ETV Bharat / business

ಬಜೆಟ್ 2025-26: ಆದಾಯ ತೆರಿಗೆ, ಅಬಕಾರಿ ಸುಂಕ ಕಡಿತಕ್ಕೆ ಸಿಐಐ ಆಗ್ರಹ - UNION BUDGET

ಮುಂಬರುವ ಬಜೆಟ್​ನಲ್ಲಿ ಆದಾಯ ತೆರಿಗೆ ಇಳಿಸಬೇಕೆಂದು ಸಿಐಐ ಒತ್ತಾಯಿಸಿದೆ.

ಬಜೆಟ್ 2025-26: ಆದಾಯ ತೆರಿಗೆ, ಅಬಕಾರಿ ಸುಂಕ ಕಡಿತಕ್ಕೆ ಸಿಐಐ ಆಗ್ರಹ
ಬಜೆಟ್ 2025-26: ಆದಾಯ ತೆರಿಗೆ, ಅಬಕಾರಿ ಸುಂಕ ಕಡಿತಕ್ಕೆ ಸಿಐಐ ಆಗ್ರಹ (IANS)
author img

By ETV Bharat Karnataka Team

Published : Dec 29, 2024, 4:10 PM IST

ನವದೆಹಲಿ: ಜನತೆಯ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವ್ಯಕ್ತಿಗಳ ಆದಾಯ ತೆರಿಗೆಯನ್ನು ಕಡಿಮೆ ಮಾಡುವಂತೆ ಮತ್ತು ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವಂತೆ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಕೇಂದ್ರ ಸರಕಾರಕ್ಕೆ ಒತ್ತಾಯಿಸಿದೆ.

ಕೇಂದ್ರ ಬಜೆಟ್ 2025-26ಕ್ಕೆ ಮುಂಚಿತವಾಗಿ ತನ್ನ ಬೇಡಿಕೆಗಳ ಪಟ್ಟಿಯನ್ನು ಪ್ರಕಟಿಸಿರುವ ಸಿಐಐ, ಇಂಧನ ಬೆಲೆಗಳು ಹೆಚ್ಚಾದಂತೆ ಹಣದುಬ್ಬರ ಏರಿಕೆಯಾಗುವುದರಿಂದ ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವುದು ಅಗತ್ಯ ಎಂದು ಹೇಳಿದೆ. ಒಟ್ಟಾರೆ ಮನೆ ಖರ್ಚಿನ ಮೇಲೆ ಹಣದುಬ್ಬರವು ಗಮನಾರ್ಹ ಪ್ರತಿಕೂಲ ಪರಿಣಾಮ ಬೀರುವುದರಿಂದ ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ಅಗತ್ಯ ಎಂದು ಅದು ಹೇಳಿದೆ.

ಚಿಲ್ಲರೆ ಪೆಟ್ರೋಲ್ ಬೆಲೆಯಲ್ಲಿ ಶೇ 21 ರಷ್ಟು ಮತ್ತು ಡೀಸೆಲ್ ಬೆಲೆಯಲ್ಲಿ ಶೇ 18 ರಷ್ಟು ಕೇಂದ್ರ ಅಬಕಾರಿ ಸುಂಕವೇ ಇದೆ. ಆದರೆ ಮೇ 2022 ರಿಂದ ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿ ಸರಿಸುಮಾರು ಶೇ 40 ರಷ್ಟು ಇಳಿಕೆಯಾದರೂ ಇದಕ್ಕೆ ಅನುಗುಣವಾಗಿ ಅವುಗಳ ಬೆಲೆಗಳನ್ನು ಇಳಿಸಲಾಗಿಲ್ಲ. ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವುದರಿಂದ ಒಟ್ಟಾರೆ ಹಣದುಬ್ಬರ ಕಡಿಮೆಯಾಗಲಿದೆ ಮತ್ತು ಖರ್ಚು ಮಾಡಬಹುದಾದ ಆದಾಯ ಹೆಚ್ಚಾಗಲಿದೆ ಎಂದು ಸಿಐಐ ಹೇಳಿಕೆಯಲ್ಲಿ ತಿಳಿಸಿದೆ.

