ಕರ್ನಾಟಕ

karnataka

ETV Bharat / business

ನಿಮಗಿದು ಗೊತ್ತಾ?; ಫೆಬ್ರವರಿಯಲ್ಲಿ ಭಾರತದ ಗಣಿಗಳಿಂದ 255 ಕೆಜಿ ಚಿನ್ನ ಉತ್ಪಾದನೆ: ಶೇ 86ರಷ್ಟು ಹೆಚ್ಚಳ - GOLD PRODUCTION - GOLD PRODUCTION

ಭಾರತದ ಗಣಿಗಳಿಂದ ಚಿನ್ನದ ಉತ್ಪಾದನೆ ಶೇ 86ರಷ್ಟು ಏರಿಕೆಯಾಗಿದೆ.

Gold production from Indian mines surges by 86 pc in Feb, copper output up 29 pc
Gold production from Indian mines surges by 86 pc in Feb, copper output up 29 pc (IANS)

By ETV Bharat Karnataka Team

Published : May 3, 2024, 12:33 PM IST

ನವದೆಹಲಿ: ಈ ವರ್ಷದ ಫೆಬ್ರವರಿಯಲ್ಲಿ ಭಾರತೀಯ ಗಣಿಗಳಿಂದ ಚಿನ್ನದ ಉತ್ಪಾದನೆ ಶೇಕಡಾ 86 ರಷ್ಟು ಏರಿಕೆಯಾಗಿ 255 ಕೆಜಿಗೆ ತಲುಪಿದ್ದರೆ, ತಾಮ್ರದ ಉತ್ಪಾದನೆ ಶೇಕಡಾ 28.7 ರಷ್ಟು ಏರಿಕೆಯಾಗಿ 11,000 ಟನ್​ಗಳಿಗೆ ತಲುಪಿದೆ ಎಂದು ಗಣಿ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ಅಂಕಿ - ಅಂಶಗಳು ತಿಳಿಸಿವೆ.

ಇತರ ಪ್ರಮುಖ ಖನಿಜಗಳ ಪೈಕಿ ಬಾಕ್ಸೈಟ್ (ಅಲ್ಯೂಮಿನಿಯಂ) ಉತ್ಪಾದನೆಯು ಶೇಕಡಾ 21 ರಷ್ಟು ಏರಿಕೆಯಾಗಿ 24,14,000 ಟನ್​ಗಳಿಗೆ ತಲುಪಿದ್ದರೆ, ಕ್ರೋಮೈಟ್ ಉತ್ಪಾದನೆಯೂ ಶೇಕಡಾ 21 ರಷ್ಟು ಏರಿಕೆಯಾಗಿ 4,00,000 ಟನ್​ಗಳಿಗೆ ತಲುಪಿದೆ ಎಂದು ಅಂಕಿ- ಅಂಶಗಳು ತೋರಿಸಿವೆ.

ಕರ್ನಾಟಕವು ಭಾರತದ ಪ್ರಮುಖ ಚಿನ್ನದ ನಿಕ್ಷೇಪಗಳು ಮತ್ತು ಗಣಿಗಾರಿಕೆಯ ನೆಲೆಯಾಗಿದೆ. ಕರ್ನಾಟಕದಲ್ಲಿ ಮುಖ್ಯವಾಗಿ ಕೋಲಾರ, ಧಾರವಾಡ, ಹಾಸನ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚಿನ ಚಿನ್ನದ ಗಣಿಗಳಿವೆ. ಈ ಜಿಲ್ಲೆಗಳು ದೇಶದ ಚಿನ್ನದ ಉತ್ಪಾದನೆಗೆ ಪ್ರಮುಖ ಕೊಡುಗೆ ನೀಡುತ್ತವೆ.

