ಮುಂಬೈ:ದೇಶದಲ್ಲಿ ಹಸಿರು ಭವಿಷ್ಯ ನಿರ್ಮಾಣ ಮತ್ತು ಎಲೆಕ್ಟ್ರಿಕ್ ವಾಹನ (ಇವಿ) ಮೂಲ ಸೌಕರ್ಯ ಉತ್ತೇಜಿಸುವ ನಿಟ್ಟಿನಲ್ಲಿ ಅದಾನಿ ಟೋಟಲ್ ಎನರ್ಜಿಸ್ ಇ ಮೊಬಿಲಿಟಿ ಲಿಮಿಟೆಡ್ ಜೊತೆಗೆ ಮಹೀಂದ್ರಾ ಅಂಡ್ ಮಹೀಂದ್ರಾ ಒಡಂಬಡಿಕೆಗೆ ಸಹಿ ಹಾಕಿದೆ.
ದೇಶದೆಲ್ಲೆಡೆ ವಿಸ್ತಾರವಾದ ಇವಿ ಚಾರ್ಜಿಂಗ್ ಮೂಲ ಸೌಕರ್ಯವನ್ನು ಮತ್ತಷ್ಟು ಅಭಿವೃದ್ಧಿ ಮಾಡುವ ಒಡಂಬಡಿಕೆ ಇದಾಗಿದೆ. ಈ ಪಾಲುದಾರಿಕೆ ದೇಶದೆಲ್ಲೆಡೆ ಗ್ರಾಹಕರಿಗೆ ಚಾರ್ಜಿಂಗ್ ನೆಟ್ವರ್ಕ್ ಬಲಪಡಿಸಲು, ತಡೆ ರಹಿತ ಅನ್ವೇಷಣೆ, ಲಭ್ಯತೆ, ಸಂಚಾರ ಮತ್ತು ವಹಿವಾಟಗಳನ್ನು ವಿಸ್ತರಿಸುವ ಉದ್ದೇಶವನ್ನು ಒಳಗೊಂಡಿದೆ. ಜೊತೆಗೆ ಇ - ಮೊಬಿಲಿಟಿ ಪರಿಹಾರಗಳನ್ನು ಹೊರತರಲು ಸಹಾಯ ಮಾಡಲಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಸಹಕಾರವು ಇವಿ ಚಾರ್ಜಿಂಗ್ ಮೂಲಸೌಕರ್ಯ ವೃದ್ಧಿಸಿ, ದೇಶದೆಲ್ಲೆಡೆ ಗ್ರಾಹಕರು ಡಿಜಿಟಲ್ ಏಕೀಕರಣ ಮತ್ತು ತಡೆರಹಿತ ಚಾರ್ಜಿಂಗ್ ನೆಟ್ವರ್ಕ್ ಪ್ರವೇಶದ ಮೂಲಕ ಇವಿ ಅನುಭವ ಆಹ್ಲಾದಿಸಬಹುದು ಎಂದು ಎಂ ಅಂಡ್ ಎಂನ ಆಟೋಮೋಟಿವ್ ಡಿವಿಶನ್ ಅಧ್ಯಕ್ಷ ವಿಜಯ್ ನಕ್ರಾ ತಿಳಿಸಿದ್ದಾರೆ. ಮಹೀಂದ್ರಾ ಎಕ್ಸ್ಯುವಿ 400 ಗ್ರಾಹಕರು ಬ್ಲೂಸೆನ್ಸ್ಪ್ಲಸ್ ಆ್ಯಪ್ ಮೂಲಕ 1,100ಕ್ಕೂ ಹೆಚ್ಚು ಚಾರ್ಜರ್ ಲಭ್ಯತೆಯನ್ನು ಇದೀಗ ಪಡೆಯಬಹುದು. ಈ ಮೂಲಕ ಮಹೀಂದ್ರ ಇವಿ ಮಾಲೀಕರಿಗೆ ಎಲೆಕ್ಟ್ರಿಕ್ ಚಾರ್ಜಿಂಗ್ ಸೌಲಭ್ಯದ ಅನುಕೂಲತೆ ಉತ್ತೇಜಿಸಲಿದೆ.