ಹೈದರಾಬಾದ್: ಖಾಸಗಿ ವಲಯದಲ್ಲಿ ಕಾರ್ಯ ನಿರ್ವಹಿಸುವ ಪ್ರತಿ ವ್ಯಕ್ತಿ ತಮ್ಮ ಆದಾಯದಲ್ಲಿ ಕೊಂಚ ಹಣ ಉಳಿತಾಯ ಮಾಡುವ ಜೊತೆಗೆ ಉತ್ತಮ ರಿರ್ಟರ್ನ್ಸ್ ಹೊಂದಿದ ಕಡೆ ಹೂಡಿಕೆ ಮಾಡುತ್ತಾರೆ. ಈ ಮೂಲಕ ನಿವೃತ್ತಿ ಬಳಿಕ ಯಾವುದೇ ಆರ್ಥಿಕ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುತ್ತಾರೆ.
ಈ ರೀತಿಯಲ್ಲಿ ಯೋಚಿಸುತ್ತಿದ್ದರೆ ಅದಕ್ಕೆ ಪಿಎಫ್ ಅತ್ಯುತ್ತಮ ಆಯ್ಕೆ. ಇದರಲ್ಲಿ ಉತ್ತಮ ರಿಟರ್ನ್ಸ್ ಜೊತೆಗೆ ನಿವೃತ್ತಿ ಬಳಿಕ ಪಿಂಚಣಿಯ ಆತಂಕಕ್ಕೆ ಇತಿಶ್ರೀ ಹಾಡಬಹುದು. ಪಿಎಫ್ ಖಾತೆದಾರರು ಇಪಿಎಸ್ - 95 ಅಡಿ ಪಿಂಚಣಿ ಪ್ರಯೋಜನವನ್ನು ಪಡೆಯಬಹುದಾಗಿದೆ. ಆದಾಗ್ಯೂ, ಇದರಲ್ಲಿ ಕೆಲವು ಷರತ್ತುಗಳಿದ್ದು, ಇವುಗಳನ್ನು ಪೂರೈಸಿದಲ್ಲಿ ಮಾತ್ರವೇ ಪಿಂಚಣಿ ಪ್ರಯೋಜನ ಪಡೆಯಬಹುದಾಗಿದೆ.
10 ವರ್ಷ ಕೆಲಸ ಮಾಡಿದಲ್ಲಿ ಪಿಂಚಣಿ ಸೌಲಭ್ಯ:ಉದ್ಯೋಗಿ ಪಿಂಚಣಿ ಯೋಜನೆ (ಇಪಿಎಸ್) ಬಗ್ಗೆ ಅನೇಕರಿಗೆ ಗೊಂದಲಗಳಿವೆ. ಈ ಹಿನ್ನೆಲೆಯಲ್ಲಿ ಇಪಿಎಸ್ ಎಂದರೇನು? ಇದರಿಂದ ಏನು ಪ್ರಯೋಜನ ಎಂಬುದನ್ನು ಮೊದಲು ತಿಳಿಯಬೇಕು. ಈ ಇಪಿಎಸ್ ಅನ್ನು ಇಪಿಎಚ್ಒ ನಿರ್ವಹಣೆ ಮಾಡುತ್ತದೆ. ಯೋಜನೆಯ ಪ್ರಯೋಜನ ಪಡೆಯುವುದಾರೆ, ಈ ಷರತ್ತನ್ನು ಪೂರೈಸಲೇಬೇಕಾಗುತ್ತದೆ. ಅದೆಂದರೆ 10 ವರ್ಷದ ಸೇವಾವಧಿ. 10 ವರ್ಷ ಕಾರ್ಯ ನಿರ್ವಹಿಸಿದಲ್ಲಿ ಮಾತ್ರ ಈ ಪಿಂಚಣಿ ಸೌಲಭ್ಯ ಅನ್ವಯವಾಗಲಿದೆ.
1995ರಲ್ಲಿ ಆರಂಭವಾದ ಯೋಜನೆ: ಉದ್ಯೋಗಿ ಪಿಂಚಣಿ ಯೋಜನೆಯನ್ನು 19 ನವೆಂಬರ್ 1995ರಲ್ಲಿ ಪ್ರಾರಂಭಿಸಲಾಯಿತು. ಸಂಘಟನೆ ವಲಯದಲ್ಲ ಉದ್ಯೋಗಿಯ ನಿವೃತ್ತಿ ಅವಶ್ಯಕತೆ ಪೂರೈಸುವುದು ಈ ಯೋಜನೆಯ ಹಿಂದಿನ ಉದ್ದೇಶವಾಗಿದೆ. ಅರ್ಹ ಉದ್ಯೋಗಿ ತನ್ನ 58ನೇ ವರ್ಷದ ಬಳಿಕ ಈ ಯೋಜನೆಯ ಅನ್ವಯ ಗ್ಯಾರಂಟಿ ಪಿಂಚಣಿ ಪ್ರಯೋಜನ ಪಡೆಯುತ್ತಾರೆ. ನಿಯಮದ ಅನುಸಾರ, ವ್ಯಕ್ತಿಯೊಬ್ಬ 9 ವರ್ಷ 6 ತಿಂಗಳು ಕಾರ್ಯ ನಿರ್ವಹಿಸಿದ್ದರೂ ಈ ಯೋಜನೆಗೆ ಅರ್ಹರಾಗಿದ್ದಾರೆ.
ಉದ್ಯೋಗ 9 ವರ್ಷ ಆರು ತಿಂಗಳಿಗಿಂಗ ಕಡಿಮೆ ಅವಧಿಗೆ ಕಾರ್ಯ ನಿರ್ವಹಿಸಿದಲ್ಲಿ ಇದನ್ನು 9 ವರ್ಷ ಎಂದೇ ಪರಿಗಣಿಸಲಾಗುವುದು. ಇಂತಹ ಸಂದರ್ಭದಲ್ಲಿ ಇವರನ್ನು ಪಿಂಚಣಿಗೆ ಅರ್ಹರು ಎಂದು ಪರಿಗಣಿಸುವುದಿಲ್ಲ. ಆಗ ಉದ್ಯೋಗಿಯು ತಮ್ಮ ಠೇವಣಿ ಖಾತೆಯಿಂದ ನಿವೃತ್ತಿಗೆ ಮೊದಲೇ ಹಣವನ್ನು ಹಿಂಪಡೆಯಬಹುದು.