ನವದೆಹಲಿ: ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ಶೇಕಡಾ 7.8 ರಷ್ಟು ದೃಢವಾದ ಜಿಡಿಪಿ ಬೆಳವಣಿಗೆಯನ್ನು ದಾಖಲಿಸಿದೆ. 2023-24 ರ ಪೂರ್ಣ ಹಣಕಾಸು ವರ್ಷದಲ್ಲಿ, ಬೆಳವಣಿಗೆಯ ದರ ಶೇಕಡಾ 8.2 ಕ್ಕೆ ಏರಿಕೆಯಾಗಿದೆ. ಇದು 2022-23 ರ ಹಣಕಾಸು ವರ್ಷದಲ್ಲಿ ಶೇಕಡಾ 7 ರಷ್ಟಿತ್ತು.
ಅಂಕಿ - ಅಂಶ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಉತ್ಪಾದನೆ ಮತ್ತು ಗಣಿಗಾರಿಕೆ ಕ್ಷೇತ್ರಗಳ ಉತ್ತಮ ಕಾರ್ಯಕ್ಷಮತೆಯಿಂದ ಜಿಡಿಪಿ ಹೆಚ್ಚಿನ ದರದಲ್ಲಿ ಬೆಳವಣಿಗೆಯಾಗಿದೆ. "2023-24ರಲ್ಲಿ ಉತ್ಪಾದನಾ ವಲಯದಲ್ಲಿ ಶೇಕಡಾ 9.9 ರಷ್ಟು ಗಮನಾರ್ಹ ಬೆಳವಣಿಗೆಯಿಂದಾಗಿ ಆರ್ಥಿಕತೆ ಬೆಳೆದಿದೆ. 2022-23ರಲ್ಲಿ ಇದು ಮೈನಸ್ ಶೇ 2.2 ರಷ್ಟಿತ್ತು. ಹಾಗೆಯೇ ಗಣಿಗಾರಿಕೆ ಕ್ಷೇತ್ರದಲ್ಲಿ 2022-23ರಲ್ಲಿ ಶೇ 1.9ರಷ್ಟಿದ್ದ ಬೆಳವಣಿಗೆ 2023-24ರಲ್ಲಿ ಶೇ 7.1ಕ್ಕೆ ಏರಿಕೆಯಾಗಿದೆ.
ದೇಶದ ಎಂಜಿನಿಯರಿಂಗ್ ಸಂಸ್ಥೆಗಳು ಮತ್ತು ಕಾಲೇಜುಗಳಿಂದ ಉತ್ತೀರ್ಣರಾದ ಯುವ ಪದವೀಧರರಿಗೆ ಗುಣಮಟ್ಟದ ಉದ್ಯೋಗಗಳನ್ನು ಒದಗಿಸುವಲ್ಲಿ ಉತ್ಪಾದನಾ ವಲಯವು ಪ್ರಮುಖ ಪಾತ್ರ ವಹಿಸುತ್ತದೆ. ಚೀನಾಕ್ಕೆ ಪರ್ಯಾಯವಾದ ಸರಕು ಪೂರೈಕೆ ಸರಪಳಿಯಾಗುವ ದೃಷ್ಟಿಯಿಂದ ಸ್ಮಾರ್ಟ್ ಫೋನ್ಗಳು, ಎಲೆಕ್ಟ್ರಾನಿಕ್ ಸರಕುಗಳು, ಡ್ರೋನ್ಗಳು ಮತ್ತು ಸೆಮಿಕಂಡಕ್ಟರ್ಗಳ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರ ಹಲವಾರು ಪ್ರೋತ್ಸಾಹಕ ಕ್ರಮಗಳನ್ನು ಘೋಷಿಸಿದೆ. ಇದು ರಫ್ತುಗಳಲ್ಲಿನ ಹೆಚ್ಚಳಕ್ಕೆ ಕಾರಣವಾಗಿದೆ.