ಬೆಂಗಳೂರು :ಯಾವುದೇ ಶುಭ ಸಮಾರಂಭಕ್ಕೆ ಚಿನ್ನಕ್ಕೆ ಅದರದ್ದೇ ಆದ ಮಹತ್ವವಿದೆ. ಪ್ರತಿಯೊಬ್ಬರ ಮನೆಯಲ್ಲೂ ಚಿನ್ನದ ಸಂಗ್ರಹಣೆಗೆ ಮಹತ್ವವನ್ನು ನೀಡಿಯೇ ಇರುತ್ತಾರೆ. ಮಾರುಕಟ್ಟೆಯಲ್ಲಿ ನಿತ್ಯವೂ ಚಿನ್ನದ ಬೆಲೆಯಲ್ಲಿ ಏರಿಳಿಕೆಯಾಗುವುದು ಸಾಮಾನ್ಯ. ಈ ನಿಟ್ಟಿನಲ್ಲಿ ಇಂದು ಬೆಂಗಳೂರಿನಲ್ಲಿರುವ ಚಿನ್ನದ ದರವನ್ನು ತಿಳಿಯೋಣ.
22 ಕ್ಯಾರೆಟ್ ಬಂಗಾರದ ವಿವರ:ಬೆಂಗಳೂರಿನಲ್ಲಿ ನಿನ್ನೆ 22 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನಕ್ಕೆ ₹ 6,675 ಇತ್ತು. ಇಂದು ₹ 40 ರೂ ಏರಿಕೆಯಾಗುವ ಮೂಲಕ ಪ್ರತಿ ಗ್ರಾಂ ಚಿನ್ನಕ್ಕೆ ₹ 6,715 ಕ್ಕೆ ತಲುಪಿದೆ. ಅದೇ ರೀತಿ ನಿನ್ನೆ 8 ಗ್ರಾಂ ಚಿನ್ನಕ್ಕೆ ₹ 53,400 ಇತ್ತು. ಇಂದು ₹ 320 ರೂ ಏರಿಕೆಯಾಗುವ ಮೂಲಕ ₹ 53,720 ಕ್ಕೆ ತಲುಪಿದೆ. 10 ಗ್ರಾಂಗೆ ನಿನ್ನೆ ₹ 66,750 ದರ ನಿಗದಿಯಾಗಿತ್ತು. ಇಂದು ₹ 400 ಏರಿಕೆಯಾಗುವ ಮೂಲಕ ₹ 67,150ಕ್ಕೆ ತಲುಪಿದೆ. ಇನ್ನು ನಿನ್ನೆಗೆ ಹೋಲಿಸಿದರೆ ₹ 4000 ಏರಿಕೆಯಾಗುವ ಮೂಲಕ 100 ಗ್ರಾಂ ಚಿನ್ನದ ದರ 6,71,500ಗೆ ತಲುಪಿದೆ.
24 ಕ್ಯಾರೆಟ್ ಗೋಲ್ಡ್:ಅದೇ ರೀತಿ 24 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನಕ್ಕೆ ನಿನ್ನೆ ₹ 7,282 ದರ ನಿಗದಿಯಾಗಿತ್ತು. ಇಂದು ₹ 43 ಏರಿಕೆಯಾಗುವ ಮೂಲಕ ₹ 7,325 ಕ್ಕೆ ತಲುಪಿದೆ. 8 ಗ್ರಾಂಗೆ ನಿನ್ನೆ ₹ 58,256 ಇತ್ತು. ಇಂದು ₹ 344 ಏರಿಕೆಯಾಗುವ ಮೂಲಕ ₹ 58, 600 ಕ್ಕೆ ತಲುಪಿದೆ. 10 ಗ್ರಾಂ ಚಿನ್ನಕ್ಕೆ ಇಂದು ₹ 73,250 ಇದೆ. ನಿನ್ನೆಗಿಂತ ₹ 430 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನಕ್ಕೆ ಇಂದು ₹4300 ಏರಿಕೆಯಾಗುವ ಮೂಲಕ ₹ 7,32,500 ಕ್ಕೆ ತಲುಪಿದೆ. ನಿನ್ನೆ ₹ 7,28,200 ದರ ನಿಗದಿಯಾಗಿತ್ತು.
18 ಕ್ಯಾರೆಟ್ ಬಂಗಾರದ ದರ ಎಷ್ಟು?:18 ಕ್ಯಾರೆಟ್ ಚಿನ್ನದ ಬೆಲೆಯನ್ನು ಗಮನಿಸುವುದಾದರೆ, ನಿನ್ನೆ ಪ್ರತಿ ಗ್ರಾಂಗೆ ₹ 5,462 ಇತ್ತು. ಇಂದು ₹ 32 ಏರಿಕೆಯಾಗುವ ಮೂಲಕ ₹ 5,494ಕ್ಕೆ ತಲುಪಿದೆ. 8 ಗ್ರಾಂ ಚಿನ್ನಕ್ಕೆ ನಿನ್ನೆ ₹ 43,696 ಇದ್ದರೆ ಇಂದು ₹ 256 ಏರಿಕೆಯಾಗುವ ಮೂಲಕ ₹ 43,952ಕ್ಕೆ ತಲುಪಿದೆ. 10 ಗ್ರಾಂಗೆ ನಿನ್ನೆಗೆ ಹೋಲಿಸಿದ್ರೆ ₹ 320 ಏರಿಕೆಯಾಗುವ ಮೂಲಕ ಇಂದು ₹ 54,940 ಕ್ಕೆ ತಲುಪಿದೆ. 100 ಗ್ರಾಂ ಚಿನ್ನ ಇಂದು ₹ 5,49,400 ಕ್ಕೆ ತಲುಪಿದೆ. ನಿನ್ನೆಗಿಂತ ₹ 3,200 ಏರಿಕೆಯಾಗಿದೆ.