ಕರ್ನಾಟಕ

karnataka

ETV Bharat / business

ಚಿನ್ನ, ಬೆಳ್ಳಿಯಲ್ಲಿ ಇನ್ವೆಸ್ಟ್​ ಮಾಡುವುದನ್ನು ಭಾರತೀಯ ಗೃಹಿಣಿಯರಿಂದ ಕಲಿಯಬೇಕು: ಹೂಡಿಕೆದಾರ ರೋಜರ್ಸ್​ ಶ್ಲಾಘನೆ - INVEST IN GOLD AND SILVER

ಭಾರತೀಯ ಮಹಿಳೆಯರ ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡುವ ಪ್ರವೃತ್ತಿಯನ್ನು ಜಾಗತಿಕ ಹೂಡಿಕೆದಾರ ಜಿಮ್ ರೋಜರ್ಸ್ ಶ್ಲಾಘಿಸಿದ್ದಾರೆ.

ಜಾಗತಿಕ ಹೂಡಿಕೆದಾರ ಜಿಮ್ ರೋಜರ್ಸ್
ಜಾಗತಿಕ ಹೂಡಿಕೆದಾರ ಜಿಮ್ ರೋಜರ್ಸ್ (IANS)

By ETV Bharat Karnataka Team

Published : Nov 29, 2024, 1:13 PM IST

ನವದೆಹಲಿ: ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡುವುದನ್ನು ಭಾರತೀಯ ಗೃಹಿಣಿಯರನ್ನು ನೋಡಿ ಕಲಿಯಬೇಕೆಂದು ಪ್ರಖ್ಯಾತ ಜಾಗತಿಕ ಹೂಡಿಕೆದಾರ ಜಿಮ್ ರೋಜರ್ಸ್ ಹೇಳಿದ್ದಾರೆ. ಅಮೂಲ್ಯ ಲೋಹಗಳಲ್ಲಿ ಮಾಡಿರುವ ಹೂಡಿಕೆಯನ್ನು ಹೇಗೆ ಮುಂದುವರೆಸಿಕೊಂಡು ಹೋಗಬೇಕೆಂಬುದನ್ನು ನಿಮಗೆ ಭಾರತೀಯ ಮಹಿಳೆಯರಿಗಿಂತ ಉತ್ತಮವಾಗಿ ಮತ್ತಾರೂ ಕಲಿಸಿ ಕೊಡಲು ಸಾಧ್ಯವಿಲ್ಲ ಎಂದು ಅವರು ಶ್ಲಾಘಿಸಿದ್ದಾರೆ. ಭೌಗೋಳಿಕ-ರಾಜಕೀಯ ಉದ್ವಿಗ್ನತೆಯ ನಡುವೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರುತ್ತಲೇ ಇರುವ ಮಧ್ಯೆ ರೋಜರ್ಸ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಗುರುವಾರ ಐಎಎನ್ಎಸ್ ಜೊತೆಗಿನ ಸಂವಾದದಲ್ಲಿ, ತಾವು ಚಿನ್ನ ಮತ್ತು ಬೆಳ್ಳಿ ಎರಡರಲ್ಲೂ ಹೂಡಿಕೆಗಳನ್ನು ಹೊಂದಿರುವುದಾಗಿ ಪರಿಣತಿ ಮತ್ತು ಕಾರ್ಯತಂತ್ರದ ಒಳನೋಟಗಳಿಗೆ ಹೆಸರುವಾಸಿಯಾದ ರೋಜರ್ಸ್ ಹೇಳಿದರು. ಪ್ರತಿಯೊಬ್ಬರೂ ಚಿನ್ನ ಮತ್ತು ಬೆಳ್ಳಿಯ ಸಂಗ್ರಹವನ್ನು ಹೊಂದಿರಬೇಕು. ಇದು ಭಾರತದಲ್ಲಿ ನಾನು ಕಲಿತ ಪಾಠವಾಗಿದೆ. ಇಲ್ಲಿನ ಮಹಿಳೆಯರು ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡುವ ಬಗ್ಗೆ ಬಹಳಷ್ಟನ್ನು ನನಗೆ ಕಲಿಸಿದ್ದಾರೆ ಎಂದು ಅವರು ಹೇಳಿದರು.

