ಹೈದರಾಬಾದ್: ಈಗ ರುಪೇ ಕ್ರೆಡಿಟ್ ಕಾರ್ಡ್‌ಗಳ ಜಮಾನಾ ಶುರುವಾಗಿದೆ. ದೇಶದಲ್ಲಿ ಅನೇಕ ಜನರನ್ನು ಈ ಕಾರ್ಡ್‌ಗಳು ತಲುಪಿವೆ. ಅದಕ್ಕಾಗಿಯೇ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ NPCI ರುಪೇ ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ 3 ಹೊಸ ವೈಶಿಷ್ಟ್ಯಗಳನ್ನು ಜಾರಿಗೆ ತಂದಿದೆ. ಅವು ಯಾವುವು ಎಂದರೆ,
ಬಳಕೆದಾರರು ಪಾವತಿಯ ಸಮಯದಲ್ಲಿ UPI ಅಪ್ಲಿಕೇಶನ್ ಲಿಂಕ್ ಮಾಡಿದ RuPay ಕ್ರೆಡಿಟ್ ಕಾರ್ಡ್‌ನಲ್ಲಿ ಈಗ ವಹಿವಾಟುಗಳನ್ನು EMI ಗಳಾಗಿ ಪರಿವರ್ತಿಸಬಹುದು. UPI ಅಪ್ಲಿಕೇಶನ್‌ನಲ್ಲಿ ಕ್ರೆಡಿಟ್ ಕಾರ್ಡ್ ಆಯ್ಕೆಯಿಂದ ಪಾವತಿ ಸಮಯದಲ್ಲಿ EMI ಆಯ್ಕೆಗಳು ಆಟೋಮೆಟೆಡ್ ಆಗಿ ಗೋಚರಿಸುತ್ತವೆ. ಬಳಕೆದಾರರು ತಮಗೆ ಸೂಕ್ತವಾದ ಆಯ್ಕೆಗಳನ್ನು ಮಾಡಿಕೊಳ್ಳಬಹುದು. ಇದು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ, ಕಂತುಗಳ ಪಾವತಿ, ಮಿತಿ ನಿರ್ವಹಣೆಯಂತಹ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ. RuPay ಕ್ರೆಡಿಟ್ ಕಾರ್ಡ್ ಬಳಕೆದಾರರು ಬಯಸಿದಲ್ಲಿ 'ಆಟೋ ಪೇ' ಆಯ್ಕೆಯನ್ನು ಕೂಡಾ ಬಳಸಬಹುದು. ಬ್ಯಾಂಕ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ವಿತರಕರು ಮೇ 31 ರೊಳಗೆ ಈ ಹೊಸ ವೈಶಿಷ್ಟ್ಯಗಳನ್ನು ಜಾರಿಗೆ ತರಬೇಕಾಗುತ್ತದೆ.
ಇವುಗಳು ರುಪೇ ಕಾರ್ಡ್ಗಳ್ಲಿ ಇರುವ ಹೆಚ್ಚುವರಿ ವೈಶಿಷ್ಟ್ಯಗಳಾಗಿವೆ, ನೀವು ಎಂದಾದರೂ ನಿಮ್ಮ ಕ್ರೆಡಿಟ್ ಮಿತಿಯನ್ನು ಹೆಚ್ಚಿಸಬೇಕು ಎಂದು ಕೊಂಡಿದ್ದಾರೆ. ನೀವು ನಿಮ್ಮ UPI ಅಪ್ಲಿಕೇಶನ್‌ನಿಂದಲೇ ನೇರವಾಗಿ ಬ್ಯಾಂಕ್‌ಗೆ ವಿನಂತಿಯನ್ನು ಕಳುಹಿಸಬಹುದು. ಕ್ರೆಡಿಟ್ ಕಾರ್ಡ್ ಬಾಕಿ ಬಿಲ್, ಕನಿಷ್ಠ ಬಿಲ್, ಒಟ್ಟು ಮೊತ್ತ, ಬಿಲ್ ದಿನಾಂಕವನ್ನು ಯುಪಿಐ ಆಪ್ ನಲ್ಲಿಯೇ ಇನ್ಮುಂದೆ ಪರಿಶೀಲನೆ ಮಾಡಿಕೊಳ್ಳಬಹುದು. ಮೊದಲು ಈ ವೈಶಿಷ್ಟ್ಯಗಳು ಬ್ಯಾಂಕ್ ಅಪ್ಲಿಕೇಶನ್‌ನಲ್ಲಿ ಮಾತ್ರ ಲಭ್ಯವಿದ್ದವು. ಆದರೆ, ಇನ್ಮುಂದೆ ಇವು ಯುಪಿಐ ಆಪ್ ಗಳಲ್ಲಿಯೂ ಲಭ್ಯವಾಗಲಿದೆ.
RuPay ಕ್ರೆಡಿಟ್ ಕಾರ್ಡ್ ಪ್ರಯೋಜನಗಳು:UPI ನೊಂದಿಗೆ RuPay ಕ್ರೆಡಿಟ್ ಕಾರ್ಡ್‌ಗಳನ್ನು ಲಿಂಕ್ ಮಾಡುವುದರಿಂದ ಸುಲಭವಾಗಿ ನಿಮ್ಮ ಬಾಕಿಗಳನ್ನು ತಕ್ಷಣವೇ ಕುಳಿತ ಸ್ಥಳದಿಂದಲೇ ಪಾವತಿ ಮಾಡಬಹುದು. ವಿಶೇಷವಾಗಿ ಕ್ರೆಡಿಟ್ ಕಾರ್ಡ್ ಅನ್ನು ಒಂದು ಸ್ಥಳದಲ್ಲಿ ಮತ್ತು UPI ಅಪ್ಲಿಕೇಶನ್ ಅನ್ನು ಇನ್ನೊಂದು ಸ್ಥಳದಲ್ಲಿ ಬಳಸುವ ಅಗತ್ಯವಿಲ್ಲ. ನಿಮ್ಮ ಕೈಯಲ್ಲಿ ಫೋನ್ ಇದ್ದರೆ, ನೀವು ತುಂಬಾ ಸುಲಭವಾಗಿ ಪಾವತಿ ಮಾಡಬಹುದು. ಪ್ರತಿ ಬಾರಿ ಕ್ರೆಡಿಟ್ ಕಾರ್ಡ್ ಅನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬೇಕು ಅಂತಾನೂ ಇಲ್ಲ.