ಕರ್ನಾಟಕ

karnataka

ETV Bharat / business

ಹೊಸ ಪ್ಲಾನ್ ಪರಿಚಯಿಸಿದ ಸ್ಪಾಟಿಫೈ: 4 ತಿಂಗಳಿಗೆ ಕೇವಲ 59 ರೂಪಾಯಿ

ಸ್ಪಾಟಿಫೈ ಹೊಸ ಚಂದಾದಾರಿಕೆ ಯೋಜನೆಯನ್ನು ಪರಿಚಯಿಸಿದೆ.

By ETV Bharat Karnataka Team

Published : 5 hours ago

ಸ್ಪಾಟಿಫೈ
ಸ್ಪಾಟಿಫೈ (IANS)

ನವದೆಹಲಿ: ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಸ್ಪಾಟಿಫೈ ಹೊಸ ಆಕರ್ಷಕ ಚಂದಾದಾರಿಕೆ ಯೋಜನೆಯೊಂದನ್ನು ಪ್ರಕಟಿಸಿದೆ. ಈಗ ಬಳಕೆದಾರರು ಕೇವಲ 59 ರೂಪಾಯಿ ಪಾವತಿಸುವ ಮೂಲಕ ನಾಲ್ಕು ತಿಂಗಳವರೆಗೆ ಸ್ಪಾಟಿಫೈ ಪ್ರೀಮಿಯಂ ಬಳಸಬಹುದಾಗಿರುವುದು ಹೊಸ ಯೋಜನೆಯ ವೈಶಿಷ್ಷ್ಯ.

ಸಾಮಾನ್ಯವಾಗಿ ವೈಯಕ್ತಿಕ ಪ್ರೀಮಿಯಂ ಪ್ಲಾನ್​ಗೆ ತಿಂಗಳಿಗೆ 119 ರೂ. ಪಾವತಿಸಬೇಕಾಗುತ್ತದೆ. ಈ ಯೋಜನೆಯಡಿ ಯಾವುದೇ ಜಾಹೀರಾತುಗಳಿಲ್ಲದೆ ಸ್ಪಾಟಿಫೈ ಆನಂದಿಸಬಹುದು. ಸದ್ಯ ಇದೆಲ್ಲವೂ ಕೇವಲ 59 ರೂಪಾಯಿಗೆ ಸೀಮಿತ ಅವಧಿಗಾಗಿ ಮಾತ್ರ ಲಭ್ಯವಿದೆ.

59 ರೂ.ಗೆ 4 ತಿಂಗಳ ಸ್ಪಾಟಿಫೈ ಪ್ರೀಮಿಯಂ: ಸ್ಪಾಟಿಫೈನ ಸೀಮಿತ ಅವಧಿಯ ವಿಶಿಷ್ಟ ಕೊಡುಗೆಯ ಅವಧಿಯಲ್ಲಿ ನೀವು ಕೇವಲ 59 ರೂಪಾಯಿ ಪಾವತಿಸುವ ಮೂಲಕ ನಾಲ್ಕು ತಿಂಗಳವರೆಗೆ ವೈಯಕ್ತಿಕ ಪ್ರೀಮಿಯಂ ಯೋಜನೆಯ ಚಂದಾದಾರಿಕೆ ಪಡೆಯಬಹುದು. ಈ ಅವಧಿಯ ನಂತರ, ಬಳಕೆದಾರರು ತಿಂಗಳಿಗೆ 119 ರೂ.ಗಳ ಮೊತ್ತವನ್ನು ಪಾವತಿಸಬೇಕಾಗುತ್ತದೆ. ವಿಶೇಷವೆಂದರೆ, ಬಳಕೆದಾರರು ಯಾವಾಗ ಬೇಕಾದರೂ ಪ್ರೀಮಿಯಂ ಚಂದಾದಾರಿಕೆಯನ್ನು ರದ್ದುಗೊಳಿಸಬಹುದು. ಈ ಆಫರ್ ಅಕ್ಟೋಬರ್ 13, 2024 ರವರೆಗೆ ಲಭ್ಯವಿದೆ.

