ನವದೆಹಲಿ: ಎಲೋಮ್ ಮಸ್ಕ್ ಒಡೆತನದ ಎಲೆಕ್ಟ್ರಿಕ್ ಕಾರ್ ಕಂಪನಿ ಸೇರಿದಂತೆ ಜಾಗತಿಕ ಇವಿ ತಯಾರಿಕರಿಂದ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಎಲೆಕ್ಟ್ರಿಕ್ ವಾಹನ (ಇವಿ) ನೀತಿಗಳಿಗೆ ಅನುಮೋದನೆ ನೀಡಿದೆ. ಇದೀಗ ಭಾರತದಲ್ಲಿನ ಟೆಸ್ಲಾ ಪ್ರೇಮಿಗಳು ಎಲೋನ್ ಮಸ್ಕ್ ಅವರ ಮೊದಲ ಪ್ರತಿಕ್ರಿಯೆಗೆ ಕಾತರರಾಗಿದ್ದಾರೆ.
2015ರಲ್ಲಿ ಕ್ಯಾಲಿಫೋರ್ನಿಯದ ಪಲೊ ಆಲ್ಟೊದ ಟೆಸ್ಲಾ ಮುಖ್ಯ ಕಚೇರಿಗೆ ಪ್ರಧಾನಿ ಮೋದಿ ಅವರು ಭೇಟಿ ನೀಡಿದ್ದರು. ಈ ವೇಳೆ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಘಟಕ ಸ್ಥಾಪನೆ ಕುರಿತು ಚರ್ಚೆ ನಡೆಸಲಾಗಿತ್ತು. ಈ ವೇಳೆ, ವಿಶ್ವದ ಬಿಲಿಯನೇರ್ ಭಾರತದಲ್ಲಿ ಟೆಸ್ಲಾ ಕಾರಿನ ಘಟಕ ಆರಂಭಕ್ಕೆ ಕಸ್ಟಮ್ಸ್ ಸುಂಕ ಕಡಿಮೆ ಮಾಡುವಂತೆ ಕೋರಿದ್ದರು.
ಸದ್ಯ ಕಾರಿನ ಮೇಲಿನ ಕಸ್ಟಮ್ಸ್ ಸುಂಕವೂ ಸಂಪೂರ್ಣವಾಗಿ ನಿರ್ಮಿಸಿದ ಘಟಕಗಳಿಂದ ಆಮದು ಮಾಡಿಕೊಳ್ಳುವ ಕಾರಿನ ವೆಚ್ಚದ ಆಧಾರದ ಮೇಲೆ 60 - 100ರಷ್ಟು ಬದಲಾವಣೆ ಆಗಿದೆ. ಇದೀಗ ಹೊಸ ನೀತಿ ಅನುಸಾರ, ಕೆಲವು ನಿರ್ದಿಷ್ಟ ನಿಯಮಗಳ ಅನ್ವಯ ಸರ್ಕಾರ ಈ ಕಸ್ಟಮ್ಸ್ ಸುಂಕವನ್ನು ಶೇ 15ಕ್ಕೆ ಇಳಿಸಿದೆ
ದೇಶದಲ್ಲಿ ಸಂಪೂರ್ಣ ಘಟಕದಲ್ಲಿ ನಿರ್ಮಿತವಾದ ಕಾರಿನ ಮೇಲೆ ಕಸ್ಟಮ್ಸ್ ಸುಂಕವನ್ನು ಶೇ 15ರಷ್ಟು ಇಳಿಸಿದೆ. ಈ ಘಟಕಗಳ ಸಂಸ್ಥೆಗಳು 35 ಸಾವಿರ ಡಾಲರ್ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಾಹನಗಳು ಈ ಸುಂಕಕ್ಕೆ ಒಳಪಟ್ಟಿದೆ. ಇವು ಭಾರತದಲ್ಲಿ ತಯಾರಿಕೆಗೆ ಕನಿಷ್ಠ 3 ವರ್ಷದೊಳಗೆ ಮುಂದಾಗಬೇಕು.
ಈ ನಿಯಮದ ಮೂಲಕ ಭಾರತದ ಮಾರುಕಟ್ಟೆಗೆ ಮಸ್ಕ್ ಹಾದಿಯನ್ನು ಸುಗಮಗೊಳಿಸಿದೆ. ಕಳೆದ ವರ್ಷ ಪ್ರಧಾನಿ ಮೋದಿ ಅಮೆರಿಕದಲ್ಲಿ ಮಸ್ಕ್ ಭೇಟಿಯಾಗಿ ಹಲವು ವಲಯಗಳಲ್ಲಿ ತಮ್ಮ ತಂತ್ರಜ್ಞಾನದ ಲಭ್ಯತೆ ಮತ್ತು ವೆಚ್ಚದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರಧಾನಿ ಮೋದಿ ಇದೇ ವೇಳೆ ಮಸ್ಕ್ಗೆ ಭಾರತದಲ್ಲಿ ಅವಕಾಶ ಅನ್ವೇಷಣೆ ಮತ್ತು ಇವಿ ವಾಹನಗಳ ಹೂಡಿಕೆಗೆ ಆಹ್ವಾನಿಸಿದ್ದರು.
ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯಂತೆ ಟೆಸ್ಲಾ ಸಿಇಒ ಕೂಡ ಎಲೆಕ್ಟ್ರಿಕ್ ವಾಹನ ಮತ್ತು ಬ್ಯಾಟರಿ ಕಂಪನಿಗಳ ಘಟಕಗಳನ್ನು ಭಾರತದಲ್ಲಿ ಸ್ಥಾಪಿಸುವ ಕುರಿತು ಘೋಷಣೆ ಮಾಡಿದ್ದರು. ಹೊಸ ಇವಿ ಯೋಜನೆಯಲ್ಲಿ ಸರ್ಕಾರ ಉಲ್ಲೇಖಿಸಿರುವಂತೆ, ದೇಶಿಯ ಉತ್ಪಾದನಾ ಸೌಲಭ್ಯವನ್ನು ನಿರ್ಮಿಸಲು ಕನಿಷ್ಠ 4150 ಕೋಟಿ ಹೂಡಿಕೆ ಆಗಿದೆ. ಇವು ಸ್ಥಳೀಯವಾಗಿ ಉತ್ಪಾದನೆ ಸೌಲಭ್ಯವನ್ನು ಮೂರು ವರ್ಷದಲ್ಲಿ ಆರಂಭಿಸಿದಲ್ಲಿ ಇದು 25ರಷ್ಟು ಡಿವಿಎ ತಲುಪುತ್ತದೆ. ಗರಿಷ್ಠ 5 ವರ್ಷದೊಳಗೆ ಆದಲ್ಲಿ ಡಿವಿಎ 50ರಷ್ಟು ಆಗಲಿದೆ. (ಐಎಎನ್ಎಸ್)
ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನ ಉದ್ಯಮದ ಸಬ್ಸಿಡಿ ಪ್ರೇರಿತ ಬೆಳವಣಿಗೆ; ಭಾರತದ ಮುಂದಿನ ದಾರಿಯೇನು?