ಹೈದರಾಬಾದ್: ಟಾಟಾ ಗ್ರೂಪ್ ಅನ್ನು ದೇಶದ ಅತಿ ದೊಡ್ಡ ಬ್ರಾಂಡ್ ಮಾಡುವಲ್ಲಿ ರತನ್ ಟಾಟಾ ಪ್ರಮುಖ ಪಾತ್ರವಹಿಸಿದ್ದರು. ಟಾಟಾ ಸನ್ಸ್, ಟಾಟಾ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್ ಮತ್ತು ಟಾಟಾ ಕೆಮಿಕಲ್ಸ್ಗಳನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋದ ರತನ್ ಟಾಟಾ ಅವರು ವ್ಯವಹಾರ ಕುಶಾಗ್ರಮತಿ, ದೂರದೃಷ್ಟಿ ಹೊಂದಿದ್ದರು. ದೇಶಕ್ಕೆ ಅಪಾರ ಕೊಡುಗೆ ನೀಡಿದ ರತನ್ ಟಾಟಾ ಬುಧವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರತನ್ ಟಾಟಾ ಅವರ ಉದ್ಯಮದ ವಿಜಯ ಮತ್ತು ಅವರ ಕಾರ್ಯ ಪರಂಪರೆಗಳ ನಡೆ ಕುರಿತ ಒಂದು ಪುಟ್ಟ ಪರಿಚಯ ಇಲ್ಲಿದೆ.
ಟಾಟಾ ಸಾಗಿ ಬಂದ ಹಾದಿ:
- 1937: ಸೂನು ಮತ್ತು ನೇವಲ್ ಟಾಟಾ ದಂಪತಿಗೆ ರತನ್ ಟಾಟಾ ಜನಿಸಿದರು.
- 1955: 17 ನೇ ವಯಸ್ಸಿನಲ್ಲಿ ಕಾರ್ನೆಲ್ ವಿಶ್ವವಿದ್ಯಾಲಯಕ್ಕೆ (ಇಥಾಕಾ, ನ್ಯೂಯಾರ್ಕ್, ಅಮೆರಿಕ.) ದಾಖಲು. ಅಲ್ಲಿಯೇ ಏಳು ವರ್ಷಗಳ ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್ ಕೋರ್ಸ್ನಲ್ಲಿ ಅಧ್ಯಯನ.
- 1962: ವಾಸ್ತುಶಿಲ್ಪದಲ್ಲಿ ಸ್ನಾತಕೋತ್ತರ ಪದವಿ.
- 1962: ರತನ್ ಟಾಟಾ ಹಲವಾರು ಕಂಪನಿಗಳಲ್ಲಿ ಕೆಲಸ ಮಾಡಿದ ನಂತರ 1962 ರಲ್ಲಿ ಟಾಟಾ ಗ್ರೂಪ್‌ಗೆ ಸೇರ್ಪಡೆ. ಲಾಸ್ ಏಂಜಲೀಸ್‌ನಲ್ಲಿ ಜೋನ್ಸ್ ಮತ್ತು ಎಮ್ಮನ್ಸ್ ಅವರೊಂದಿಗೆ ಸ್ವಲ್ಪ ಕಾಲ ಕೆಲಸ ಮಾಡಿದ ಅನುಭವ.
- ಟಾಟಾ ಇಂಡಸ್ಟ್ರೀಸ್‌ನಲ್ಲಿ ಸಹಾಯಕರಾಗಿ ಟಾಟಾ ಗ್ರೂಪ್‌ಗೆ ಸೇರಿದ ಅವರು, ವರ್ಷದ ನಂತರ ಟಾಟಾ ಇಂಜಿನಿಯರಿಂಗ್ ಮತ್ತು ಲೊಕೊಮೊಟಿವ್ ಕಂಪನಿಯ (ಈಗಿನ ಟಾಟಾ ಮೋಟಾರ್ಸ್) ಜೆಮಶೆಡ್ಪುರ ಘಟಕದಲ್ಲಿ ಆರು ತಿಂಗಳ ತರಬೇತಿ ಪಡೆದರು.
