ಕರ್ನಾಟಕ

karnataka

By ETV Bharat Karnataka Team

Published : 5 hours ago

ETV Bharat / business

EXCLUSIVE INTERVIEW: ಅಧಿಕ ಲಾಭ ಗಳಿಸಬೇಕಾದರೆ, ಬುದ್ಧಿವಂತಿಕೆಯ ಹೂಡಿಕೆ ಹೀಗಿರಬೇಕು - Learn Smart Investments

ಬಂಡವಾಳ ಮಾರುಕಟ್ಟೆ ಸಂಸ್ಥೆಯ ಎಸ್​​ಟೀ ಹೋಲ್ಡಿಂಗ್ಸ್ (ESTEE HOLDINGS) ಸಂಸ್ಥಾಪಕ ಸಂದೀಪ್ ತ್ಯಾಗಿ ಅವರು ಯಶಸ್ವಿ ಹೂಡಿಕೆಯ ಬಗ್ಗೆ ತಾವು ಬರೆದ ಪುಸ್ತಕವಾದ ದ ಲಿಟಲ್ ಬುಕ್ ಆಫ್ ಬಿಗ್ ಗೇನ್ಸ್: ಎ ಗೈಡ್ ಟು ಇನ್ವೆಸ್ಟಿಂಗ್ ವೈಸ್ಲಿ ಬಗ್ಗೆ ಈಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಅಧಿಕ ಲಾಭ ಗಳಿಸಬೇಕಾದರೆ, ಬುದ್ಧಿವಂತಿಕೆಯ ಹೂಡಿಕೆ ಹೇಗಿರಬೇಕು ಗೊತ್ತಾ?
ಅಧಿಕ ಲಾಭ ಗಳಿಸಬೇಕಾದರೆ, ಬುದ್ಧಿವಂತಿಕೆಯ ಹೂಡಿಕೆ ಹೇಗಿರಬೇಕು ಗೊತ್ತಾ? (ETV Bharat)

ನವದೆಹಲಿ:ಆರ್ಥಿಕ ಉಳಿತಾಯ ಎಂಬುದು ಎಲ್ಲರಿಗೂ ಬಹುಮುಖ್ಯ. ಇದಕ್ಕಾಗಿ ಮಿತವ್ಯಯ ಮತ್ತು ಹೂಡಿಕೆ ಮಾಡುತ್ತಾರೆ. ಕೆಲವರು ಇದರಲ್ಲಿ ಪರಿಣತಿ ಸಾಧಿಸುತ್ತಾರೆ. ಇದರಲ್ಲಿ ಯಶಸ್ಸು ಕಂಡವರನ್ನು ಅತ್ಯಂತ ಶಿಸ್ತಿನ ಹೂಡಿಕೆದಾರ ಎಂದು ಪರಿಗಣಿಸಬಹುದು. ಅಂಥವರು ಹೂಡಿಕೆಗಳ ಮೇಲೆ ಹಿಡಿತ ಸಾಧಿಸಿರುತ್ತಾರೆ. ವಿಶ್ವಾಸಾರ್ಹ ಮೂಲಗಳಿಂದ ಜ್ಞಾನ ಪಡೆದು, ಕಠಿಣ ಶ್ರಮ ಹಾಕಿರುತ್ತಾರೆ. ಇದರಿಂದ ಅವರು ಭವಿಷ್ಯದ ಬಗ್ಗೆ ನಿರುಮ್ಮಳವಾಗಿರುತ್ತಾರೆ.

ಬಂಡವಾಳ ಮಾರುಕಟ್ಟೆ ಸಂಸ್ಥೆಯ ಎಸ್​​​ಟೀ ಹೋಲ್ಡಿಂಗ್ಸ್ ಸಂಸ್ಥಾಪಕ ಸಂದೀಪ್ ತ್ಯಾಗಿ(SANDEEP TYAGI OF ESTEE HOLDINGS) ಅವರು ಬ್ಲೂಮ್ಸ್‌ಬರಿ ಪ್ರಕಟಿಸಿದ 'ದ ಲಿಟಲ್ ಬುಕ್ ಆಫ್ ಬಿಗ್ ಗೇನ್ಸ್: ಎ ಗೈಡ್ ಟು ಇನ್ವೆಸ್ಟಿಂಗ್ ವೈಸ್ಲಿ' ಎಂಬ ಪುಸ್ತಕವನ್ನು ಬರೆದಿದ್ದಾರೆ. ಇದು 'ಮನಸ್ಸಿನ ಶಾಂತಿ' ಕುರಿತು ಹೇಳುತ್ತದೆ.

