮುಂದಿನ ವ್ಯವಹಾರಗಳಿಗೆ ಉಪಯೋಗ ಆಗಲಿದೆ. ಉತ್ತಮ ಕ್ರೆಡಿಟ್ ಇತಿಹಾಸ ಇದ್ದರೆ ಸಾಲ ಪಡೆಯುವುದು ಸುಲಭ. ನಾವು ತೆಗೆದುಕೊಂಡ ಸಾಲಗಳು ಮತ್ತು ನಾವು ಬಳಸಿದ ಕ್ರೆಡಿಟ್ ಕಾರ್ಡ್ ಹಣವನ್ನು ಸಮಯಕ್ಕೆ ಮರುಪಾವತಿ ಮಾಡಿದರೆ ಮಾತ್ರವೇ ನಮಗೆ ಉತ್ತಮ ಕ್ರೆಡಿಟ್ ಸ್ಕೋರ್ ಲಭ್ಯವಾಗುತ್ತದೆ. ಸಕಾಲಿಕ ಪಾವತಿಗಳನ್ನು ಮಾಡಲು ವಿಫಲವಾದರೆ ಕ್ರೆಡಿಟ್ ಬ್ಯೂರೋಗಳು ಖಂಡಿತವಾಗಿ ನಿಮ್ಮ ಸ್ಕೋರ್ ಅನ್ನು ಋಣಾತ್ಮಕ ಎಂದು ಪರಿಗಣಿಸುತ್ತವೆ. ಆದರೆ, ಕೆಲವೊಮ್ಮೆ ಕ್ರೆಡಿಟ್ ಬ್ಯೂರೋಗಳು ನಾವು ಸರಿಯಾದ ವೇಳೆಗೆ ಹಣ ಪಾವತಿಸಿದ್ದರೂ ಅದನ್ನು ತೋರಿಸುವುದಿಲ್ಲ. ತಾಂತ್ರಿಕ ಕಾರಣಗಳಿಂದ ಹೀಗಾಗುವ ಸಂಭವ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕಾಗುತ್ತದೆ. ಈ ದೋಷಗಳನ್ನು ಸರಿಪಡಿಸಲು ನಾವು ಏನು ಈ ಕೆಳಗಿನ ಕ್ರಮಗಳನ್ನು ಅನುಸರಿಸಿದರೆ ಉತ್ತಮ.
ಪ್ರಮುಖ ಮೂರು ಕ್ರೆಡಿಟ್ ಬ್ಯೂರೋಗಳು:ಕ್ರೆಡಿಟ್ ಬ್ಯೂರೋಗಳು ನಮ್ಮ ಕ್ರೆಡಿಟ್ ಇತಿಹಾಸವನ್ನು ಮೌಲ್ಯಮಾಪನ ಮಾಡುತ್ತವೆ. ಅವರು ನಮ್ಮ ವಹಿವಾಟುಗಳು ಮತ್ತು ಆರ್ಥಿಕ ಶಿಸ್ತಿನ ಕುರಿತು ವರದಿಗಳನ್ನು ಬಿಲ್ಡ್ ಮಾಡುತ್ತವೆ ಮತ್ತು ಅದನ್ನು ದಾಖಲಿಸುತ್ತವೆ. ನಮ್ಮ ದೇಶದಲ್ಲಿ ಮುಖ್ಯವಾಗಿ ಮೂರು ಕ್ರೆಡಿಟ್ ಬ್ಯೂರೋಗಳಿವೆ. ಅವುಗಳೆಂದರೆ CIBIL, Experian, Equifax. ಇವುಗಳಲ್ಲಿ ಸಿಬಿಲ್ ಅತ್ಯಂತ ಪ್ರಸಿದ್ಧವಾಗಿದೆ. ಇದು ಎಲ್ಲರಿಗೂ ಚಿರಪರಿಚಿತ. ಅನೇಕ ಬ್ಯಾಂಕುಗಳು CIBIL ಸ್ಕೋರ್ ಅನ್ನು ಸಾಲ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲು ಆಧಾರವಾಗಿ ಬಳಸುತ್ತವೆ. ಇತರ ಹಣಕಾಸು ಸಂಸ್ಥೆಗಳು ಎಕ್ಸ್‌ಪೀರಿಯನ್ ಮತ್ತು ಈಕ್ವಿಫ್ಯಾಕ್ಸ್‌ನಿಂದ ವರದಿಗಳನ್ನೂ ಕೂಡಾ ಪರಿಗಣಿಸುತ್ತವೆ.
ಕ್ರೆಡಿಟ್ ಬ್ಯೂರೋಗಳಿಗೆ ದೂರು ನೀಡುವುದು ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಪಾವತಿಸಿದ್ದರೂ, ಯಾವುದೇ ಕ್ರೆಡಿಟ್ ಬ್ಯೂರೋ ವರದಿಯಲ್ಲಿ 'ಲೇಟ್ ಪೇಮೆಂಟ್' ಎಂದು ತೋರಿಸಿದರೆ ತಕ್ಷಣವೇ ನಾವು ಆ ಬ್ಯೂರೋಗಳಿಗೆ ಮೇಲ್ ಮೂಲಕ ದೂರು ಸಲ್ಲಿಸಬೇಕು. ಸರಿ ಪಡಿಸಲು ಮನವಿ ಮಾಡಿಕೊಳ್ಳಬೇಕು. ಇದಕ್ಕಾಗಿ ನಾವು ಕೆಲವು ದಾಖಲೆಗಳನ್ನು ಸಿದ್ಧಪಡಿಸಬೇಕು. ಸಮಯಕ್ಕೆ ಪಾವತಿಯನ್ನು ಪಾವತಿಸಿದ್ದೇವೆ ಎಂಬುದಕ್ಕೆ ಪುರಾವೆಯಾಗಿ ಬ್ಯಾಂಕ್ ಸ್ಟೇಟ್‌ಮೆಂಟ್, ಲೋನ್ ಸ್ಟೇಟ್‌ಮೆಂಟ್ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಸ್ಟೇಟ್‌ಮೆಂಟ್ ನಮ್ಮ ಬಳಿ ಇಟ್ಟುಕೊಂಡಿರಬೇಕು. ಯಾವ ದಿನ ಮತ್ತು ಯಾವ ಸಮಯದಲ್ಲಿ ನಾವು ಮರುಪಾವತಿ ಮಾಡುತ್ತೇವೆ? ಬ್ಯಾಂಕ್‌ನಿಂದ ಹಣ ಕಡಿತಗೊಂಡಿದ್ದು ಯಾವಾಗ? ದೂರವಾಣಿ ಸಂದೇಶಗಳು, ಬ್ಯಾಂಕ್ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಸ್ಟೇಟ್‌ಮೆಂಟ್ ಪಿಡಿಎಫ್ ದಾಖಲೆಗಳ ವಿವರಗಳೊಂದಿಗೆ ಸಂಬಂಧಿಸಿದ ಕ್ರೆಡಿಟ್ ಬ್ಯೂರೋಗೆ ಇ-ಮೇಲ್ ಮೂಲಕ ದೂರು ದಾಖಲಿಸಬೇಕು. ತಪ್ಪನ್ನು ಸರಿ ಮಾಡುವಂತೆ ದಾಖಲೆ ಸಮೇತ ಮನವಿ ಮಾಡಬೇಕು.