ಭಾರತದ ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ ವಲಯದ ಖನಿಜ ಉತ್ಪಾದನೆಯ ಒಟ್ಟಾರೆ ಸೂಚ್ಯಂಕವು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಫೆಬ್ರವರಿಯಲ್ಲಿ ಶೇಕಡಾ 8 ರಷ್ಟು ಏರಿಕೆಯಾಗಿದೆ ಎಂದು ಇಂಡಿಯನ್ ಬ್ಯೂರೋ ಆಫ್ ಮೈನ್ಸ್ ಸಂಗ್ರಹಿಸಿದ ಅಂಕಿ ಅಂಶಗಳು ತಿಳಿಸಿವೆ. 2023-24ರ ಏಪ್ರಿಲ್-ಫೆಬ್ರವರಿಯಲ್ಲಿ ಖನಿಜ ಉತ್ಪಾದನೆಯ ಸಂಚಿತ ಬೆಳವಣಿಗೆಯು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 8.2 ರಷ್ಟಿದೆ.

ಫೆಬ್ರವರಿ 2023 ಕ್ಕೆ ಹೋಲಿಸಿದರೆ ಫೆಬ್ರವರಿ 2024 ರಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡ ಇತರ ಪ್ರಮುಖ ಖನಿಜಗಳಲ್ಲಿ ಫಾಸ್ಫರೈಟ್ (19 ಶೇಕಡಾ), ಸುಣ್ಣದ ಕಲ್ಲು (13 ಶೇಕಡಾ), ಕಲ್ಲಿದ್ದಲು (12 ಶೇಕಡಾ), ನೈಸರ್ಗಿಕ ಅನಿಲ (ಯು) (11 ಶೇಕಡಾ), ಪೆಟ್ರೋಲಿಯಂ (ಕಚ್ಚಾ) (8 ಶೇಕಡಾ), ಮ್ಯಾಂಗನೀಸ್ ಅದಿರು (6 ಶೇಕಡಾ), ಮ್ಯಾಗ್ನಸೈಟ್ (3 ಶೇಕಡಾ), ಲಿಗ್ನೈಟ್ (2.8 ಶೇಕಡಾ) ಮತ್ತು ಸತು (2.8 ಶೇಕಡಾ) ಸೇರಿವೆ. ಉತ್ಪಾದನೆ ಕಡಿಮೆಯಾದ ಪ್ರಮುಖ ಖನಿಜಗಳಲ್ಲಿ ಕಬ್ಬಿಣದ ಅದಿರು (-0.7%) ಮತ್ತು ಸೀಸ (-14%) ಸೇರಿವೆ.

ಫೆಬ್ರವರಿ 2024 ರಲ್ಲಿ ಇತರ ಖನಿಜಗಳ ಉತ್ಪಾದನಾ ಮಟ್ಟ 966 ಲಕ್ಷ ಟನ್ ಆಗಿತ್ತು. ಈ ಅವಧಿಯಲ್ಲಿ ಲಿಗ್ನೈಟ್ 42 ಲಕ್ಷ ಟನ್, ನೈಸರ್ಗಿಕ ಅನಿಲ (ಬಳಕೆ) 2,886 ಮಿಲಿಯನ್ ಕ್ಯೂ.ಮೀ., ಪೆಟ್ರೋಲಿಯಂ (ಕಚ್ಚಾ) 23 ಲಕ್ಷ ಟನ್, ಕಬ್ಬಿಣದ ಅದಿರು 244 ಲಕ್ಷ ಟನ್, ಸೀಸ 27,000 ಟನ್, ಮ್ಯಾಂಗನೀಸ್ ಅದಿರು 2,95,000 ಟನ್, ಸತು 1,49,000 ಟನ್, ಸುಣ್ಣದ ಕಲ್ಲು 387 ಲಕ್ಷ ಟನ್, ಫಾಸ್ಫರೈಟ್ 2,18,000 ಟನ್ ಮತ್ತು ಮ್ಯಾಗ್ನೆಸೈಟ್ 10,000 ಟನ್ ಉತ್ಪಾದನೆಯಾಗಿವೆ.

ಇದನ್ನೂ ಓದಿ : ಇದು BMW ಕಂಪೆನಿಯ ಹೊಚ್ಚ ಹೊಸ ಕಾರು: ಶರವೇಗದ ಐಷಾರಾಮಿ ವಾಹನದ ಬೆಲೆ ಕೇಳಿದ್ರೆ! - BMW Launches New Car

ABOUT THE AUTHOR

...view details