ನವದೆಹಲಿ:ಭಾರತದ ಒಟ್ಟಾರೆ ಆಹಾರ ಸೇವಾ ಮಾರುಕಟ್ಟೆಯು 2028ರ ವೇಳೆಗೆ 100 ಶತಕೋಟಿ ಡಾಲರ್ ದಾಟುವ ಸಾಧ್ಯತೆಯಿದೆ. ಇದು ಶೇ 8 ರಿಂದ 12ರ ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ (ಸಿಎಜಿಆರ್) ಬೆಳೆಯುತ್ತಿದೆ ಎಂದು ವರದಿಯೊಂದು ಗುರುವಾರ ತಿಳಿಸಿದೆ. ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ರೆಡ್ಸೀರ್ವರದಿಯ ಪ್ರಕಾರ, ಭಾರತೀಯ ಸಂಘಟಿತ ಆಹಾರ ಸೇವೆಗಳ ಮಾರುಕಟ್ಟೆ 2028 ರ ವೇಳೆಗೆ 30 ಬಿಲಿಯನ್ ಡಾಲರ್ನಿಂದ 60 ಬಿಲಿಯನ್ ಡಾಲರ್ಗೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.
ಗಮನಾರ್ಹವಾಗಿ, ಸಂಘಟಿತ ವಲಯದ ಬೆಳವಣಿಗೆಯು ಅಸಂಘಟಿತ ವಿಭಾಗದ ಬೆಳವಣಿಗೆಗಿಂತ 3 ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ. ಹೊರಗಿನ ತಿನಿಸು ತಿನ್ನುವ ನಡವಳಿಕೆಯು ಈಗ ಐಷಾರಾಮಿ ಆಗಿ ಉಳಿದಿಲ್ಲ. ಮೆಟ್ರೋ ಮತ್ತು ಶ್ರೇಣಿ 1 ನಗರಗಳಲ್ಲಿನ ಗ್ರಾಹಕರಿಗೆ ಹೊರಗೆ ತಿನ್ನುವುದು ಒಂದು ಅಭ್ಯಾಸವಾಗಿ ಬೆಳೆದಿದೆ. 2018 ಕ್ಕೆ ಹೋಲಿಸಿದರೆ ವಿದ್ಯಾರ್ಥಿಗಳು, ಯುವಕರು ಮತ್ತು ಮಧ್ಯವಯಸ್ಕರಲ್ಲಿ ಹೊರಗಿನ ಆಹಾರ ಸೇವನೆಯ ಆವರ್ತನವು ಕ್ರಮವಾಗಿ ಶೇಕಡಾ 30 ಮತ್ತು 20 ರಷ್ಟು ಹೆಚ್ಚಾಗಿದೆ.
"ಭಾರತೀಯ ಆಹಾರ ಮಾರುಕಟ್ಟೆಯ ವೈವಿಧ್ಯತೆಯಿಂದಾಗಿ ಇಲ್ಲಿ ಕಡಿಮೆ ಸಂಖ್ಯೆಯ ಮೆಗಾ ಬ್ರಾಂಡ್ಗಳಿಗಿಂತ ಹೆಚ್ಚಿನ ಸಂಖ್ಯೆಯ ಮಧ್ಯಮ ಗಾತ್ರದ ಬ್ರಾಂಡ್ಗಳು ಅಗತ್ಯವಾಗಿವೆ" ಎಂದು ರೆಡ್ಸೀರ್ನ ಪಾಲುದಾರ ರೋಹನ್ ಅಗರ್ವಾಲ್ ಹೇಳಿದರು.