- 1963: ತರಬೇತಿ ಕಾರ್ಯಕ್ರಮಕ್ಕಾಗಿ ಟಾಟಾ ಐರನ್ ಅಂಡ್ ಸ್ಟೀಲ್ ಕಂಪನಿ, ಅಥವಾ ಟಿಸ್ಕೊ (ಈಗ ಟಾಟಾ ಸ್ಟೀಲ್) ಗೆ ಸ್ಥಳಾಂತರಗೊಂಡರು
- 1965: ಟಿಸ್ಕೊನ ಇಂಜಿನಿಯರಿಂಗ್ ವಿಭಾಗದಲ್ಲಿ ತಾಂತ್ರಿಕ ಅಧಿಕಾರಿಯಾಗಿ ನೇಮಕ.
- 1969: ಆಸ್ಟ್ರೇಲಿಯಾದಲ್ಲಿ ಟಾಟಾ ಗ್ರೂಪ್‌ನ ಪ್ರತಿನಿಧಿಯಾಗಿ ಕೆಲಸ.
- 1970: ಭಾರತಕ್ಕೆ ಹಿಂತಿರುಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ಗೆ ಸೇರಿದರು. ನಂತರ ಹೊಸ ಸಾಫ್ಟ್‌ವೇರ್ ಸಂಸ್ಥೆ ಪ್ರಾರಂಭಿಸಿದರು.
- 1971: ಟಾಟಾ 1971 ರಲ್ಲಿ ನ್ಯಾಷನಲ್ ರೇಡಿಯೋ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿ ಲಿಮಿಟೆಡ್‌ನ ಪ್ರಭಾರ ನಿರ್ದೇಶಕರಾಗಿ ನೇಮಕಗೊಂಡರು.
- 1974: ಟಾಟಾ ಸನ್ಸ್‌ನ ಮಂಡಳಿಗೆ ನಿರ್ದೇಶಕರಾಗಿ ಸೇರ್ಪಡೆ.
- 1975: ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಸುಧಾರಿತ ನಿರ್ವಹಣಾ ಕಾರ್ಯಕ್ರಮ ಪೂರ್ಣಗೊಳಿಸಿದರು.
- 1981: ಟಾಟಾ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿ ಆಯ್ಕೆ, ಇಲ್ಲಿ ಹೈಟೆಕ್ ವ್ಯವಹಾರಗಳಲ್ಲಿ ಹೊಸ ಉದ್ಯಮಗಳ ಪ್ರವರ್ತಕರಾಗಿ ರೂಪುಗೊಂಡರು.
- 1983: ರತನ್ ಟಾಟಾ ಉಪ್ಪಿನ ಬ್ರ್ಯಾಂಡ್ ಪ್ರಾರಂಭಿಸಿದರು - ಟಾಟಾ ಸಾಲ್ಟ್, ಭಾರತದ ಮೊದಲ ರಾಷ್ಟ್ರೀಯ ಬ್ರಾಂಡ್ ಉಪ್ಪು ಆಗಿದ್ದು, ಆಯೋಡೈಸ್ಡ್ ವ್ಯಾಕ್ಯೂಮ್ ಉಪ್ಪನ್ನು ಪರಿಚಯಿಸಿದ ಮೊದಲ ಕಂಪನಿ ಎಂಬ ಹೆಗ್ಗಳಿಕೆ ಹೊಂದಿದೆ. ಆ ಸಮಯದಲ್ಲಿ ಬ್ರ್ಯಾಂಡ್ ಮಾಡದ ಮತ್ತು ಪ್ಯಾಕ್ ಮಾಡದ ಉಪ್ಪು ಜನಪ್ರಿಯವಾಗಿತ್ತು.
- 1986: ರತನ್ ಟಾಟಾ ಅವರು ಏರ್ ಇಂಡಿಯಾದ ಅಧ್ಯಕ್ಷರಾಗಿ ನೇಮಕಗೊಂಡರು. ಅವರು 1989 ರಲ್ಲಿ ಕೆಳಗಿಳಿಯುತ್ತಾರೆ.
- ಮಾರ್ಚ್ 25, 1991: ರತನ್ ಟಾಟಾ ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್‌ಗಳ ಅಧ್ಯಕ್ಷರಾಗಿ ನೇಮಕಗೊಂಡರು