ಸ್ಪಾಟಿಫೈನ ಸೀಮಿತ ಅವಧಿಯ ಈ ಆಫರ್​ ಕೆಲ ಷರತ್ತುಗಳನ್ನು ಹೊಂದಿದೆ. ಈ ಯೋಜನೆಯು ಹೊಸ ಮತ್ತು ಹಳೆಯ ಬಳಕೆದಾರರಿಗೆ ಲಭ್ಯವಿದ್ದರೂ, ನೀವು ಈ ಹಿಂದೆ ಪ್ರೀಮಿಯಂ ಯೋಜನೆಗೆ ಚಂದಾದಾರರಾಗಿಲ್ಲದಿದ್ದರೆ ಮಾತ್ರ ನೀವು ಈ ಆಫರ್​ನ ಲಾಭವನ್ನು ಪಡೆಯಬಹುದು.

ಸ್ಪಾಟಿಫೈ ಪ್ರೀಮಿಯಂನ ಪ್ರಯೋಜನಗಳು: ಇಂಟರ್ ನೆಟ್​ನಲ್ಲಿನ ಇತರ ಚಂದಾದಾರಿಕೆ ಸೇವೆಗಳಂತೆ, ಸ್ಪಾಟಿಫೈ ಪ್ರೀಮಿಯಂ ತನ್ನ ಬಳಕೆದಾರರಿಗೆ ಜಾಹೀರಾತು-ಮುಕ್ತ ಅನುಭವವನ್ನು ನೀಡುತ್ತದೆ. ಅಲ್ಲದೆ ಕಂಪನಿಯು ಪ್ರೀಮಿಯಂ ಚಂದಾದಾರರಿಗೆ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಪಾವತಿಸಿದ ಚಂದಾದಾರಿಕೆಯಲ್ಲಿ ಈ ಕೆಳಗಿನ ಸೌಲಭ್ಯಗಳು ನಿಮಗೆ ಸಿಗುತ್ತವೆ:

  • ಹಾಡುಗಳನ್ನು ಡೌನ್​ಲೋಡ್​ ಮಾಡಿ ಆಫ್ ಲೈನ್​​ನಲ್ಲಿ ಕೇಳಬಹುದು
  • ಯಾವುದೇ ಕ್ರಮದಲ್ಲಿ ಹಾಡುಗಳನ್ನು ಪ್ಲೇ ಮಾಡಬಹುದು
  • ಉತ್ತಮ-ಗುಣಮಟ್ಟದ ಆಡಿಯೊವನ್ನು ಸ್ಟ್ರೀಮ್ ಮಾಡಬಹುದು
  • ನೈಜ ಸಮಯದಲ್ಲಿ ಸ್ನೇಹಿತರೊಂದಿಗೆ ಸಂಗೀತ ಆಲಿಸಬಹುದು (ಆಲಿಸುವ ಪಾರ್ಟಿಯಂತೆ)
  • ಆಲಿಸುವ ಸರದಿಯನ್ನು (listening queue) ಆಯೋಜಿಸಿ
  • ಆಲಿಸುವ ಒಳನೋಟಗಳಿಗೆ ಪ್ರವೇಶ

ಚಂದಾದಾರರಾಗುವುದು ಹೇಗೆ?:ಸ್ಪಾಟಿಫೈ ಪ್ರೀಮಿಯಂಗೆ ಚಂದಾದಾರರಾಗಲು, ಬಳಕೆದಾರರು ತಮ್ಮ ಬ್ರೌಸರ್ ಮೂಲಕ ಸ್ಪಾಟಿಫೈ ವೆಬ್ ಪ್ಲೇಯರ್ ಅನ್ನು ತೆರೆಯಬೇಕು ಮತ್ತು ಪ್ರೀಮಿಯಂ ವಿಭಾಗಕ್ಕೆ ಹೋಗಬೇಕು. 59 ರೂಪಾಯಿಗೆ ನಾಲ್ಕು ತಿಂಗಳವರೆಗೆ ಸ್ಪಾಟಿಫೈ ಪ್ರೀಮಿಯಂ ಕೊಡುಗೆ ಇಲ್ಲಿ ಕಾಣಿಸುತ್ತದೆ. ಪಾವತಿ ವ್ಯವಸ್ಥೆಯ ಸೆಟಪ್ ಅನ್ನು ಅನುಸರಿಸಿ, ಚಂದಾದಾರಿಕೆ ಯೋಜನೆ ಸಕ್ರಿಯವಾಗುತ್ತದೆ.

ಇದನ್ನೂ ಓದಿ: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಬ್ರಹ್ಮಚಾರಿಯಾಗಿಯೇ ಉಳಿದ ರತನ್‌; ಇದು ಟಾಟಾರ ಅದ್ಭುತ ಲವ್ ಸ್ಟೋರಿ!

ABOUT THE AUTHOR

...view details