How To Resolve Credit Card Disputes:ಈಗೀಗ ಬಹುತೇಕರ ಬದುಕು ಕ್ರೆಡಿಟ್ ಕಾರ್ಡ್ ಇಲ್ಲದೆಯೇ ಮುಂದೆ ಸಾಗುವುದಿಲ್ಲ. ಹಾಗಾಗಿ ಈ ಕಾರ್ಡ್ಗಳು ಇಂದು ಅನೇಕ ಜನರ ದೈನಂದಿನ ಹಣಕಾಸಿನ ಅಭ್ಯಾಸಗಳ ಭಾಗವಾಗಿವೆ. ಕೆಲವೊಮ್ಮೆ ಕ್ರೆಡಿಟ್ ಕಾರ್ಡ್ ಬಾಕಿ ಮರುಪಾವತಿ ಪ್ರಕ್ರಿಯೆಯಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ಅನಧಿಕೃತ ಶುಲ್ಕಗಳು, ತಪ್ಪಾದ ಬಿಲ್ಲಿಂಗ್ ಲೆಕ್ಕಾಚಾರಗಳು ಮತ್ತು ಭರವಸೆಯಂತೆ ಸೇವೆಗಳನ್ನು ನೀಡದಿರುವುದು, ಇಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಇದರಿಂದ ಗ್ರಾಹಕರು ತಾಳ್ಮೆ ಕಳೆದುಕೊಳ್ಳುವಂತಾಗುತ್ತದೆ. ಆದರೆ ಇಂತಹ ತಪ್ಪುಗಳನ್ನು ನೀವು ಪ್ರಶ್ನಿಸಿ ಪರಿಹಾರ ಕಂಡುಕೊಳ್ಳುವ ಅವಕಾಶ ಇದೆ.
ಕ್ರೆಡಿಟ್ ಕಾರ್ಡ್‌ಗಳ ಮೂಲಕ ಆನ್‌ಲೈನ್ ಖರ್ಚು ಏಪ್ರಿಲ್ 2024 ರ ವೇಳೆಗೆ 1 ಲಕ್ಷ ಕೋಟಿಯನ್ನು ತಲುಪಿದೆ ಎಂದು ಸಂಬಂಧಿತ ಮೂಲಗಳು ಮಾಹಿತಿ ನೀಡಿವೆ. ಇದಲ್ಲದೇ 2022 ರಿಂದ ಕ್ರೆಡಿಟ್ ಕಾರ್ಡ್ ವಿವಾದಗಳಲ್ಲಿ ಶೇಕಡಾ 20 ರಷ್ಟು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ. ಕ್ರೆಡಿಟ್ ಕಾರ್ಡ್‌ಗಳ ಬಳಕೆ ಹೆಚ್ಚುತ್ತಿರುವಾಗ ಇಂತಹ ವಿವಾದಗಳು ಅನಿವಾರ್ಯ. ಆದರೆ, ಇಂತಹ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಬಹುದು ಅಂತಾರೆ ತಜ್ಞರು.
ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ವಿವಾದಗಳು ಉದ್ಭವಿಸಿದಾಗ, ಗ್ರಾಹಕರು ಕಾರ್ಡ್ ನೀಡುವ ಕಂಪನಿಯನ್ನು ಸಂಪರ್ಕಿಸಿ ಅವರ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ಕ್ರೆಡಿಟ್ ಕಾರ್ಡ್ ಕಂಪನಿಯು ಗ್ರಾಹಕರು ನೀಡಿದ ದೂರನ್ನು ಸ್ವೀಕರಿಸಿ ಪರಿಶೀಲನೆ ಮಾಡುತ್ತದೆ ಮತ್ತು ಅಗತ್ಯವಿದ್ದರೆ ಹೆಚ್ಚುವರಿ ಮಾಹಿತಿ ಕೇಳುತ್ತದೆ. ಆದರೆ ಗ್ರಾಹಕರ ಹಕ್ಕು ನಿಜವೆಂದು ಕಂಡು ಬಂದರೆ, ಕಡಿತವಾದ ಮೊತ್ತವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಸಮಸ್ಯೆಗಳನ್ನು ಯಾವಾಗ ರೈಸ್ ಮಾಡಬಹುದು ಎಂಬುದರ ಬಗ್ಗೆ ತಿಳಿಯೋಣ.
ಕ್ರೆಡಿಟ್ ಕಾರ್ಡ್ ಸಮಸ್ಯೆಗಳ ಬಗ್ಗೆ ಯಾವಾಗ ಪ್ರಶ್ನಿಸಬೇಕು?
- ಅನಧಿಕೃತ ಶುಲ್ಕಗಳು:ಕ್ರೆಡಿಟ್ ಕಾರ್ಡ್ ಬಾಕಿಯನ್ನು ಪಾವತಿಸುವಾಗ ಯಾವುದೇ ಅನಧಿಕೃತ ಶುಲ್ಕಗಳು ಪತ್ತೆಯಾದರೆ ತಕ್ಷಣವೇ ಕ್ರೆಡಿಟ್ ಸಂಸ್ಥೆಗೆ ವರದಿ ಮಾಡಬೇಕು.
- ಬಿಲ್ಲಿಂಗ್ ದೋಷಗಳು:ನಕಲಿ ಶುಲ್ಕಗಳು ಮತ್ತು ತಪ್ಪಾದ ಮೊತ್ತಗಳು ನಿಮ್ಮ ಬಿಲ್ನಲ್ಲಿ ದಾಖಲಾಗಿದೆಯಾ ಇಲ್ಲವೇ ಎಂಬ ಬಗ್ಗೆ ನಿಯಮಿತವಾಗಿ ಪರಿಶೀಲಿಸಿ. ಅಂತಹ ವಿಷಯವಿದ್ದರೆ ಸಾಲ ಸಂಸ್ಥೆಯನ್ನು ತಕ್ಷಣವೇ ಸಂಪರ್ಕಿಸಿ ಪ್ರಶ್ನಿಸಬೇಕು
- ಸರಕು ಮತ್ತು ಸೇವೆಗಳ ವಿವಾದಗಳು: ಕ್ರೆಡಿಟ್ ಕಾರ್ಡ್ ಕಂಪನಿಯು ನಿಗದಿತ ಸೇವೆ ನೀಡುವ ಭರವಸೆ ನೀಡದಿದ್ದರೆ, ಅಥವಾ ಹೇಳಿದಂತೆ ಸೇವೆಯನ್ನು ಕೊಡದಿದ್ದರೆ, ಅವುಗಳ ಮೇಲೆ ವಿಧಿಸಲಾದ ಶುಲ್ಕಗಳನ್ನು ಪ್ರಶ್ನಿಸಬಹುದು.
- ವಂಚನೆ: ಗುರುತಿನ ಕಳ್ಳತನ ಮತ್ತು ಫಿಶಿಂಗ್ ಹಗರಣಗಳನ್ನು ಗುರುತಿಸಿ ಮತ್ತು ತಕ್ಷಣವೇ ಕಾರ್ಡ್ ನೀಡುವ ಕಂಪನಿಯನ್ನು ಸಂಪರ್ಕಿಸಿ ದೂರು ನೀಡಬೇಕು.
ಕ್ರೆಡಿಟ್ ಕಾರ್ಡ್ ದೂರು ಮತ್ತು ಕ್ಲೈಮ್ ಪ್ರಕ್ರಿಯೆ