ಹೈದರಾಬಾದ್:ವಿವಾಹ ಕಾರ್ಯಕ್ರಮಗಳು ಮತ್ತು ಅತಿ ಹೆಚ್ಚು ಖರೀದಿಯಿಂದಾಗಿ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದವು. ಇದೀಗ ಹಳದಿ ಲೋಹದ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ 1 ಸಾವಿರ ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ ರಾಜ್ಯದಲ್ಲಿ 73,490 ರೂಪಾಯಿಗೆ ಬಿಕರಿಯಾಗುತ್ತಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ ಯಾವುದೇ ಇಳಿಕೆಯಾಗದೇ ಸದ್ಯ 100 ರೂ. ಹೆಚ್ಚಳದೊಂದಿಗೆ ಅದು 95,600 ರೂಪಾಯಿಗೆ ವಹಿವಾಟು ನಡೆಸುತ್ತಿದೆ.
ಚಿನ್ನದ ದರ, ಮೇ 23, 2024
ಬೆಂಗಳೂರಿನಲ್ಲಿ24 ಕ್ಯಾರೆಟ್ನ ಚಿನ್ನದ ದರ 73,420 ರೂ., ಬೆಳ್ಳಿ 95,600 ರೂಪಾಯಿ
ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಆಭರಣ ಚಿನ್ನದ ದರ 67,300 ರೂಪಾಯಿ, ಇದೇ ನಿನ್ನೆ 68 300ಕ್ಕೂ ಹೆಚ್ಚಿತ್ತು
ಬೆಳಗಾವಿಯಲ್ಲಿ24 ಕ್ಯಾರೆಟ್ನ ಚಿನ್ನದ ದರ 73,420 ರೂ., ಬೆಳ್ಳಿ 95,600 ರೂಪಾಯಿ
ಬಳ್ಳಾರಿಯಲ್ಲಿ24 ಕ್ಯಾರೆಟ್ನ ಚಿನ್ನದ ದರ 73,420 ರೂ., ಬೆಳ್ಳಿ 95,600 ರೂಪಾಯಿ
ಮಂಗಳೂರಿನಲ್ಲಿ24 ಕ್ಯಾರೆಟ್ನ ಚಿನ್ನದ ದರ 73,420 ರೂ., ಬೆಳ್ಳಿ 95,600 ರೂಪಾಯಿ
ಮೈಸೂರಿನಲ್ಲಿ24 ಕ್ಯಾರೆಟ್ನ ಚಿನ್ನದ ದರ 73,420 ರೂ., ಬೆಳ್ಳಿ 95,600 ರೂಪಾಯಿ
ಗಮನಿಸಿ:ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಇರುವಂಥದ್ದು. ಚಿನ್ನ ಮತ್ತು ಬೆಳ್ಳಿ ದರಗಳು ಬದಲಾಗುತ್ತವೆ.
ಸ್ಪಾಟ್ ಗೋಲ್ಡ್ ಬೆಲೆ ಇಂದು:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿಯ ದರಗಳು ಕಡಿಮೆಯಾಗಿವೆ. ಒಂದು ಔನ್ಸ್ ಚಿನ್ನದ ಬೆಲೆ 40 ಡಾಲರ್‌ಗಳಷ್ಟು ಇಳಿಕೆಯಾಗಿ 2,369 ಡಾಲರ್‌ಗಳಿಗೆ ತಲುಪಿದೆ. ಒಂದು ಔನ್ಸ್ ಬೆಳ್ಳಿಯ ಬೆಲೆ 30.74 ಡಾಲರ್ ಇದೆ.
ಕ್ರಿಪ್ಟೋಕರೆನ್ಸಿ ಬೆಲೆಗಳು ಹೇಗಿವೆ?:ಡಿಜಿಟಲ್ ಹಣವಾಗಿರುವ ಕ್ರಿಪ್ಟೋ ಕರೆನ್ಸಿ ವಹಿವಾಟು ಭಾರೀ ನಷ್ಟವನ್ನು ಅನುಭವಿಸುತ್ತಿದೆ. ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಇಂದಿನ ಮೌಲ್ಯ ಹೀಗಿದೆ. ಬಿಟ್‌ಕಾಯಿನ್ 50,65,275 ರೂಪಾಯಿ, ಎಥೆರಿಯಮ್ 2,86,000 ರೂಪಾಯಿ, ಟೆಥರ್ 79.16 ರೂಪಾಯಿ, ಬೈನಾನ್ಸ್ ನಾಣ್ಯ 46,200 ರೂಪಾಯಿ, ಸೋಲೋನಾ 13,550 ರೂಪಾಯಿಗೆ ಬಿಕರಿಯಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು:ಬೆಂಗಳೂರಿನಲ್ಲಿ ಲೀಟರ್ ಡೀಸೆಲ್ ಬೆಲೆ 85.93 ರೂ., ಪೆಟ್ರೋಲ್ ಬೆಲೆ 99.84 ರೂಪಾಯಿ., ಹೈದರಾಬಾದ್ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.39 ರೂ., ಡೀಸೆಲ್ ಬೆಲೆ 95.63 ರೂ., ವಿಶಾಖಪಟ್ಟಣಂನಲ್ಲಿ ಲೀಟರ್ ಪೆಟ್ರೋಲ್ ಬೆಲೆ 108.27 ರೂ., ಡೀಸೆಲ್ ಬೆಲೆ 96.16 ರೂ., ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ.94.76 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ.87.66 ಆಗಿದೆ.
ಇಂದಿನ ಸ್ಟಾಕ್ ಮಾರುಕಟ್ಟೆ ಅಪ್ಡೇಟ್ಸ್:ದೇಶೀಯ ಷೇರು ಮಾರುಕಟ್ಟೆಯು ಆರಂಭದಲ್ಲಿ ಹಿನ್ನಡೆ ಕಂಡರೂ, ಬಳಿಕ ಚೇತರಿಸಿಕೊಂಡು ಭಾರೀ ಅಂಕ ಸಂಪಾದಿಸಿದೆ. ಸೆನ್ಸೆಕ್ಸ್ 1196.98 ಅಂಕಗಳ ಏರಿಕೆಯೊಂದಿಗೆ 775,418.98ರಲ್ಲಿ ವಹಿವಾಟು ಮುಗಿಸಿದೆ. ನಿಫ್ಟಿ ಸೂಚ್ಯಂಕವು ಹಿಂದೆಂದಿಗಿಂತಲೂ ದಾಖಲಿಸದ ರೀತಿಯಲ್ಲಿ ಏರಿಕೆ ಕಂಡಿದ್ದು, 369.85 ಅಂಕ ಏರಿಕೆಯಾಗಿ 22967.65 ಕ್ಕೆ ಬಂದು ತಲುಪಿದೆ.