ಹೈದರಾಬಾದ್:ಈಗಾಗಲೇ 10 ಗ್ರಾಂ ಚಿನ್ನದ ಬೆಲೆ 64,500 ರೂ.ಗೆ ತಲುಪಿದೆ. ಆದರೆ ಈ ವರ್ಷ 70,000 ರೂ.ಗೆ ಏರಬಹುದು ಎಂದು ಡೀಲರ್‌ಗಳು, ಆಭರಣ ವ್ಯಾಪಾರಿಗಳು ಮತ್ತು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಅಮೆರಿಕದ ಫೆಡರಲ್ ರಿಸರ್ವ್‌ನ ನಿಷ್ಠುರ ನಿಲುವು ಮತ್ತು ಮುಗಿಯದ ಭೌಗೋಳಿಕ ರಾಜಕೀಯ ಒತ್ತಡಗಳು ಮತ್ತು ಊಹಾತ್ಮಕ ಖರೀದಿಯ ಹಿನ್ನೆಲೆಯಲ್ಲಿ ಬಂಗಾರದ ಬೆಲೆ ಮೇಲಕ್ಕೇರುವ ಸಾಧ್ಯತೆಗಳು ಗೋಚರಿಸಿವೆ.
ರಿದ್ದಿಸಿದ್ಧಿ ಬುಲಿಯನ್ಸ್ ಲಿಮಿಟೆಡ್‌ನ (RSBL) ವ್ಯವಸ್ಥಾಪಕ ನಿರ್ದೇಶಕ ಪೃಥ್ವಿರಾಜ್ ಕೊಠಾರಿ ಈ ಕುರಿತು ಮಾತನಾಡಿ, "ಚಿನ್ನ ದೇಶೀಯವಾಗಿ ಸಾರ್ವಕಾಲಿಕ ಹೆಚ್ಚಿನ ಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ. ಕಳೆದೆರಡು ವಹಿವಾಟಿನ ದಿನಗಳಲ್ಲಿ ಚಿನ್ನದ ಬೆಲೆ ಸುಮಾರು 70 ಡಾಲರ್‌ಗೆ ಏರಿಕೆಯಾಗಿದೆ. 2,000 ಡಾಲರ್‌ನಿಂದ 2060 ಡಾಲರ್ ಶ್ರೇಣಿ ತಲುಪಿದೆ. ಜನವರಿ ಮತ್ತು ಫೆಬ್ರುವರಿಯಲ್ಲಿ ನ್ಯೂಯಾರ್ಕ್ ಕಮ್ಯುನಿಟಿ ಬ್ಯಾನ್‌ಕಾರ್ಪ್ (NYCB) ಷೇರುಗಳು ಕಳೆದ ವಾರ ಕುಸಿದು, ಅಮೆರಿಕದಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟು 2.0 ಊಹಾಪೋಹಗಳಿಗೆ ಕಾರಣವಾಯಿತು" ಎಂದು ತಿಳಿಸಿದ್ದಾರೆ.
ಚಿನ್ನದತ್ತ ಹೂಡಿಕೆದಾರರ ಒಲವು:"ಈ ವಾರ ನಾವು ಫಾಲೋ-ಥ್ರೂ ಖರೀದಿಯನ್ನು ನೋಡುತ್ತಿದ್ದೇವೆ. ಹೂಡಿಕೆದಾರರು (FOMO) ನಿರ್ದಿಷ್ಟ ಅಸ್ತಿತ್ವ ಕಳೆದುಕೊಳ್ಳುವ ಭಯದಿಂದ ಚಿನ್ನದ ಮಾರುಕಟ್ಟೆಗೆ ಜಿಗಿಯುತ್ತಿದ್ದಾರೆ. ಫೆಡರಲ್ ರಿಸರ್ವ್‌ನ ನಿಷ್ಠುರ ನಿಲುವು, ಮುಂದುವರಿದ ಭೌಗೋಳಿಕ ರಾಜಕೀಯ ಒತ್ತಡಗಳು ಮತ್ತು ಬಲವಾದ ಊಹಾತ್ಮಕ ಮತ್ತು ಹೂಡಿಕೆ ಬೇಡಿಕೆಯು ಬೆಲೆ ಹೆಚ್ಚಳಕ್ಕೆ ಪೂರಕವಾದ ಇತರ ಅಂಶಗಳಾಗಿವೆ. ರೂಪಾಯಿ ಮೌಲ್ಯ ಕುಸಿತದಿಂದಾಗಿಯೂ ಚಿನ್ನ ಭಾರತದಲ್ಲಿ ದಾಖಲೆಯ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಈ ಬೆಲೆಗಳು ಅಲ್ಪಾವಧಿಯಲ್ಲಿ 2,150 ಡಾಲರ್‌ವರೆಗೆ (65,500 ರೂ.) ತಮ್ಮ ಓಟದ ವೇಗ ಮುಂದುವರಿಸುವ ನಿರೀಕ್ಷೆಯಿದೆ. 2024ರ ವರ್ಷದಲ್ಲಿ ದೀರ್ಘಾವಧಿಯ ಮಾರುಕಟ್ಟೆ ವಿದ್ಯಮಾನವು ಇನ್ನೂ 2,300 ಡಾಲರ್ (70,000 ರೂ.) ಗುರಿ ತಲುಪುವ ಸಾಧ್ಯತೆಯಿದೆ" ಎಂದು ಕೊಠಾರಿ ವಿವರಿಸಿದರು.