ನವದೆಹಲಿ:ಇಂಟರ್ ನೆಟ್ ಬೆಲೆಗಳನ್ನು ನಿಯಂತ್ರಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು (ಫೆಬ್ರವರಿ 24) ವಜಾಗೊಳಿಸಿದೆ. ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ನ್ಯಾಯಪೀಠವು ಅರ್ಜಿದಾರರಾದ ರಜತ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿತು.
ಇಂಟರ್ ನೆಟ್ ಸೇವೆಗಳನ್ನು ಪಡೆಯಲು ಗ್ರಾಹಕರಿಗೆ ಹಲವಾರು ಆಯ್ಕೆಗಳಿವೆ ಎಂದು ಸಿಜೆಐ ಆರಂಭದಲ್ಲಿ ಗಮನ ಸೆಳೆದರು.
"ನಮ್ಮದು ಮುಕ್ತ ಮಾರುಕಟ್ಟೆಯಾಗಿದೆ. ದೇಶದಲ್ಲಿ ಲ್ಯಾನ್ ಇದೆ, ವೈರ್ಡ್ ಇಂಟರ್ ನೆಟ್ ಇದೆ, ಇತರ ಇಂಟರ್ ನೆಟ್ಗಳೂ ಇವೆ. ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಸಹ ಇಂಟರ್ ನೆಟ್ ಸೇವೆ ನೀಡುತ್ತಿವೆ." ಎಂದು ಸಿಜೆಐ ಹೇಳಿದರು.