ಆರ್ಥಿಕ ಶಕ್ತಿ ಮೇಲೆ ಹೂಡಿಕೆ:ಪುಸ್ತಕ ಮತ್ತು ಅವರ ವಿಚಾರಧಾರೆಗಳ ಬಗ್ಗೆ ETV ಭಾರತ್‌ಗೆ ವಿಶೇಷ ಸಂದರ್ಶನದಲ್ಲಿ ನೀಡಿದ್ದಾರೆ. ಅದರಲ್ಲಿ ಅವರು, ಉತ್ತಮ ಹೂಡಿಕೆಯನ್ನು ಆರೋಗ್ಯಕರ ಆಹಾರಕ್ಕೆ ಹೋಲಿಸಿದ್ದಾರೆ. ಇದು ಶಿಸ್ತು ಮತ್ತು ಪ್ರವೃತ್ತಿಯನ್ನು ವಿರೋಧಿಸುವ ಸಾಮರ್ಥ್ಯವನ್ನು ಬಯಸುತ್ತದೆ ಎಂದು ಹೇಳಿದ್ದಾರೆ. ಅನೇಕರು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುತ್ತಾರೆ. ಆದರೆ, ಕೆಲವರು ಮಾತ್ರ ಶಿಸ್ತನ್ನು ಕಾಪಾಡಿಕೊಂಡಿರುತ್ತಾರೆ. ಪುಸ್ತಕದಲ್ಲಿ, ಮ್ಯೂಚುವಲ್ ಫಂಡ್‌ಗಳು ಮತ್ತು ಸ್ಟಾಕ್‌ಗಳು ಸೇರಿದಂತೆ ವಿವಿಧ ಮಾರುಕಟ್ಟೆ ಸಾಧನಗಳಲ್ಲಿ ಸ್ಮಾರ್ಟ್ ಹೂಡಿಕೆಗಳ ಮೂಲಕ ಲಾಭವನ್ನು ಹೇಗೆ ಗಳಿಸಬಹುದು ಎಂಬುದನ್ನು ಅವರು ವಿವರಿಸಿದ್ದಾರೆ.

ಸಂದೀಪ್ ತ್ಯಾಗಿ ಅವರು ತಮ್ಮ ಪುಸ್ತಕದಲ್ಲಿ ತಮ್ಮ ಆರಂಭಿಕ ಹೂಡಿಕೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಚಿಕ್ಕ ಹೂಡಿಕೆಗಳಿಂದ ಆರಂಭಿಸಿ, ಮ್ಯೂಚುವಲ್ ಫಂಡ್‌ಗಳು ಮತ್ತು ಬೇರೆ ಬೇರೆ ಆಯ್ಕೆಗಳ ಮೂಲಕ ಉತ್ತಮ ಲಾಭವನ್ನು ಗಳಿಸಿದರು. ಪ್ರತಿಯೊಬ್ಬರೂ ತಮ್ಮ ಅಗತ್ಯಗಳ ಬಗ್ಗೆ ಅರಿವಿರಬೇಕು. ಅದಕ್ಕೆ ಅನುಗುಣವಾಗಿ ಉಳಿತಾಯ ಪ್ರಾರಂಭಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಹೂಡಿಕೆಯ ಮಿತಿಗಳು:ಅವರು ಕಳೆದ 40 ವರ್ಷಗಳಲ್ಲಿ ಷೇರು ಮಾರುಕಟ್ಟೆಯ ಕಾರ್ಯಕ್ಷಮತೆಯನ್ನು ಚರ್ಚಿಸುತ್ತಾರೆ. ವಾರ್ಷಿಕ ಆದಾಯವು ಯಾವುದೇ ಒಂದು ವರ್ಷದಲ್ಲಿ 82% ಗರಿಷ್ಠ ಮತ್ತು -52% ಕನಿಷ್ಠ ನಡುವೆ ಏರಿಳಿತವಿರಬೇಕು. ರೋಲಿಂಗ್ ಐದು-ವರ್ಷದ ಆಧಾರದ ಮೇಲೆ ನೋಡಿದಾಗ, ಆದಾಯವು 43% ರಿಂದ -1.8% ವರೆಗೆ ಇರುತ್ತದೆ. ಆದರೆ, 10 ವರ್ಷಗಳಲ್ಲಿ, ಅವು 23.5% ರಿಂದ 2.6% ವರೆಗೆ ಬದಲಾಗುತ್ತವೆ. ಅವರ ಪ್ರಕಾರ, ಒಬ್ಬ ವ್ಯಕ್ತಿಯು ಹೆಚ್ಚು ಕಾಲ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾನೆ. ಅವರು ಗಣನೀಯ ಆದಾಯವನ್ನು ಪಡೆಯುವ ಸಾಧ್ಯತೆ ಹೆಚ್ಚು ಎಂದು ಹೇಳುತ್ತಾರೆ.

