ಭಾಗಲ್ಪುರ (ಬಿಹಾರ):ಪ್ರತಿದಿನ ಜನರು ಸೈಬರ್ ಅಪರಾಧಕ್ಕೆ ಬಲಿಯಾಗುತ್ತಿದ್ದಾರೆ. ಯಾರದ್ದಾದರೂ ಮೊಬೈಲ್ ಹ್ಯಾಕ್ ಆಗಿದ್ದರೆ ಅವರ ಖಾತೆಯಿಂದ ಲಕ್ಷಗಟ್ಟಲೆ ಹಣ ಎಗರಿಸಲಾಗುತ್ತದೆ. PhonePeನಲ್ಲಿಯೂ ಒಂದು ದೋಷವಿತ್ತು. ಅದರಿಂದ ಜನರಿಗೆ ಲಕ್ಷಗಟ್ಟಲೆ ನಷ್ಟ ಉಂಟಾಗುವ ಸಾಧ್ಯತೆಯಿತ್ತು. ಇತ್ತೀಚಿನ ದಿನಗಳಲ್ಲಿ ಜನರು UPI ಮೂಲಕ ಎಲ್ಲಾ ರೀತಿಯ ಪಾವತಿಗಳನ್ನು ಮಾಡುತ್ತಾರೆ. ಹೀಗಿರುವಾಗ ಭಾಗಲ್‌ಪುರದ ಮಯಾಂಕ್ ಫೋನ್ ಪೇನಲ್ಲಿನ ದೊಡ್ಡ ತಪ್ಪನ್ನು ಕಂಡು ಹಿಡಿದಿದ್ದಾರೆ. ಈ ದೋಷವನ್ನು ಕಂಡುಹಿಡಿದ ನಂತರ, ಮಯಾಂಕ್ ಫೋನ್‌ಪೇಗೆ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ಫೋನ್ ಪೇ ಇ-ಮೇಲ್ ಮೂಲಕ ಮಯಾಂಕ್ ಅವರಿಗೆ ಧನ್ಯವಾದ ಸಲ್ಲಿಸಿದೆ. ಜೊತೆಗೆ ಶೀಘ್ರದಲ್ಲೇ ಮಯಾಂಕ್ ಅವರನ್ನು ಗೌರವಿಸಲಾಗುವುದು ಎಂದು ತಿಳಿಸಲಾಗಿದೆ.
ಫೋನ್‌ಪೇನಲ್ಲಿ ತಪ್ಪು ಕಂಡುಹಿಡಿದಿದ್ದು ಹೇಗೆ?:ಭಾಗಲ್ಪುರ್ ನಗರದ ಬುಧನಾಥ್ ನಿವಾಸಿ ಮಯಾಂಕ್ ಅವರು ಮೊಬೈಲ್ ಪಾವತಿ ಪ್ಲಾಟ್‌ಫಾರ್ಮ್ ಫೋನ್‌ಪೇನಲ್ಲಿ ದೊಡ್ಡ ತಪ್ಪನ್ನು ಕಂಡುಕೊಂಡಿದ್ದಾರೆ. ಇದರಲ್ಲಿ ಅವರು OTP ಇಲ್ಲದೆಯೇ PhonePe ಅನ್ನು ಬೈಪಾಸ್ ಮಾಡುವ ಮೂಲಕ ಲಾಗ್ ಇನ್ ಆದರು. ನಂತರ ಫೋನ್ ಪೇಗೆ ವರದಿ ಮಾಡಿದರು. ತನಿಖೆಯ ನಂತರ, PhonePe ಮಯಾಂಕ್ ಅವರನ್ನು ಹಾಲ್ ಆಫ್ ಫೇಮ್‌ಗೆ ಕಂಪನಿ ಸೇರಿಸಿದೆ.
"ನಾನು ಯಾರಿಗಾದರೂ ಫೋನ್ ಕರೆಗಳನ್ನು ಮಾಡುತ್ತಿದ್ದೆ. ಆಗ ಇದ್ದಕ್ಕಿದ್ದಂತೆ ಯಾರಾದರೂ ಫೋನ್ ಪೇ ಅನ್ನು ಹ್ಯಾಕ್ ಮಾಡಬಹುದೆಂದು ನನ್ನ ಮನಸ್ಸಿಗೆ ಬಂದಿತು? ನಂತರ ನಾನು ಸಂಶೋಧನೆ ಮಾಡಲು ಪ್ರಾರಂಭಿಸಿದೆ. ಸಂಶೋಧನೆಯ ಸಮಯದಲ್ಲಿ ನಾನು ನನ್ನ ಟೂಲ್‌ನಿಂದ OTP ವಿಭಾಗವನ್ನು ತೆಗೆದುಹಾಕುತ್ತಿದ್ದೆ. ವೆಬ್‌ಸೈಟ್ ಸರಿಯಾಗಿದ್ದರೆ ನೀವು OTP ವಿಭಾಗವನ್ನು ತೆಗೆದುಹಾಕಿದರೆ ಅದು ಕಾರ್ಯನಿರ್ವಹಿಸುವುದಿಲ್ಲ. ಆದರೆ, ಯಾವುದೇ ಹ್ಯಾಕರ್‌ಗಳು PhonePe ಅನ್ನು ಹ್ಯಾಕ್ ಮಾಡಬಹುದು. ಇದರಲ್ಲಿ, ಒಟಿಪಿಯನ್ನು ಬೈಪಾಸ್ ಮಾಡುವ ಮೂಲಕ ಲಾಗ್ ಇನ್ ಮಾಡಲಾಗುತ್ತಿದೆ" ಎಂದು ಸೈಬರ್ ಸೆಕ್ಯೂರಿಟಿ ಸಂಶೋಧಕ ಮಯಾಂಕ್ ತಿಳಿಸಿದರು.