ನವದೆಹಲಿ: ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ ಮೋಟೊಕಾರ್ಪ್ ಜುಲೈ 1 ರಿಂದ ಜಾರಿಗೆ ಬರುವಂತೆ ಆಯ್ದ ಮೋಟಾರ್ ಸೈಕಲ್ ಮತ್ತು ಸ್ಕೂಟರ್ಗಳ ಎಕ್ಸ್ ಶೋರೂಂ ಬೆಲೆಯನ್ನು 1,500 ರೂ.ವರೆಗೆ ಹೆಚ್ಚಿಸುವುದಾಗಿ ಸೋಮವಾರ ತಿಳಿಸಿದೆ. "1,500 ರೂ.ಗಳವರೆಗೆ ಬೆಲೆಗಳು ಹೆಚ್ಚಾಗಲಿವೆ ಮತ್ತು ಹೆಚ್ಚಳದ ನಿಖರವಾದ ಪ್ರಮಾಣವು ನಿರ್ದಿಷ್ಟ ಮಾದರಿ ಮತ್ತು ಮಾರುಕಟ್ಟೆಗಳಿಗೆ ಅನುಗುಣವಾಗಿ" ಎಂದು ಕಂಪನಿಯು ಎಕ್ಸ್ ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ. ವಾಹನಗಳ ಉತ್ಪಾದನಾ ವೆಚ್ಚದಲ್ಲಿನ ಹೆಚ್ಚಳವನ್ನು ಭಾಗಶಃ ಸರಿದೂಗಿಸಲು ಬೆಲೆ ಹೆಚ್ಚಿಸಲಾಗಿದೆ ಎಂದು ಕಂಪನಿ ಹೇಳಿದೆ.
ಮೇ ತಿಂಗಳಲ್ಲಿ, ಹೀರೋ ಮೋಟೊಕಾರ್ಪ್ 4,98,123 ಸಂಖ್ಯೆಯಷ್ಟು ಮೋಟಾರ್ ಸೈಕಲ್ ಮತ್ತು ಸ್ಕೂಟರ್ಗಳನ್ನು ಮಾರಾಟ ಮಾಡಿದೆ. ಇದು 2023 ರ ಮೇ ತಿಂಗಳಲ್ಲಿ ಮಾರಾಟವಾದ 5,19,474 ಸಂಖ್ಯೆಗಿಂತ ಶೇಕಡಾ 4.1 ರಷ್ಟು ಕಡಿಮೆಯಾಗಿದೆ.
ಮೋಟಾರ್ ಸೈಕಲ್ ವಿಭಾಗದಲ್ಲಿ, ಕಂಪನಿಯು ಮೇ 2024 ರಲ್ಲಿ 4.71 ಲಕ್ಷ ಯುನಿಟ್ಗಳನ್ನು ಮಾರಾಟ ಮಾಡಿದೆ. ಇದು 2023 ರ ಮೇ ತಿಂಗಳಲ್ಲಿ ಮಾರಾಟವಾದ 4.89 ಲಕ್ಷ ಯುನಿಟ್ಗಳಿಗಿಂತ ಶೇಕಡಾ 3.7 ರಷ್ಟು ಕಡಿಮೆಯಾಗಿದೆ. ಹಾಗೆಯೇ ಸ್ಕೂಟರ್ಗಳ ಮಾರಾಟವು ಸುಮಾರು ಶೇಕಡಾ 11 ರಷ್ಟು ಕುಸಿತ ಕಂಡಿದೆ. ಹಿಂದಿನ ವರ್ಷ ಮಾರಾಟವಾದ 30,138 ಯುನಿಟ್ಗಳಿಗೆ ಹೋಲಿಸಿದರೆ 2024 ರ ಮೇ ತಿಂಗಳಲ್ಲಿ 26,937 ಯುನಿಟ್ಗಳು ಮಾರಾಟವಾಗಿವೆ.