ನವದೆಹಲಿ: ಹವಾಮಾನ ಬದಲಾವಣೆಯ ನಕಾರಾತ್ಮಕ ಪರಿಣಾಮ ಎದುರಿಸುವ ನಿಟ್ಟಿನಲ್ಲಿ ನವೀಕರಿಸಬಹುದಾದ ಶಕ್ತಿ ಅಳವಡಿಕೆಗೆ ಭಾರತ ಮುಂದಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯ ನಡೆಸಿದೆ. ಅದರಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ ಒಂದಾಗಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 1.8 ಗಿಗಾವ್ಯಾಟ್ ಸೋಲಾರ್ ಪ್ಯಾನಲ್ ಅಳವಡಿಕೆ ಮಾಡಿದ್ದು, ಕಳೆದ ಅಂಕಿ- ಅಂಶಗಳಿಗೆ ಹೋಲಿಕೆ ಮಾಡಿದಾಗ ದುಪ್ಪಟ್ಟು ಏರಿಕೆ ಕಂಡಿದೆ.
ಈ ಕುರಿತು ಅಮೆರಿಕ ಮೂಲದ ಸಂಶೋಧಕ ಘಟಕ ಮೆರ್ಕೊಮ್ ಕಾಪಿಟಲ್ ವರದಿ ಮಾಡಿದೆ. ಈ ಸಂಸ್ಥೆ ಪ್ರಕಾರ, 2023ರ ನಾಲ್ಕನೇ ತ್ರೈಮಾಸಿಕದಲ್ಲಿ 909.3 ಮೆಗಾವ್ಯಾಟ್ನಿಂದ ಸೋಲಾರ್ ಪ್ಯಾನಲ್ ಅಳವಡಿಕೆಯಲ್ಲಿ ದುಪ್ಪಟ್ಟು ಏರಿಕೆ ಕಂಡಿದೆ.
ತೆರೆದ ಪ್ರದೇಶದ ಸೋಲಾರ್ ಅಳವಡಿಕೆ ಎಂಬುದು ಗ್ರಾಹಕರಿಗೆ ಹಸಿರು ಶಕ್ತಿ ಪೂರೈಕೆಗಾಗಿ ತೆರೆದ ಪ್ರದೇಶಲ್ಲಿ ಸೋಲಾರ್ ಪವರ್ ಘಟಕ ಸ್ಥಾಪಿಸಿ, ವಿದ್ಯುತ್ ಉತ್ಪಾದಿಸುವುದು. ತೆರೆದ ಪ್ರವೇಶದ ಸೋಲಾರ್ ಯೋಜನೆ ಉದ್ಯಮಕ್ಕೆ ಅವಕಾಶ ನೀಡುತ್ತದೆ. ಜೊತೆಗೆ ಗ್ರಾಹಕರು ತಮ್ಮ ಪ್ರದೇಶದಲ್ಲಿ ಸೌರ ಯೋಜನೆ ಮೂಲಕ ನವೀಕರಿಸಬಹುದಾದ ಶಕ್ತಿಯನ್ನು ಪಡೆಯಬಹುದಾಗಿದೆ.
ಮಾರ್ಚ್ವರೆಗೆ ಈ ಸೋಲಾರ್ ಯೋಜನೆಯ ಸಾಮರ್ಥ್ಯವು 14.3 ಗಿಗಾ ವ್ಯಾಟ್ ಇದೆ ಎಂದು ವರದಿ ತಿಳಿಸಿದೆ. 'ಮರ್ಕಾಮ್ ಇಂಡಿಯಾ ಸೋಲಾರ್ ಓಪನ್ ಆಕ್ಸೆಸ್ ಮಾರ್ಕೆಟ್' ಎಂಬ ಶೀರ್ಷಿಕೆ ಅಡಿ ಈ ವರದಿ ಪ್ರಕಟಿಸಲಾಗಿದೆ.