"ನಾನು ಇವತ್ತು ಯಾವುದರ ಮೇಲಾದರೂ ಹೂಡಿಕೆ ಮಾಡಲು ಬಯಸಿದರೆ ಅದು ಬೆಳ್ಳಿ. ಬೆಳ್ಳಿ ಸಾಕಷ್ಟು ಅಗ್ಗವಾಗಿದ್ದು, ಸದ್ಯ ಬೆಳ್ಳಿಯನ್ನು ಖರೀದಿಸುವುದು ಸಕಾಲಿಕವಾಗಿದೆ" ಎಂದು ರೋಜರ್ಸ್ ತಿಳಿಸಿದರು.

ವರ್ಲ್ಡ್ ಗೋಲ್ಡ್ ಕೌನ್ಸಿಲ್ (ಡಬ್ಲ್ಯುಜಿಸಿ) ನ ಇತ್ತೀಚಿನ ವರದಿಯ ಪ್ರಕಾರ, ಆಭರಣ ಬಳಕೆ ಮತ್ತು ಚಿನ್ನದ ಮೇಲಿನ ಹೂಡಿಕೆಯ ಹೆಚ್ಚಳದಿಂದಾಗಿ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದಲ್ಲಿ ಬೇಡಿಕೆ (ವರ್ಷದಿಂದ ವರ್ಷಕ್ಕೆ) ಶೇಕಡಾ 18 ರಷ್ಟು ಹೆಚ್ಚಾಗಿ 248.3 ಟನ್ ಗಳಿಗೆ ತಲುಪಿದೆ.

ಮೌಲ್ಯದ ದೃಷ್ಟಿಯಿಂದ, ತ್ರೈಮಾಸಿಕದಲ್ಲಿ ಭಾರತದ ಚಿನ್ನದ ಬೇಡಿಕೆ ಶೇಕಡಾ 52 ರಷ್ಟು (ವಾರ್ಷಿಕವಾಗಿ) ಏರಿಕೆಯಾಗಿ 1.65 ಲಕ್ಷ ಕೋಟಿ ರೂ.ಗೆ ತಲುಪಿದೆ. ಮದುವೆಗಳು ಮತ್ತು ಹಬ್ಬದ ಋತುವಿನ ಕಾರಣದಿಂದಾಗಿ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಚಿನ್ನದ ಆಭರಣಗಳ ಬೇಡಿಕೆ ಶೇಕಡಾ 10 ರಷ್ಟು ಏರಿಕೆಯಾಗಿ 171.6 ಟನ್ ಗಳಿಗೆ ತಲುಪಿದೆ.

ಮ್ಯೂಚುವಲ್ ಫಂಡ್ ಗಳ (ಮ್ಯೂಚುವಲ್ ಫಂಡ್) ಬಗ್ಗೆ ಮಾತನಾಡಿದ ರೋಜರ್ಸ್, ಪ್ರತಿಯೊಬ್ಬರೂ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಬೇಕು, ಏಕೆಂದರೆ ಇದು ಸಮೃದ್ಧಿಯನ್ನು ಹೊಂದುವ ಉತ್ತಮ ಮಾರ್ಗವಾಗಿದೆ ಎಂದು ಹೇಳಿದರು.

"ಆದರೆ ಹೂಡಿಕೆಯ ಬಗ್ಗೆ ತಿಳಿಯದೆ ಇದ್ದರೆ ಹೂಡಿಕೆ ಮಾಡಬೇಡಿ. ಇತರರ ಮಾತನ್ನು ಕೇಳಬೇಡಿ. ನಿಮಗೆ ಬಹಳಷ್ಟು ತಿಳಿದಿರುವ ವಿಷಯಗಳಲ್ಲಿ ಮಾತ್ರ ಹೂಡಿಕೆ ಮಾಡಿ. ಆದರೆ ನೀವು ಯಾವುದರ ಬಗ್ಗೆಯಾದರೂ ಸಾಕಷ್ಟು ತಿಳಿದಿದ್ದರೆ, ನೀವು ಅಂಥಲ್ಲಿ ಹೂಡಿಕೆ ಮಾಡಬೇಕು ಮತ್ತು ಯಶಸ್ಸನ್ನು ಪಡೆಯಬೇಕು" ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಕಾಪಿರೈಟ್ ಉಲ್ಲಂಘನೆ: ನಟಿ ನಯನತಾರಾ ವಿರುದ್ಧ ಮೊಕದ್ದಮೆ ದಾಖಲಿಸಿದ ಸೂಪರ್ ಸ್ಟಾರ್ ಧನುಷ್

ABOUT THE AUTHOR

...view details