ವ್ಯಕ್ತಿಗಳಿಗೆ ಅತ್ಯಧಿಕ ಕನಿಷ್ಠ ತೆರಿಗೆ ದರ ಶೇ 42.74 ಮತ್ತು ಸಾಮಾನ್ಯ ಕಾರ್ಪೊರೇಟ್ ತೆರಿಗೆ ದರ ಶೇ 25.17ರಷ್ಟು ಇದ್ದು, ಈ ಅಂತರ ಅತ್ಯಧಿಕವಾಗಿದೆ ಎಂದು ಅದು ಹೇಳಿದೆ. ಇದಲ್ಲದೆ, ಹಣದುಬ್ಬರವು ಕಡಿಮೆ ಮತ್ತು ಮಧ್ಯಮ ಆದಾಯ ಗಳಿಸುವವರ ಕೊಳ್ಳುವ ಶಕ್ತಿಯನ್ನು ಕಡಿಮೆ ಮಾಡಿದೆ. ವಾರ್ಷಿಕ 20 ಲಕ್ಷ ರೂ.ವರೆಗಿನ ವೈಯಕ್ತಿಕ ಆದಾಯದ ಮೇಲಿನ ಕನಿಷ್ಠ ತೆರಿಗೆ ದರಗಳನ್ನು ಕಡಿಮೆ ಮಾಡಲು ಬಜೆಟ್ ಪರಿಗಣಿಸಬಹುದು. ಇದು ಬಳಕೆಯ ಚಕ್ರ, ಹೆಚ್ಚಿನ ಬೆಳವಣಿಗೆ ಮತ್ತು ತೆರಿಗೆ ಆದಾಯ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸಿಐಐ ಅಭಿಪ್ರಾಯ ಪಟ್ಟಿದೆ.

2017 ರಲ್ಲಿ 'ರಾಷ್ಟ್ರೀಯ ಕನಿಷ್ಠ ವೇತನವನ್ನು ನಿಗದಿಪಡಿಸುವ ತಜ್ಞರ ಸಮಿತಿ' ಸೂಚಿಸಿದಂತೆ ಎಂಜಿಎನ್ಆರ್​ಇಜಿಎಸ್ ಅಡಿಯಲ್ಲಿ ದೈನಂದಿನ ಕನಿಷ್ಠ ವೇತನವನ್ನು 267 ರೂ.ಗಳಿಂದ 375 ರೂ.ಗೆ ಹೆಚ್ಚಿಸುವಂತೆ ಸಿಐಐ ಕೋರಿದೆ. ಇದಕ್ಕೆ 42,000 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚವಾಗಲಿದೆ ಎಂದು ಸಿಐಐ ಸಂಶೋಧನಾ ಅಂದಾಜುಗಳು ತೋರಿಸಿವೆ. ಪಿಎಂ-ಕಿಸಾನ್ ಯೋಜನೆಯಡಿ ವಾರ್ಷಿಕ ಪಾವತಿಯನ್ನು 6,000 ರೂ.ಗಳಿಂದ 8,000 ರೂ.ಗೆ ಹೆಚ್ಚಿಸಲು ಅದು ಕೋರಿದೆ. ಈ ಯೋಜನೆಯಡಿ 10 ಕೋಟಿ ಫಲಾನುಭವಿಗಳಿರಬಹುದೆಂದು ಊಹಿಸಿದರೆ ಇದಕ್ಕಾಗಿ 20,000 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚವಾಗಲಿದೆ.

ಇದನ್ನೂ ಓದಿ : ಕೃಷಿ ವಲಯ ಶೇ 4ರಷ್ಟು ಬೆಳವಣಿಗೆ: 2025ರಲ್ಲಿ ದಾಖಲೆಯ ಆಹಾರ ಧಾನ್ಯ ಉತ್ಪಾದನೆ ನಿರೀಕ್ಷೆ - FOODGRAIN OUTPUT

ETV Bharat Logo

Copyright © 2025 Ushodaya Enterprises Pvt. Ltd., All Rights Reserved.