ಹೂಡಿಕೆಯನ್ನು ಪುಸ್ತಕದಲ್ಲಿ ಉದಾಹರಿಸಿದ್ದು, 40 ವರ್ಷಗಳವರೆಗೆ ಸ್ವಲ್ಪ ಹಣವನ್ನು ಹೂಡಿಕೆ ಮಾಡಿದರು. ಸಂಪ್ರದಾಯಬದ್ಧವಾಗಿ ಹೂಡಿಕೆ ಮಾಡಿದಲ್ಲಿ, ವ್ಯಕ್ತಿಯು 21.7 ಪಟ್ಟು ಆರಂಭಿಕ ಹೂಡಿಕೆಯ ಹಣವನ್ನು ಗಳಿಸುತ್ತಾನೆ. ಆಕ್ರಮಣಕಾರಿಯಾಗಿ ಹೂಡಿಕೆ ಮಾಡಿದಲ್ಲಿ ಕನಿಷ್ಠ ಶೇಕಡಾ 16 ರಷ್ಟು ಸರಾಸರಿ ಆದಾಯವನ್ನು ಸಾಧಿಸಿದರೆ, 378.8 ಪಟ್ಟು ಲಾಭ ಗಳಿಸುತ್ತಾರೆ ಎಂದು ಹೇಳಿದ್ದಾರೆ.

ಅವರು ತಮ್ಮ ಪುಸ್ತಕದಲ್ಲಿ ಹಣವನ್ನು ಎರವಲು ಪಡೆಯುವ ಬಗ್ಗೆ ಚರ್ಚಿಸಿದ್ದಾರೆ. ಸಾಲದ ಮೇಲಿನ ಬಡ್ಡಿದರಕ್ಕಿಂತ ಹೆಚ್ಚು ಮೌಲ್ಯಯುತವಲ್ಲದ ವಸ್ತುಗಳನ್ನು ಖರೀದಿಸಬಾರದು ಎಂದು ಹೇಳುತ್ತಾರೆ. ಮೌಲ್ಯದ ಕುಸಿತವು ಅವರು ಒದಗಿಸುವ ಪ್ರಯೋಜನಗಳಿಗಿಂತ ಕಡಿಮೆಯಿದ್ದರೆ, ಅದು ಇನ್ನೂ ಯೋಗ್ಯವಾಗಿರುತ್ತದೆ ಎನ್ನುತ್ತಾರೆ.

ಹೂಡಿಕೆಯಲ್ಲಿ ಅಪಾಯಕಾರಿ ಅಂಶಗಳು:ಸಂದೀಪ್​ ತ್ಯಾಗಿ ಅವರ ಪ್ರಕಾರ, ಹೂಡಿಕೆಯಲ್ಲಿ ಅತ್ಯಂತ ಅಪಾಯಕಾರಿ ಅಂಶಗಳೆಂದರೆ, "ಇದು ಖಚಿತವಾಗಿ ಲಾಭ ಮಾಡಿಕೊಡುವ ಹೂಡಿಕೆ" ಎಂದು ಹೇಳುವುದು. ಈ ಮಾತುಗಳು ಸಾಮಾನ್ಯವಾಗಿ ಮದ್ಯಪಾನ ಮಾಡಿದಾಗ ಅಥವಾ ಗಾಲ್ಫ್ ಕೋರ್ಸ್‌ನಲ್ಲಿ ಸ್ನೇಹಿತರ ನಡುವಿನ ಸಂಭಾಷಣೆಯಾಗಿರುತ್ತದೆ. ಈ ವೇಳೆ ಅದು ಪ್ರಸ್ತಾಪವಾಗುತ್ತದೆ. ಆದರೆ, ಯಾವುದೇ ಹೂಡಿಕೆಯು ವಿವೇಚನೆಯಿಂದ ಕೂಡಿರಬೇಕು. ಯಾವುದೇ ಸಲಹೆಯನ್ನೂ ನಿಖರವಾಗಿ ಅರ್ಥ ಮಾಡಿಕೊಳ್ಳಬೇಕು. ಸ್ನೇಹ-ಪ್ರೀತಿಯಲ್ಲಿ ವ್ಯವಹಾರ ಇರಬಾರದು. ಇಂತಹ ಸಲಹೆಗಳು ಟಿವಿ ಶೋಗಳಲ್ಲಿ ತಜ್ಞರಿಂದಲೂ ಬರಬಹುದು. ಆದರೂ ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡುತ್ತಾರೆ.

ಇದನ್ನೂ ಓದಿ:ವಯಸ್ಸಿಗೆ ಅನುಗುಣವಾಗಿ ಇನ್​​ವೆಸ್ಟ್​ಮೆಂಟ್​: ಯಾವ ವಯಸ್ಸಲ್ಲಿ, ಎಷ್ಟು ಹೂಡಿಕೆ ಮಾಡಬೇಕು ಗೊತ್ತಾ? - Investment Portfolio By Age

ABOUT THE AUTHOR

...view details