ನವದೆಹಲಿ:ಸತತ 11ನೇ ಸಲ ಆರ್ಬಿಐ ರೆಪೋ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡು ಬಂದಿದೆ. ಆದರೆ ಅಮೆರಿಕದ ಫೆಡರಲ್ ಬ್ಯಾಂಕ್ ಈಗಾಗಲೇ ಎರಡು ಬಾರಿ ತನ್ನ ಬಡ್ಡಿದರವನ್ನು ಕಡಿತ ಮಾಡಿದೆ. ಹೀಗಾಗಿ ಫೆಬ್ರವರಿಯಲ್ಲಿ ಆರ್ಬಿಐ ಬಡ್ಡಿದರ ಕಡಿತದಂತಹ ಕಠಿಣ ಮಾರ್ಗವನ್ನು ಅನುಸರಿಸುವ ಸಾಧ್ಯತೆ ಇದೆ ಎಂದುಏಂಜೆಲ್ ಒನ್ಸ್ ಐಕಾನಿಕ್ ವೆಲ್ತ್ ವರದಿ ತಿಳಿಸಿದೆ.
ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಕಡಿತ ಮಾಡಿದ್ದು, ಇದು ಜಾಗತಿಕ ಹಣಕಾಸು ನೀತಿಯನ್ನು ಮರು ನಿರ್ಮಾಣ ಮಾಡಬಹುದು ಎಂಬ ನಿರೀಕ್ಷೆ ಇದೆ. ದರ ಏರಿಕೆಯನ್ನು ವಿರಾಮಗೊಳಿಸುವ ನಿರ್ಧಾರ ಅಷ್ಟೇ ಅಲ್ಲದೇ. ಇದು ಮಾರುಕಟ್ಟೆಯ ಕಡಿಮೆ ದರ ಕಡಿತದ ಚಕ್ರವನ್ನು ನಿರೀಕ್ಷಿಸಿದೆ.
2025 ಸೆಪ್ಟೆಂಬರ್ ಮಾರ್ಗಸೂಚಿಯ ನಾಲ್ಕು ಬಡ್ಡಿ ದರ ಕಡಿತಕ್ಕೆ ಹೋಲಿಕೆ ಮಾಡಿದಾಗ, 2025 ಮತ್ತು 2026ರಲ್ಲಿ ಎರಡು ದರ ಕಡಿತದ ಯೋಜನೆಯನ್ನು ಇದು ಹೊಂದಿದೆ. ಫೆಡರಲ್ ರಿಸರ್ವ್ ಪ್ರಬಲ ಡಾಲರ್ಗೆ ಒತ್ತು ನೀಡುತ್ತಿದ್ದು, ಅಮೆರಿಕ ಬಾಂಡ್ಗಳ ಉದಯೋನ್ಮುಖ ಮಾರುಕಟ್ಟೆ ಎಚ್ಚರಿಕೆಯ ಸಂಕೇತವನ್ನೂ ಕೂಡಾ ನೀಡಿದೆ.
ಭಾರತದಲ್ಲಿ ಫೆಬ್ರವರಿಯಲ್ಲಿ ದರ ಕಡಿತದ ನಿರೀಕ್ಷಿಸಬಹುದಾಗಿದೆ. ಅದು ದೇಶಿಯಾ ಆರ್ಥಿಕತೆ ಖಾತ್ರಿ ನೀಡಿದಾಗ ಹಾಗೂ ಜಾಗತಿಕ ಆರ್ಥಿಕತೆ ಕಠಿಣ ನಿರ್ಧಾರ ಕೈಗೊಂಡಾಗ ಮಾತ್ರ ಎಂದು ತಿಳಿಸಿದೆ. ಆದಾಗ್ಯೂ, ಇದು ಜಾಗತಿಕ ಅಂಶಗಳ ಬಗ್ಗೆ ಎಚ್ಚರಿಕೆ ನೀಡಿದ್ದು, ಉದಯೋನ್ಮಖ ಮಾರುಕಟ್ಟೆ ಕರೆನ್ಸಿ ಒತ್ತಡವೂ ಆರ್ಬಿಐ ನಿರ್ಧಾರವನ್ನು ಸಂಕಷ್ಟಕ್ಕೆ ದೂಡಬಹುದು ಎಂದಿದೆ.